ಲೇಖಕಿಯರಸಂಘದ ಬೆಳ್ಳಿಹಬ್ಬ ಸಂಭ್ರಮಕ್ಕೆ ಲೇಖಕಿ.ಕಾಂ ಮೆರುಗು
ಲೇಖಕಿಯರಸಂಘದ ಬೆಳ್ಳಿಹಬ್ಬ ಸಂಭ್ರಮಕ್ಕೆ ಲೇಖಕಿ.ಕಾಂ ಮೆರುಗು
ಶೇಷಗಿರಿರಾವ್, ನಾರಾಯಣ, ಶ್ರೀನಿವಾಸರಾಜು ಮುಂತಾದ ಗಣ್ಯರಿಗೆ ಸನ್ಮಾನ
ಸಾಹಿತ್ಯದಿಂದ ಸಮಾಜ ಸುಧಾರಣೆ ಸಾಧ್ಯವೇ ಎಂದು ಚಿಂತಿಸುವ ಮೂಲಕ ಲೇಖಕಿಯರು ಸಾಹಿತ್ಯ ರಚನೆಯಲ್ಲಿ ತೊಡಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಿ.ನಾರಾಯಣ ಹೇಳಿದರು. ಅವರು ಲೇಖಕಿಯರ ಸಂಘದ ಬೆಳ್ಳಿಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ (ಜ.26) ಮಾತನಾಡಿದರು.
ವರದಕ್ಷಿಣೆಯನ್ನು ನಿರ್ಮೂಲನೆ ಮಾಡುವ, ಕೆಳಸ್ತರದವರನ್ನು ಮೇಲೆತ್ತುವ ಹಾಗೂ ಎಲ್ಲ ಹಂತಗಳಲ್ಲಿಯೂ ಭ್ರಷ್ಟಾಚಾರವನ್ನು ನಾಶಗೊಳಿಸುವ ಕಾರ್ಯದಲ್ಲಿ ಮಹಿಳೆಯರೂ ತೊಡಗಬೇಕಿದೆ. ಈ ನಿಟ್ಟಿನಲ್ಲಿ ಲೇಖಕಿಯರ ಪಾತ್ರ ಮಹತ್ವವಾದುದು ಎಂದು ನಾರಾಯಣ ಅಭಿಪ್ರಾಯಪಟ್ಟರು. ಪುಟ್ಟ ಮಕ್ಕಳ ಮೇಲಿರುವ ಓದಿನ ಹೊರೆಯನ್ನು ತಪ್ಪಿಸಬೇಕೆಂದು ನಾರಾಯಣ ಸರ್ಕಾರವನ್ನು ಕೋರಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ www.lekhaki.com ವೆಬ್‌ಸೈಟ್ ಅನಾವರಣಗೊಳಿಸಿದರು. ಲೇಖಕಿಯರ ಸಂಘಕ್ಕೆ ಸರ್ಕಾರದಿಂದ ನೆರವು ಒದಗಿಸುವ ಕುರಿತು ಸಚಿವೆ ಆಶ್ವಾಸನೆ ನೀಡಿದರು.
ಹಿರಿಯ ಲೇಖಕ ಪ್ರೊ.ಜಿ.ವೆಂಕಟಸುಬ್ಬಯ್ಯ ಲೇಖಕಿಯರ ಸಂಘದ ಬೆಳ್ಳಿಹಬ್ಬದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಮೂಡಬಿದರೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಡಾ.ಕಮಲಾ ಹಂಪನಾ, ಲೇಖಕಿಯರ ಸಂಘದ ಉಷಾ ಪಿ.ರೈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ , ಲೇಖಕಿಯರ ಸಂಘದ ಅಭಿವೃದ್ಧಿಗಾಗಿ ಶ್ರಮಿಸಿದ ಜಿ.ನಾರಾಯಣ, ಎಲ್.ಎಸ್.ಶೇಷಗಿರಿರಾವ್, ಚಿ.ಶ್ರೀನಿವಾಸರಾಜು, ಡಾ.ವಿಜಯಾ, ಟಿ.ಸುನಂದಮ್ಮ , ಎಚ್.ಎಸ್.ಪಾರ್ವತಿ, ಹೇಮಲತಾ ಮಹಿಷಿ, ನಾಗಮಣಿ ಎಸ್.ರಾವ್, ಶಶಿಕಲಾ ವೀರಯ್ಯ ವೀರಯ್ಯಸ್ವಾಮಿ, ಉಷಾ ರೈ ಅವರನ್ನು ಸನ್ಮಾನಿಸಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications