ಬರಡು ನೆಲ ಬರದ ನೆಲ ಚಿತ್ರದುರ್ಗಕ್ಕೆ ಶಾಂತಿಸಾಗರದಿಂದ ನೀರು!
ಬರಡು ನೆಲ ಬರದ ನೆಲ ಚಿತ್ರದುರ್ಗಕ್ಕೆ ಶಾಂತಿಸಾಗರದಿಂದ ನೀರು!
80 ಕೋಟಿ ರುಪಾಯಿ ಯೋಜನೆಗೆ ಚಾಲನೆ
ಚಿತ್ರದುರ್ಗಕ್ಕೆ ಅಗತ್ಯವಿರುವ ನೀರಿನ ವ್ಯವಸ್ಥೆ ಒಂದು ವರ್ಷದೊಳಗೆ ಮುಗಿಯಬೇಕು. ಪ್ರಾರಂಭಿಸಿದ ಕಾಮಗಾರಿ ಶೀಘ್ರದಲ್ಲಿ ಮುಗಿಸುವ ಉದ್ದೇಶದಿಂದ ಶ್ರಮಿಸುತ್ತಿದ್ದೇವೆ. ನಗರವೊಂದರ ಕುಡಿಯುವ ನೀರಿನ ಯೋಜನೆಗೆ 80 ಕೋಟಿ ರೂಪಾಯಿಗಳನ್ನು ಒದಗಿಸುತ್ತಿರುವುದು ಇದೇ ಮೊದಲು ಎಂದು ಶಾಸಕ ಲಿಂಗಪ್ಪ ನೀರು ಸರಬರಾಜು ಯೋಜನೆಯನ್ನು ಉದ್ಘಾಟಿಸಿ ಹೇಳಿದರು.
ಭರಮಸಾಗರ ಶಾಸಕ ಎಂ. ಚಂದ್ರಪ್ಪ, ಚಿತ್ರದುರ್ಗ ದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಕ.ಗ್ರಾ.ನೀ.ಸ ಮತ್ತು ಒ.ಮಂ.ಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಚಿತ್ರದುರ್ಗ ಗ್ರಾಮೀಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಸೇತುರಾಂ, ಹಾಲಿ ಮುನ್ಸಿಪಾಲಿಟಿ ಸದಸ್ಯ ಎಚ್. ಸುನಿಲ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications