ಫೆ.8ರಂದು ಕರ್ನಾಟಕ ವಿಧಾನಸಭೆ ವಿಸರ್ಜನೆ ಸಂಭವ -ಪೂಜಾರಿ
ಫೆ.8ರಂದು ಕರ್ನಾಟಕ ವಿಧಾನಸಭೆ ವಿಸರ್ಜನೆ ಸಂಭವ -ಪೂಜಾರಿ
ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆಗಳ ಒಟ್ಟಾಗಿ ಎದುರಿಸಲು ಕೆಪಿಸಿಸಿ ಒಲವು
ವಿಧಾನಸಭೆ ವಿಸರ್ಜನೆಯ ಕುರಿತು ಜನವರಿ 30ರ ಶುಕ್ರವಾರ ನಡೆಯುವ ಸಚಿವ ಸಂಪುಟದ ಸಭೆ ಔಪಚಾರಿಕ ನಿರ್ಣಯ ಕೈಗೊಳ್ಳಲಿದೆ. ಫೆ.8ರಂದು ವಿಧಾನಸಭೆ ವಿಸರ್ಜನೆಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಭಾನುವಾರ (ಜ.25) ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನ ಪೂಜಾರಿ ಹೇಳಿದರು.
ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು ಫೆಬ್ರವರಿ 5ರಂದು ರಾಜ್ಯ ಬಜೆಟ್ ಮಂಡಿಸುವರು. ಆಯವ್ಯಯ ಮಂಡನೆಯ ನಂತರವೇ ವಿಧಾನಸಭೆ ವಿಸರ್ಜನೆಯ ತೀರ್ಮಾನ ಕೈಗೊಳ್ಳಲಾಗುವುದು ಎಂದೂ ಪೂಜಾರಿ ಹೇಳಿದರು.
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ಎದುರಿಸಲು ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ. ಚುನಾವಣೆಯಲ್ಲಿ ನೆರವಾಗಲು ವಿವಿಧ ಸಮಿತಿಗಳನ್ನು ಪಕ್ಷದಲ್ಲಿ ರಚಿಸಲಾಗಿದೆ ಎಂದ ಜನಾರ್ಧನ ಪೂಜಾರಿ- ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷವು ಮೂರನೇ ಎರಡರಷ್ಟು ಬಹುಮತ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications