ವರ್ಣರಂಜಿತ ಗಣರಾಜ್ಯೋತ್ಸವ : ಪೆರೇಡ್‌ಗೆ ‘ಅಗ್ನಿ-2’ ಮೆರುಗು
ವರ್ಣರಂಜಿತ ಗಣರಾಜ್ಯೋತ್ಸವ : ಪೆರೇಡ್‌ಗೆ ‘ಅಗ್ನಿ-2’ ಮೆರುಗು
ದೆಹಲಿಯಲ್ಲಿ ವರ್ಣರಂಜಿತ ಪೆರೇಡ್, ಚೀನಾ-ಆಸ್ಟ್ರೇಲಿಯಾದಲ್ಲೂ ಜನಗಣಮನ
ಮೇಜರ್ ಜನರಲ್ ಥಾಮಸ್ ಮ್ಯಾಥ್ಯೂ ಅವರ ನೇತೃತ್ವದಲ್ಲಿ ನಡೆದ ಪೇರೆಡ್‌ನಲ್ಲಿ ಭೂದಳ, ನೌಕಾದಳ ಹಾಗೂ ವಾಯುದಳಗಳು ಭಾಗವಹಿಸಿದ್ದವು. ಇದೇ ಮೊದಲ ಬಾರಿಗೆ ಅಗ್ನಿ-2 ದೂರಗಾಮಿ ಕ್ಷಿಪಣಿ, ಪೈಲಟ್‌ರಹಿತ ವಿಮಾನ, ಲಘು ಹೆಲಿಕ್ಯಾಪ್ಟರ್ ಮುಂತಾದವನ್ನು ಪ್ರದರ್ಶಿಸಲಾಯಿತು.
ವಿವಿಧ ಸಂದರ್ಭಗಳಲ್ಲಿ ಶೌರ್ಯ ಮೆರೆದ ಹತ್ತು ಸೈನಿಕರಿಗೆ ಪರಮವೀರ ಚಕ್ರ, ಐವರಿಗೆ ಅಶೋಕ ಚಕ್ರ ಮತ್ತು ಓರ್ವರಿಗೆ ವೀರ ಚಕ್ರ ಪ್ರಶಸ್ತಿಗಳನ್ನು ರಾಷ್ಟ್ರಪತಿ ಕಲಾಂ ಪ್ರದಾನ ಮಾಡಿದರು.
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕರಿಗೆ ಪ್ರಧಾನಿ ವಾಜಪೇಯಿ ಅವರು ಇಂಡಿಯಾಗೇಟ್‌ನಲ್ಲಿ ನಡೆದ ಸಮಾರಂಭದಲ್ಲಿ ಸ್ಮರಿಸಿದರು.
ಆಸ್ಟ್ರೇಲಿಯಾದಲ್ಲಿ ಕೇಸರಿ ಬಿಳಿ ಹಸಿರು : ಕ್ಯಾನ್‌ಬೆರ್ರಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯೆದುರು ಮತ್ತು ಸಿಡ್ನಿಯಲ್ಲಿನ ರಾಜತಾಂತ್ರಿಕ ಕಚೇರಿಯಲ್ಲಿ ಆಸ್ಟ್ರೇಲಿಯಾದ ಭಾರತೀಯರು ಸೋಮವಾರ ಗಣರಾಜ್ಯೋತ್ಸವ ಆಚರಿಸಿದರು. ಮೆಲ್ಬೋರ್ನ್, ಬ್ರಿಸ್ಬೇನ್, ಪರ್ತ್‌ನಲ್ಲೂ ಭಾರತದ ಧ್ವಜ ಹಾರಿಸಲಾಯಿತು. ಸಿಡ್ನಿಯಲ್ಲಿ 500ಕ್ಕೂ ಹೆಚ್ಚು ಭಾರತೀಯರು ಗಣರಾಜ್ಯೋತ್ಸವ ಸಂಭ್ರಮದಲ್ಲಿ ಭಾಗವಹಿಸಿದ್ದರು.
ಆಸ್ಟ್ರೇಲಿಯಾದ ವಿವಿಧ ಭಾಗಗಳಲ್ಲಿನ ಭಾರತೀಯರು ಸಾಂಸ್ಕೃತಿಕ ಕಾರ್ಯಕ್ರಮಗಳು, ಧ್ವಜಾರೋಹಣ, ರಾಷ್ಟ್ರಭಕ್ತಿ ಗೀತೆಗಳ ಗಾಯನ, ಪ್ರದರ್ಶನ ಮುಂತಾದ ಕಾರ್ಯಕ್ರಮಳನ್ನು ಗಣರಾಜ್ಯೋತ್ಸವದ ಅಂಗವಾಗಿ ನಡೆಸಿದ್ದಾರೆ.
ಚೀನಾದಲ್ಲೂ ಜನ ಗಣ ಮನ : 55ನೇ ಗಣರಾಜ್ಯೋತ್ಸವದ ಆಚರಣೆಯನ್ನು ಚೀನಾದ ವಿವಿಧ ಭಾಗಗಳಲ್ಲಿನ ಭಾರತೀಯರು ಸೋಮವಾರ ಆಚರಿಸಿದರು. ಚೀನಾದ ರಾಜಧಾನಿ ಬೀಜಿಂಗ್, ಷಾಂಘೖ ಹಾಗೂ ಹಾಂಗ್‌ಕಾಂಗ್‌ಗಳಿಂದ ಗಣರಾಜ್ಯೋತ್ಸವ ಆಚರಣೆಯ ವರದಿಗಳು ಬಂದಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications