ವಿಶ್ವ ಜಲ ಸಮಾವೇಶದಲ್ಲಿ ‘ಕೋಕೊ- ಪೆಪ್ಸಿ ತೊಲಗಲಿ’ ಘೋಷಣೆ
ವಿಶ್ವ ಜಲ ಸಮಾವೇಶದಲ್ಲಿ ‘ಕೋಕೊ- ಪೆಪ್ಸಿ ತೊಲಗಲಿ’ ಘೋಷಣೆ
ನೀರಿಗಾಗಿ ಸೈದ್ಧಾಂತಿಕ ಹೋರಾಟದ ಆರಂಭ
ಪ್ರಸ್ತುತ ಅಸ್ತಿತ್ವದಲ್ಲಿರುವ ವಿಶ್ವ ವ್ಯಾಪಾರ ಸಂಸ್ಥೆ ನಮ್ಮ ಬದುಕಿನಿಂದ ಹೊರನಡೆಯಬೇಕು. ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಎಂದು ಗಾಂಧೀಜಿ ಕರೆ ನೀಡಿದ್ದರು. ನಾವೀಗ ಕೊಕೊಕೋಲಾ ಮತ್ತು ಪೆಪ್ಸಿ ಭಾರತದಿಂದ ತೊಲಗಿ ಎನ್ನುತ್ತೇವೆ ಎಂದು ಜೋಸೆ ಬೋವೆ ಆಗ್ರಹಿಸಿದರು.
ಕೆನಡಾದ ಪರಿಸರವಾದಿ ಮೌಡ್‌ಬರ್ಲೊ ಮಾತನಾಡಿ- ಶುದ್ಧ ಚಿನ್ನವಾದ ನೀರನ್ನು ಅಂತರಾಷ್ಟ್ರೀಯ ಕಂಪೆನಿಗಳು ದುರ್ಬಳಕೆ ಮಾಡುತ್ತಿವೆ. ಪರಿಸ್ಥಿತಿ ಹೇಗೆ ಬಿಗಡಾಯಿಸುತ್ತಿದೆ ಎಂದರೆ ಬಡ ಜನತೆಗೆ ಶುದ್ಧ ನೀರು ಇಲ್ಲದಾಗಿದೆ ಎಂದರು. ನಾನು ನಮ್ಮ ಜನತೆಗೆ ಹೇಳುತ್ತೇನೆ, ಪೆಪ್ಸಿ ಹಾಗೂ ಕೊಕೊಕೋಲ ಕೊಳ್ಳಬೇಡಿ. ನಮ್ಮ ನೀರಿರುವುದು ಮಾರಾಟಕ್ಕಲ್ಲ ಎಂದು ಹೇಳಿದರು.
ಕೋಕ್‌ಗೆ ಭಾರತ ಬಿಟ್ಟು ತೊಲಗಲು ಸಮಯ ಬಂದಿದೆ. ಪ್ರಪಂಚದಾದ್ಯಂತ ವ್ಯಾಪಾರಿ ಪ್ರವೃತ್ತಿ ಹೋಗಿ ನೈಜ ಪ್ರಜಾಪ್ರಭುತ್ವ ಬರಬೇಕು ಎಂದು ಅಮೇರಿಕಾದಿಂದ ಆಗಮಿಸಿದ್ದ ಹೋರಾಟಗಾರ ವಾರ್ಡ್ ಮೋರ್‌ಹೌಸ್ ಉದ್ಗರಿಸಿದರು.
ಇದಕ್ಕೂ ಮುನ್ನ ಪತ್ರಕರ್ತರೊಂದಿಗೆ ಮಾತಾನಾಡಿದ ಜನಪರ ಹೋರಾಟಗಾರ್ತಿ ವಂದನಾ ಶಿವ- ಹೈಡ್ರೊಪೈರೆಸಿಯನ್ನು ತಡೆಹಿಡಿಯಬೇಕಾಗಿದೆ. ಪ್ಲಾಚಿಮಾಡದಲ್ಲಿ ಕೋಕ್ ಕಾರ್ಖಾನೆ ಮಾಡುತ್ತಿರುವ ‘ನೀರು ಕಳ್ಳತನದ’ ವಿರುದ್ಧ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದರು.
ಪ್ಲಾಚಿಮಾಡದಲ್ಲಿ ಎರಡು ಸಕ್ರಮ ಧ್ವನಿಗಳಿವೆ, ಒಂದು ಮಹಿಳಾ ಧ್ವನಿ ಇನ್ನೊಂದು ಸ್ಥಳೀಯ ಸರಕಾರ. ಪ್ಲಾಚಿಮಾಡದ ಕೊಕ್ ಕಾರ್ಖಾನೆ ಎದುರು ಧರಣಿ ಕುಳಿತ ಮಹಿಳೆಯರು ಕ್ಯಾಮರಕ್ಕಾಗಿ ಕುಳಿತಿಲ್ಲ , ಅವರು ನೀರಿಗಾಗಿ ಕುಳಿತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರು ನುಡಿದರು.
ಈ ಹಿಂದೆ ಬಾಟಲಿ ನೀರಿನ ಗುಣಮಟ್ಟದ ವಿರುದ್ಧ ಆಂದೋಲನವೇ ನಡೆದಿತ್ತು. ಪರಿಸರವಾದಿಗಳು, ಆ್ಯಂಟಿ ಗ್ಲೋಬಲೈಶನ್ ಬಳಗವು ಎಮ್‌ಎನ್‌ಸಿಗಳ ಬಣ್ಣ ಬಯಲು ಮಾಡಲು ಟೊಂಕ ಕಟ್ಟಿ ನಿಂತಿವೆ. ಪೇಟೆಂಟ್ ಪಡೆಯಲು ಗಾಳಿಯಾಂದೇ ಬಾಕಿಯೇ?
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications