ಡಾ.ದೇವಿಶೆಟ್ಟಿ-ದ್ರಾವಿಡ್‌ ‘ಪದ್ಮಶ್ರೀ’,ಎಂಎನ್‌ವಿಗೆ ‘ವಿಭೂಷಣ’

ಡಾ.ದೇವಿಶೆಟ್ಟಿ-ದ್ರಾವಿಡ್‌ ‘ಪದ್ಮಶ್ರೀ’,ಎಂಎನ್‌ವಿಗೆ ‘ವಿಭೂಷಣ’
ಗಂಗೂಲಿಗೆ ಪದ್ಮಶ್ರೀ, ಯಾರಿಗೂ ದೊರೆಯದ ಭಾರತ ರತ್ನ !

ನವದೆಹಲಿ : ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರದ 95 ಸಾಧಕರನ್ನು ಪದ್ಮ ಪ್ರಶಸ್ತಿಗಳಿಗೆ ಕೇಂದ್ರ ಸರ್ಕಾರ ಆಯ್ಕೆ ಮಾಡಿದ್ದು , ಕನ್ನಡಿಗರಾದ- ನಿವೃತ್ತ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಅವರಿಗೆ ಪದ್ಮ ವಿಭೂಷಣ ಹಾಗೂ ಡಾ.ದೇವಿಪ್ರಸಾದ್‌ ಶೆಟ್ಟಿ ಮತ್ತು ರಾಹುಲ್‌ ದ್ರಾವಿಡ್‌ಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ಪದ್ಮ ವಿಭೂಷಣ ಪ್ರಶಸ್ತಿಗೆ ಮೂವರನ್ನು, 19 ಮಂದಿಯನ್ನು ಪದ್ಮಭೂಷಣ ಪ್ರಶಸ್ತಿಗೆ ಹಾಗೂ 74 ಮಂದಿಯನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಬಾರಿ ಕೂಡ ಭಾರತ ರತ್ನ ಪ್ರಶಸ್ತಿಯನ್ನು ಯಾರಿಗೂ ನೀಡಲಾಗಿಲ್ಲ .

ಖ್ಯಾತ ಖಭೌತ ವಿಜ್ಞಾನಿ ಜಯಂತ್‌ ವಿಷ್ಣು ನಾರ್ಳಿಕರ್‌ ಹಾಗೂ ಪಂಜಾಬಿ ಸಾಹಿತಿ ಅಮೃತಾ ಪ್ರೀತಂ ಅವರು ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರೊಂದಿಗೆ ಪದ್ಮ ವಿಭೂಷಣ ಪ್ರಶಸ್ತಿ ಪಡೆದಿದ್ದಾರೆ.

ರಾಜ್ಯದ ಗೋವಿಂದರಾಜನ್‌ ಪದ್ಮನಾಭನ್‌ (ವಿಜ್ಞಾನ), ಬಿ.ಎಲ್‌.ಶ್ರೀನಿವಾಸಮೂರ್ತಿ (ಸಮಾಜ ಸೇವೆ) ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಖ್ಯಾತ ಪತ್ರಕರ್ತ ಎಂ.ವಿ.ಕಾಮತ್‌ ಹಾಗೂ ಜಪಾನಿನ ಮಾಜಿ ಪ್ರಧಾನಿ ಯಾಷಿರೊ ಮೋರಿ ಅವರಿಗೂ ಪದ್ಮಭೂಷಣ ದೊರೆತಿದೆ.

ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದವರಲ್ಲಿ - ರಾಹುಲ್‌ ದ್ರಾವಿಡ್‌ (ಕ್ರೀಡೆ), ನಳಿನಿ ರಂಜನ್‌ ಮೊಹಾಂತಿ (ವಿಜ್ಞಾನ), ಸ್ಯಾಮುವೆಲ್‌ ಪಾಲ್‌ (ಸಾಹಿತ್ಯ ಮತ್ತು ಶಿಕ್ಷಣ), ಸೈಯದ್‌ ಶಾ ಮೊಹಮ್ಮದ್‌ ಹುಸೇನಿ (ಸಾಹಿತ್ಯ ಮತ್ತು ಶಿಕ್ಷಣ), ತುಮಕೂರು ಸೀತಾರಾಮಯ್ಯ ಪ್ರಹ್ಲಾದ್‌ (ವಿಜ್ಞಾನ), ವಿಶ್ವೇಶ್ವರಯ್ಯ ಪ್ರಕಾಶ್‌ (ವಿಜ್ಞಾನ) ಸೇರಿದ್ದಾರೆ. ಭಾರತ ಕ್ರಿಕೆಟ್‌ ತಂಡದ ನಾಯಕ ಸೌರವ್‌ ಗಂಗೂಲಿ ಹಾಗೂ ಲಾಂಗ್‌ಜಂಪ್‌ ಪ್ರವೀಣೆ ಅಂಜು ಜಾರ್ಜ್‌ ಅವರಿಗೆ ಪದ್ಮಶ್ರೀ ದೊರೆತಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+