ಬೆಂಗಳೂರು ವಿಮಾನ ನಿಲ್ದಾಣ ಕಾಮಗಾರಿ ಜ.29 ರಿಂದ ಪ್ರಾರಂಭ

ಬೆಂಗಳೂರು ವಿಮಾನ ನಿಲ್ದಾಣ ಕಾಮಗಾರಿ ಜ.29 ರಿಂದ ಪ್ರಾರಂಭ
ಖಾಸಗಿ ವಲಯದ ಪಾಲುಗಾರಿಕೆಗೆಯ ಕುರಿತ ಎಲ್ಲ ಎಡರು ತೊಡರುಗಳ ನಿವಾರಣೆ

ಬೆಂಗಳೂರು : ಬೆಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣ ನಿರ್ಮಾಣದ ಪ್ರಮುಖವಾದ ಒಪ್ಪಂದಕ್ಕೆ ನಿನ್ನೆ (ಜ.20) ಕೇಂದ್ರ ಸರಕಾರ ಅಸ್ತು ಎಂದಿದ್ದು, ಜನವರಿ 29 ರಿಂದ ಬೆಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣ ಯೋಜನೆಯ ಕಾಮಗಾರಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್‌.ಎಮ್‌.ಕೃಷ್ಣ ಹೇಳಿದರು.

‘ಈ ಯೋಜನೆಯ ನಿರ್ಮಾಣ ಕಾಮಗಾರಿಯಲ್ಲಿ ಖಾಸಗಿ ವಲಯದ ಪಾಲುಗಾರಿಕೆಗೆಯ ಕುರಿತ ಎಲ್ಲ ಎಡರು ತೊಡರುಗಳು ಕೇಂದ್ರ ಸರಕಾರ ನಿನ್ನೆ ನೀಡಿದ ನಿರ್ಣಯದಿಂದಾಗಿ ನಿವಾರಣೆಯಾಗಿವೆ. ಇದರಿಂದಾಗಿ ಸರ್ವ ಅಡೆತಡೆಗಳು ತಪ್ಪಿವೆ. ಇಷ್ಟರವರೆಗೆ ಮಂಕು ಕವಿದಿದ್ದ ಕೆಲಸ ಕಾರ್ಯಗಳು ಇದೇ ತಿಂಗಳ 29ರಿಂದ ಆರಂಭವಾಗಲಿದೆ.’ ಎಂದು ಬಿಇಎಮ್‌ಎಲ್‌ ದೆಹಲಿ ಮೆಟ್ರೊಗಾಗಿ ನಿರ್ಮಿಸಿರುವ ತುಕ್ಕು ನಿರೋಧಕ ಸ್ಟೀಲ್‌ನಿಂದ ನಿರ್ಮಿತ ರೈಲು ಬೋಗಿಗಳಿಗೆ ಹಸಿರು ನಿಶಾನೆ ತೋರಿಸಿ ನುಡಿದರು.

‘ಈ ಹಿಂದೆ ನಾನು ಹೇಳಿದ ಮಾತುಗಳನ್ನು ಮಾಧ್ಯಮದವರನ್ನು ಒಳಗೊಂಡಂತೆ ಎಲ್ಲ ನಿರಾಶವಾದಿಗಳು ಹಾಸ್ಯ ಮಾಡಿದರು. ಆದರೆ ಈಗ ‘ಅಂತಿಮ ಭರವಸೆ’ ನೀಡುತಿದ್ದೇನೆ. ’ ‘ಇನ್ನು ಮೂರು ವರ್ಷದೊಳಗೆ , 3,000ಕೋಟಿ ಬಂಡವಾಳದಲ್ಲಿ ರಾಜ್ಯದ ನಿರೀಕ್ಷೆಯಂತೆ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ’ಎಂದು ಪುನರುಚ್ಚರಿಸಿದರು.

ಬೆಂಗಳೂರು ನಗರಿಯು ಪ್ರಪಂಚದ ‘ತಾಂತ್ರಿಕ ವೃತ್ತ ಪರಿಧಿ’ . ವಿಮಾನ ನಿಲ್ದಾಣ ನಿರ್ಮಾಣದಿಂದ ಎಲ್ಲ ಕಾರ್ಯಗಳು ಸಲೀಸಾಗಿ ಸಾಗಲಿದೆ ಎಂದ ಅವರು ಈ ಮಹತ್ತರ ನಿರ್ಣಯ ಕೈಗೊಂಡ ಪ್ರಧಾನಿ ವಾಜಪೇಯಿ, ನಾಗರಿಕ ವಿಮಾನಯಾನ ಸಚಿವ ರಾಜಿವ್‌ ಪ್ರತಾಪ್‌ ರುಡ್ಡೀ ಮತ್ತು ರಕ್ಷಣಾ ಸಚಿವ ಜಾರ್ಜ್‌ ಫೆರ್ನಾಂಡಿಸ್‌ ರವರಿಗೆ ಧನ್ಯವಾದ ಸಮರ್ಪಿಸಿದರು.

ಬೆಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಯೋಜನಾ ಆಯೋಗ ಹಾಗೂ ಕೇಂದ್ರದ ಸಹಕಾರ ದೊರೆತಲ್ಲಿ ಮೆಟ್ರೊ ರೈಲು ಆರಂಭಿಸಲಿದ್ದೇವೆ ಎಂದು ಸಹ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+