‘ಇತರ ವಿಷಯಗಳ ಬದಿಗೊತ್ತಿ , ಕುಡಿಯುವ ನೀರಿಗೆ ಗಮನ ಹರಿಸಿ’
‘ಇತರ ವಿಷಯಗಳ ಬದಿಗೊತ್ತಿ , ಕುಡಿಯುವ ನೀರಿಗೆ ಗಮನ ಹರಿಸಿ’
ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಕೃಷ್ಣ ನಕಾರ
ಜ.20ರ ಮಂಗಳವಾರ ನಡೆದ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕೃಷ್ಣ , ಮುಂಬರುವ ಬೇಸಿಗೆಯಲ್ಲಿ ಜನತೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಾ ಜಿಲ್ಲಾಧಿಕಾರಿಗಳು ವಾರಕ್ಕೊಮ್ಮೆ ತಮ್ಮ ಜಿಲ್ಲೆಯ ನೀರಿನ ವ್ಯವಸ್ಥೆಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ನೀರಿನ ವ್ಯವಸ್ಥೆ, ವಿದ್ಯುತ್ ಪೂರೈಕೆ, ದನಕರುಗಳಿಗೆ ಗೋಮಾಳಗಳು ಮತ್ತು ಯುವ ಪೀಳಿಗೆಗೆ ಉದ್ಯೋಗ ಕಲ್ಪಿಸುವ ಕಾರ್ಯಗಳಿಗೆ ಮುಂದಿನ ಮೂರು ತಿಂಗಳು ಪ್ರಾಧಾನ್ಯತೆ ನೀಡಬೇಕು. ಉಳಿದ ಕಾರ್ಯಗಳು ನಿಧಾನವಾದರೂ ಅಡ್ಡಿಯಿಲ್ಲ. ಜನರು ಮೊದಲು ತೃಪ್ತರಾಗಬೇಕು ಎಂದು ಕೃಷ್ಣ ಹೇಳಿದರು.
ತಮಿಳುನಾಡಿಗೆ ನೀರು ಹರಿಸಲು ನಕಾರ
ಏಳು ಟಿಎಂಸಿ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಮುಂದಿಟ್ಟಿರುವ ಮನವಿಯನ್ನು ಮುಖ್ಯಮಂತ್ರಿ ಕೃಷ್ಣ ತಿರಸ್ಕರಿಸಿದ್ದಾರೆ. ರಾಜ್ಯದ ಜನತೆಯ ಕುಡಿಯುವ ನೀರಿನ ಅಗತ್ಯ ಕಾವೇರಿ ನೀರಿನಲ್ಲೇ ಪೂರೈಕೆಯಾಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದು ಆಗದ ಮಾತು ಎಂದು ಕೃಷ್ಣ ಹೇಳಿದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications