ಎಸ್ಸೆಂ. ಕೃಷ್ಣರ ಕನಸಲೂ ಅವನು, ಮನಸಲೂ ಅವನು, ವೀರಪ್ಪನ್ !
ಎಸ್ಸೆಂ. ಕೃಷ್ಣರ ಕನಸಲೂ ಅವನು, ಮನಸಲೂ ಅವನು, ವೀರಪ್ಪನ್ !
ಪೋಲಿಸರ ಪಾಲಿಗೆ ಮಾಯಾಮೃಗವಾಗಿರುವ ‘ವೀರಪ್ಪನ್’ !
ವೀರಪ್ಪನ್ ಸೆರೆಹಿಡಿಯುವಲ್ಲಿ ಪೋಲಿಸರ ವೈಫಲ್ಯದ ಕುರಿತ ನಿರಾಶೆ, ಸಿಟ್ಟು ವ್ಯಕ್ತಪಡಿಸಿದ ಕೃಷ್ಣ - ಇದೊಂದು ಕಾರ್ಯಾಚರಣೆಯಲ್ಲಿ ಕರ್ನಾಟಕ ಪೋಲಿಸರು ಯಶಸ್ಸು ಗಳಿಸಿಲ್ಲ ಎಂದರು. ಹಿರಿಯ ಪೋಲಿಸ್ ಅಧಿಕಾರಿಗಳ ವಾರ್ಷಿಕ ಸಮಾವೇಶವನ್ನು (ಜ.19) ಉದ್ಘಾಟಿಸಿ ಕೃಷ್ಣ ಮಾತನಾಡುತ್ತಿದ್ದರು.
‘ನಾನು ಎಲ್ಲಿ ಹೋದರೂ ಮತ್ತದೇ ಪ್ರಶ್ನೆ ಎದುರಾಗುತ್ತದೆ. ವೀರಪ್ಪನ್‌ನನ್ನು ಹಿಡಿಯಲು ಯಾಕೆ ಅಷ್ಟೊಂದು ಕಷ್ಟ ಎನ್ನುವ ಪ್ರಶ್ನೆಗೆ ಏನೆಂದು ಉತ್ತರಿಸುವುದು’ ಎಂದ ಕೃಷ್ಣ , ‘ಆತನನ್ನು ಹಿಡಿಯಲು ಯಾಕೆ ಆಗುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ . ಆದರೆ ಕಾರ್ಯಚರಣೆಯಲ್ಲಿ ಭಾಗಿಯಾಗಿರುವವರಿಗೆ ನಾನು ಶುಭ ಹಾರೈಸುತ್ತೇನೆ’ ಎಂದರು.
ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ಬಳಿಕ ಇದು ಹಿರಿಯ ಪೊಲೀಸ್ ಅಧಿಕಾರಿಗಳ ಐದನೇ ಸಮಾವೇಶವಾಗಿದ್ದು , ಈ ವರ್ಷ ಕಾರ್ಯಾಚರಣೆಗೆ ಯಶಸ್ಸು ದೊರಕಬಹುದು ಎಂದು ಕೃಷ್ಣ ಆಶಿಸಿದರು. ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ನೆರೆಯ ತಮಿಳುನಾಡು ಸರಕಾರ ಉತ್ತಮವಾದ ಬೆಂಬಲ ನೀಡುತ್ತಿದೆ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು.
(ಪಿಟಿಐ)
ಮುಖಪುಟ / ವೀರಪ್ಪನ್












Click it and Unblock the Notifications