ಬೆನ್ನುಮೂಳೆ ಶಸ್ತ್ರಚಿಕಿತ್ಸೆ ನಿರೀಕ್ಷೆಯಲ್ಲಿ ಮೈಸೂರಿನ ಬಿಳಿಹುಲಿ ರಾಜನ್
ಬೆನ್ನುಮೂಳೆ ಶಸ್ತ್ರಚಿಕಿತ್ಸೆ ನಿರೀಕ್ಷೆಯಲ್ಲಿ ಮೈಸೂರಿನ ಬಿಳಿಹುಲಿ ರಾಜನ್
ಬಿಳಿಹುಲಿ ರಾಜನ್‌ಗೆ ಆಸ್ಟಿಯೋಸ್ಟಾಂಡೋ ಲೈಟಿಸ್ ರೋಗ
ಮೈಸೂರಿನ ವಿಕ್ರಂ ಆಸ್ಪತ್ರೆಯಲ್ಲಿ ಬಿಳಿ ಹುಲಿ ರಾಜನ್‌ನನ್ನು ಸಿಟಿ ಸ್ಕ್ಯಾನಿಂಗ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹುಲಿಯ ಲಂಬಾರ್ ಕೀಲು ಅಸಹಜ ಪ್ರಮಾಣದಲ್ಲಿ ಬೆಳೆದಿರುವುದಾಗಿ ತಿಳಿದುಬಂದಿದೆ. ಇದರಿಂದಾಗಿ ಹುಲಿಯ ಬೆನ್ನುಮೂಳೆ ಸಂಕುಚಿತಗೊಂಡಿದೆ. ಈ ಅಂಗನ್ಯೂನತೆಯನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯೇ ಮದ್ದು ಎಂದು ವೈದ್ಯರು ಶಿಫಾರಸ್ಸು ಮಾಡಿದ್ದಾರೆ. ಈ ಶಿಫಾರ್ಸಸಿನ ಮೇರೆಗೆ ಇನ್ನೊಂದು ವಾರದಲ್ಲಿ ರಾಜನ್‌ಗೆ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಮೈಸೂರು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಕುಮಾರ್ ಪುಷ್ಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹುಲಿ ಬೆನ್ನುಮೂಳೆ ಶಸ್ತ್ರಚಿಕಿತ್ಸೆಯನ್ನು ನಡೆಸಲು ಹೆಸರಾಂತ ಕೀಲು ಮತ್ತು ನರ ವೈದ್ಯರನ್ನು ಸಂಪರ್ಕಿಸಲಾಗುತ್ತಿದೆ. ಅತ್ಯಂತ ಅಪರೂಪದ ಶಸ್ತ್ರಚಿಕಿತ್ಸೆಯಾದ ಇದು ಅಪಾಯಕಾರಿಯೂ ಹೌದು. ಮುನ್ನೆಚ್ಚರಿಕೆ ಕ್ರಮವಾಗಿ ಮೃಗಾಲಯದ ಎಲ್ಲ ಹುಲಿಗಳ ಆವರಣದಲ್ಲೂ ಸೋಂಕು ನಿವಾರಕಗಳನ್ನು ಸಿಂಪರಿಸಲಾಗುತ್ತಿದೆ.
ಭುವನೇಶ್ವರದ ನಂದನಕಾನನ್‌ನಿಂದ ಬಿಳಿಹುಲಿ ರಾಜನ್‌ನನ್ನು ಮೈಸೂರಿನ ಮೃಗಾಲಯಕ್ಕೆ ಕರೆತರಲಾಗಿದೆ. ರಾಜನ್‌ಗೀಗ 11 ವರ್ಷ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications