ಮಧ್ಯಪ್ರದೇಶ ಸರ್ಕಾರದಿಂದ ಗೋಹತ್ಯೆನಿಷೇಧ ಸುಗ್ರೀವಾಜ್ಞೆ ಜಾರಿ
ಮಧ್ಯಪ್ರದೇಶ ಸರ್ಕಾರದಿಂದ ಗೋಹತ್ಯೆನಿಷೇಧ ಸುಗ್ರೀವಾಜ್ಞೆ ಜಾರಿ ಪರ ರಾಜ್ಯದ ಕಟುಕರಿಗೆ ರಾಸುಗಳ ಮಾರಾಟಕ್ಕೂ ನಿಷೇಧ
ಭೂಪಾಲ್ : ಮಧ್ಯಪ್ರದೇಶದ ಭಾರತೀಯ ಜನತಾ ಪಕ್ಷದ ರಾಜ್ಯಸರ್ಕಾರ ಗೋಹತ್ಯೆಯನ್ನು ನಿಷೇಧಿಸಿ ಶುಕ್ರವಾರ (ಜ.23) ಆದೇಶ ಹೊರಡಿಸಿದೆ.
ರಾಜ್ಯಪಾಲ ರಾಮ್‌ಪ್ರಕಾಶ್ ಗುಪ್ತ ಅವರು ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ಹೊರಡಿಸಿದ್ದು , ಈ ಆದೇಶ ತಕ್ಷಣದಿಂದಲೇ ಜಾರಿಯಾಗಿದೆ ಎಂದು ಹಿರಿಯ ಅಧಿಕಾರಿಯಾಬ್ಬರು ತಿಳಿಸಿದ್ದಾರೆ. ತಾನು ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು .
ಗೋಹತ್ಯೆ ನಿಷೇಧ ಕಾಯ್ದೆಯ ಪ್ರಕಾರ- ಗೋ ಜಾತಿಗೆ ಸೇರಿದ ಯಾವುದೇ ಪ್ರಾಣಿಯನ್ನು ಕೊಲ್ಲುವುದು ನಿಷಿದ್ಧ . ಅಲ್ಲದೆ, ಹಸು ಹಾಗೂ ಎತ್ತುಗಳನ್ನು ಪರರಾಜ್ಯದ ಕಟುಕರಿಗೂ ಮಾರುವಂತಿಲ್ಲ . ಗೋಹತ್ಯೆ ನಿಷೇಧದ ಉಲ್ಲಂಘನೆಯು ಜಾಮೀನು ನಿರಾಕರಣೆಯ ಅಪರಾಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಹತ್ಯೆ ಅಥವಾ ಹತ್ಯೆಗಾಗಿ ಗೋವುಗಳ ಮಾರಾಟವು ಗಂಭೀರವಾದ ಅಪರಾಧವಾಗಿದ್ದು , ಈ ಅಪರಾಧಕ್ಕಾಗಿ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ 10 ಸಾವಿರ ರುಪಾಯಿ ದಂಡ ಅಥವಾ ಇವೆರಡನ್ನೂ ವಿಧಿಸಬಹುದಾಗಿದೆ.(ಏಜನ್ಸೀಸ್)












Click it and Unblock the Notifications