Get Updates
Get notified of breaking news, exclusive insights, and must-see stories!

ಶ್ರೀರಂಗಂನಲ್ಲಿ ಬೆಂಕಿ ಅವಘಡ, ಮದುವೆ ಮನೇಲಿ ಕನಿಷ್ಠ 45 ಸಾವು

ಶ್ರೀರಂಗಂನಲ್ಲಿ ಬೆಂಕಿ ಅವಘಡ, ಮದುವೆ ಮನೇಲಿ ಕನಿಷ್ಠ 45 ಸಾವು
ಸೂತಕದ ಮನೆಯಾದ ಮದುವೆ ಮನೆ, 45 ಸಾವು, ವಧು ಸೇರಿದಂತೆ 50 ಮಂದಿಗೆ ಗಾಯ

ಶ್ರೀರಂಗಂ : ತಮಿಳುನಾಡಿನ ಶ್ರೀರಂಗಂನಲ್ಲಿನ ಮದುವೆ ಸಮಾರಂಭವೊಂದರಲ್ಲಿ ಶುಕ್ರವಾರ (ಜ.23) ಸಂಭವಿಸಿದ ಬೆಂಕಿ ಅನಾಹುತದಲ್ಲಿ ಕನಿಷ್ಠ 45 ಮಂದಿ ಸಾವನ್ನಪ್ಪಿದ್ದು , 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬೆಂಕಿ ಅವಘಡದಲ್ಲಿ ವಧು ಕೂಡ ಗಾಯಗೊಂಡಿದ್ದಾಳೆ.

ಅಲಂಕಾರಿಕ ದೀಪ (ಸೀರಿಯಲ್‌ ಸೆಟ್‌)ನಲ್ಲಿ ಉಂಟಾದ ಷಾರ್ಟ್‌ ಸರ್ಕ್ಯೂಟ್‌ ಬೆಂಕಿ ಅನಾಹುತಕ್ಕೆ ಎಡೆ ಮಾಡಿಕೊಟ್ಟಿದೆ. ಮೊದಲ ಮಹಡಿಯಲ್ಲಿ ಬೆಂಕಿಯ ಕಿಡಿ ಮೊದಲು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಮದುವೆ ಮನೆಯನ್ನು ವ್ಯಾಪಿಸಿದೆ. ಮುಹೂರ್ತಕ್ಕೆ ಸಿದ್ಧರಾಗುತ್ತಿದ್ದ ಜನರು ಉಸಿರುಗಟ್ಟಿ ಸಾವಿಗೀಡಾದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 9.30ರಿಂದ 10.30ಕ್ಕೆ ಮದುವೆಯ ಮುಹೂರ್ತವಿದ್ದು, ಮುಹೂರ್ತಕ್ಕೆ ಸ್ವಲ್ಪ ಸಮಯ ಮುನ್ನ ಸಾವುನೋವು ಸಂಭವಿಸಿದೆ. ಬೆಂಕಿ ಹತ್ತಿಕೊಂಡ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲು ಕಾಲ್ತುಳಿತದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಂಗಳಸೂತ್ರವನ್ನು ಬಿಗಿಸಿಕೊಳ್ಳುವ ಸಂಭ್ರಮದಲ್ಲಿದ್ದ ವಧು ಜಯಶ್ರೀ ಕೂಡ ನೂಕುನುಗ್ಗಲಿಗೆ ಸಿಕ್ಕಿದ್ದು , ಆಕೆಯನ್ನು ಸಂಬಂಧಿಕನೊಬ್ಬ ಅಪಾಯದಿಂದ ಪಾರು ಮಾಡಿದ್ದಾನೆ. ಜಯಶ್ರೀ ತಂದೆ ರೈಲ್ವೆ ಇಲಾಖೆಯ ನಿವೃತ್ತ ನೌಕರರು.

ತೀವ್ರವಾಗಿ ಗಾಯಗೊಂಡವರನ್ನು ತಿರುಚನಾಪಳ್ಳಿ ಮತ್ತು ಶ್ರೀರಂಗಂನಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ದುರ್ಘಟನೆಯ ಸ್ಥಳಕ್ಕೆ ಪಿಟಿಐ ಪ್ರತಿನಿಧಿ ಭೇಟಿ ಕೊಟ್ಟಾಗ ಕಂಡ ದೃಶ್ಯಗಳು : ಮದುವೆಯ ಮಂಗಳ ವಸ್ತುಗಳು ದಿಕ್ಕಾಪಾಲಾಗಿದ್ದವು. ಚೆಲ್ಲಾಪಿಲ್ಲಿಯಾಗಿದ್ದ ಹೆಣಗಳನ್ನು ಒಂದೆಡೆ ಒಟ್ಟಲಾಗುತ್ತಿತ್ತು . ಮದುವೆಯ ಹಾಲ್‌ ತುಂಬ ಕುರ್ಚಿಗಳು ಚೆಲ್ಲಾಡಿದ್ದವು. ಮೊದಲ ಮಹಡಿ ಸಂಪೂರ್ಣವಾಗಿ ಮತ್ತು ಕೆಳ ಅಂತಸ್ತಿನ ಕಿಟಕಿಗಳು ಬೆಂಕಿಯಿಂದ ಹಾನಿಗೊಳಗಾಗಿದ್ದವು. ಮದುವೆ ಮನೆ ಸೂತಕದ ಮನೆಯಾಗಿತ್ತು .

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+