ಜ.24ರಿಂದ ತೆಲಗಿ ಪೊಲೀಸ್ ಕಸ್ಟಡಿಗೆ; ಛಾಪಪಾಪಿಗಳ ಬಹಿರಂಗ?
ಜ.24ರಿಂದ ತೆಲಗಿ ಪೊಲೀಸ್ ಕಸ್ಟಡಿಗೆ; ಛಾಪಪಾಪಿಗಳ ಬಹಿರಂಗ?
ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತಪ್ಪೊಪ್ಪಿಗೆ ನೀಡಲು ತೆಲಗಿ ಸಿದ್ಧ
ಛಾಪ ಪಾಪ ಹಗರಣದಲ್ಲಿ ಭಾಗಿಯಾಗಿರುವ ಪ್ರಮುಖರ ಬಗ್ಗೆ ಮಾಹಿತಿ ನೀಡಲು ಕರೀಂಲಾಲ ತೆಲಗಿ ಒಪ್ಪಿಕೊಂಡಿದ್ದಾನೆ ಎನ್ನುವ ವರದಿಯ ಹಿನ್ನೆಲೆಯಲ್ಲಿ ಜ.24ರಿಂದ 4ದಿನಗಳ ಕಾಲ ತೆಲಗಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎ.ಟಿ.ಮನೋಳಿ ಬುಧವಾರ ಆದೇಶ ನೀಡಿದರು.
ತೆಲಗಿ ತನಗಿಷ್ಟ ಬಂದ ವಕೀಲರನ್ನು ಹಾಗೂ ಕಾನೂನು ಸಲಹೆಗಾರರನ್ನು ಸಂಪರ್ಕಿಸಲು ಸ್ವತಂತ್ರನಾಗಿದ್ದಾನೆ. ಈ ಕುರಿತು ಆತನಿಗೆ ಯಾವುದೇ ಅಡಚಣೆ ಉಂಟುಮಾಡಬಾರದು ಎಂದೂ ನ್ಯಾಯಮೂರ್ತಿ ಮನೋಳಿ ಆದೇಶಿಸಿದರು.
ತನ್ನ ವಕೀಲರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತೆಲಗಿ ತಪ್ಪೊಪ್ಪಿಗೆ ನೀಡಲು ಸಿದ್ಧನಿದ್ದಾನೆ ಎಂದು ಆತನ ಸಲಹೆಗಾರ ಅಬ್ದುಲ್ ರೆಹಮಾನ್ ಈ ಮುನ್ನ ತಿಳಿಸಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications