ರಾಜ್ಯಬಜೆಟ್‌ ಫೆ.5ರಂದು ಮಂಡನೆ -ಸಚಿವ ಚಂದ್ರೇಗೌಡ ಇಂಗಿತ

ರಾಜ್ಯಬಜೆಟ್‌ ಫೆ.5ರಂದು ಮಂಡನೆ -ಸಚಿವ ಚಂದ್ರೇಗೌಡ ಇಂಗಿತ
ಫೆಬ್ರವರಿ 5ರಿಂದ ರಾಜ್ಯದ ಬಜೆಟ್‌ ಅಧಿವೇಶನ ಪ್ರಾರಂಭ

ಬೆಂಗಳೂರು: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆಯುವ ಸಂಭಾವ್ಯತೆಯ ಹಿನ್ನೆಲೆಯಲ್ಲಿ ಫೆಬ್ರವರಿ 5 ರಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ರಾಜ್ಯ ಬಜೆಟ್‌ ಮಂಡಿಸುವ ಸಾಧ್ಯತೆಗಳಿವೆ ಎಂದು ಕಾನೂನು ಸಚಿವ ಡಿ.ಬಿ.ಚಂದ್ರೇಗೌಡ ತಿಳಿಸಿದ್ದಾರೆ.

ಫೆಬ್ರವರಿ 5 ರಿಂದ ಬಜೆಟ್‌ ಅಧಿವೇಶನ ಪ್ರಾರಂಭವಾಗುತ್ತದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಕೃಷ್ಣ ಫೆ.5ರಂದೇ ವಾರ್ಷಿಕ ಆಯ-ವ್ಯಯ ಪಟ್ಟಿ ಮಂಡಿಸುವ ಸಾಧ್ಯತೆಯಿದೆ ಎಂದು ಜ.23ರ ಶಕ್ರವಾರ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ. ಚಂದ್ರೇಗೌಡ ತಿಳಿಸಿದರು.

ಅವಧಿಗೆ ಮುಂಚಿತವಾಗಿ ಚುನಾವಣೆಯ ಅಗತ್ಯವಿಲ್ಲ. ಸಂವಿಧಾನದ 172 ನೆಯ ಮಸೂದೆಯಡಿಯಲ್ಲಿ ರಾಜ್ಯವು ಐದು ವರ್ಷಗಳ ಪೂರ್ಣ ಅವಧಿಯ ಆಡಳಿತ ನಡೆಸಲು ಅವಕಾಶವಿದೆ ಎಂದು ಅಭಿಪ್ರಾಯಪಟ್ಟ ಚಂದ್ರೇಗೌಡ ಚುನಾವಣೆ ನಡೆಯುವ ವೇಳೆಯ ಕುರಿತು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ.

ವಿಧಾನಸಭೆಯ ಅವಧಿ ಅಕ್ಟೋಬರ್‌ 23 ರಂದು ಕೊನೆಗೊಳ್ಳಲಿದೆ. ಚುನಾವಣಾ ಆಯೋಗವು ಮುಂಚಿತವಾಗಿ ಚುನಾವಣೆ ನಡೆಸುವುದರ ಬಗ್ಗೆ ಸೂಚಿಸಬಹುದು. ಆದರೆ ಒಪ್ಪುವುದು ಇಲ್ಲವೇ ಕೈಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಅದನ್ನು ಪ್ರಶ್ನಿಸುವ ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ ಎಂದು ಸಚಿವ ಚಂದ್ರೇಗೌಡ ತಿಳಿಸಿದರು.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+