ಮೇಲ್ಮನೆ ಸಂಭ್ರಮ ಜೊತೆಯಾಗಿ ಕಂಬಾರರಿಗೆ ಒಲಿದ ಪಂಪಪೀಠ

ಮೇಲ್ಮನೆ ಸಂಭ್ರಮ ಜೊತೆಯಾಗಿ ಕಂಬಾರರಿಗೆ ಒಲಿದ ಪಂಪಪೀಠ
ಬನವಾಸಿಯ ಕದಂಬೋತ್ಸವದಲ್ಲಿ ಚಂದ್ರಶೇಖರ ಕಂಬಾರರಿಗೆ ಪಂಪ ಪ್ರಶಸ್ತಿ ಪ್ರದಾನ

ಬೆಂಗಳೂರು : ಕಬೀರ್‌ ಸಮ್ಮಾನ್‌ ಪ್ರಶಸ್ತಿ ವಿಜೇತ ಹಿರಿಯ ಕವಿ ಡಾ। ಚಂದ್ರಶೇಖರ ಕಂಬಾರ ಪ್ರತಿಷ್ಠಿತ ಪಂಪ ಪ್ರಸ್ತಿಗೆ ಆಯ್ಕೆಯಾಗಿದ್ದಾರೆ.

2003ನೇ ಸಾಲಿನ ಪಂಪ ಪ್ರಶಸ್ತಿಗೆ ಡಾ.ಚಂದ್ರಶೇಖರ ಕಂಬಾರ ಅವರ ಹೆಸರನ್ನು ಆಯ್ಕೆ ಮಾಡಿರುವುದಾಗಿ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ ಬುಧವಾರ ತಿಳಿಸಿದರು.

ಡಾ। ಎಂ.ಎಂ.ಕಲಬುರ್ಗಿ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಕಂಬಾರ ಅವರನ್ನು ಪಂಪಪೀಠಕ್ಕೆ ಆಯ್ಕೆ ಮಾಡಿದೆ. 1 ಲಕ್ಷ ರುಪಾಯಿ ನಗದು, ತಾಮ್ರದ ಫಲಕ ಹಾಗೂ ಪುತ್ಥಳಿಯನ್ನು ಪ್ರಶಸ್ತಿ ಹೊಂದಿದೆ. ಫೆಬ್ರವರಿಯಲ್ಲಿ ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವದಲ್ಲಿ ಪಂಪ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ವಿಧಾನ ಪರಿಷತ್‌ಗೆ ಚಂದ್ರಶೇಖರ ಕಂಬಾರರನ್ನು ಎಸ್ಸೆಂ.ಕೃಷ್ಣ ಸರ್ಕಾರ ನಾಮಕರಣ ಮಾಡಿರುವ ಸುದ್ದಿಯ ಬೆನ್ನಿನಲ್ಲಿಯೇ ಕಂಬಾರರಿಗೆ ಪಂಪ ಪ್ರಶಸ್ತಿ ಒಲಿದು ಬಂದಿದೆ. ಉಳಿದಿರುವುದು ಜ್ಞಾನಪೀಠ ; ಆ ಸಂಭ್ರಮ ದೂರವಿಲ್ಲ .

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+