ಮೈಸೂರು ಮೃಗಾಲಯದ ಬಿಳಿಹುಲಿ ರಾಜನ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಮೈಸೂರು ಮೃಗಾಲಯದ ಬಿಳಿಹುಲಿ ರಾಜನ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಎಂ.ಎಸ್.ಭಾಸ್ಕರ್ ನೇತೃತ್ವದಲ್ಲಿ ವಿಶ್ವದ ಮೊಟ್ಟ ಮೊದಲ ಸ್ಪೈನಲ್ ಕಾರ್ಡ್ ಶಸ್ತ್ರಚಿಕಿತ್ಸೆ
ಮೈಸೂರು ಮೃಗಾಲಯದಲ್ಲಿ ನ ಅತ್ಯಪರೂಪದ ಬಿಳಿಹುಲಿ ರಾಜನ್‌ನ ಸ್ಪೈನಲ್ ಕಾರ್ಡ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ವಿಶ್ವದಲ್ಲಿ ಸ್ಪೈನಲ್ ಕಾರ್ಡ್ ಶಸ್ತ್ರಚಿಕಿತ್ಸೆ ನಡೆಯುತ್ತಿರುವುದು ಇದೇ ಮೊದಲು. ಶಸ್ತ್ರಚಿಕಿತ್ಸೆ ಸುಮಾರು ಮೂರು ತಾಸುಗಳ ಕಾಲ ನಡೆಯಿತು ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿದೇಶಕ ಡಾ.ಕುಮಾರ್ ಪುಷ್ಕರ್ ತಿಳಿಸಿದ್ದಾರೆ.
ಅತ್ಯಂತ ಸೂಕ್ಷ್ಮ ಹಾಗೂ ಅಪಾಯದಿಂದ ಕೂಡಿರುವ ಶಸ್ತ್ರಚಿಕಿತ್ಸೆಯ ನೇತೃತ್ವವನ್ನು ನ್ಯೂರೋ ಸರ್ಜನ್ ಎಂ.ಎಸ್.ಭಾಸ್ಕರ್ ವಹಿಸಿದ್ದರು. ಹಿರಿಯ ಸರ್ಜನ್ ಷಡಕ್ಷರ ಮೂರ್ತಿ ಶಸ್ತ್ರಚಿಕಿತ್ಸೆಗೆ ಸಹಕರಿಸಿದರು. ಶಸ್ತ್ರಚಿಕಿತ್ಸೆಯಲ್ಲಿ ಸ್ಪೈನಲ್ ಕಾರ್ಡ್‌ನ ಮೂಳೆಯನ್ನು ಕುಗ್ಗಿಸಲಾಗಿದೆ ಎಂದು ಡಾ.ಪುಷ್ಕರ್ ತಿಳಿಸಿದರು.
ಮೈಸೂರಿನ ವಿಕ್ರಂ ಆಸ್ಪತ್ರೆಯಲ್ಲಿ ಬಿಳಿ ಹುಲಿ ರಾಜನ್‌ನನ್ನು ಸಿಟಿ ಸ್ಕ್ಯಾನಿಂಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು .
(ಪಿಟಿಐ)
ವಾರ್ತಾ ಸಂಚಯ
ಬೆನ್ನುಮೂಳೆ ಶಸ್ತ್ರಚಿಕಿತ್ಸೆ ನಿರೀಕ್ಷೆಯಲ್ಲಿ ಮೈಸೂರಿನ ಬಿಳಿಹುಲಿ ರಾಜನ್
ಮುಖಪುಟ / ವಾರ್ತೆಗಳು












Click it and Unblock the Notifications