ಸಿದ್ದಾಪುರದ ಎಂ.ಜಿ.ಸಿ. ಕಾಲೇಜಿನಲ್ಲಿ ರಾಮಕೃಷ್ಣ ಹೆಗಡೆ ಪ್ರತಿಮೆ

ಸಿದ್ದಾಪುರದ ಎಂ.ಜಿ.ಸಿ. ಕಾಲೇಜಿನಲ್ಲಿ ರಾಮಕೃಷ್ಣ ಹೆಗಡೆ ಪ್ರತಿಮೆ
ಉತ್ತರಕನ್ನಡದಲ್ಲಿ ಶೈಕ್ಷಣಿಕ ಏಳಿಗೆಗೆ ಹೆಗಡೆ ಅವರ ಕೊಡುಗೆಯ ಸ್ಮರಣೆ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಶಿಕ್ಷಣ ಪ್ರಸಾರಕ ಸಮಿತಿ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರ ಪ್ರತಿಮೆಯನ್ನು ತಾಲ್ಲೂಕಿನ ಎಂ.ಜಿ.ಸಿ. ಕಾಲೇಜಿನ ಆವರಣದಲ್ಲಿ ಸ್ಥಾಪಿಸಲು ನಿರ್ಧರಿಸಿದೆ.

ಶಿಕ್ಷಣ ಪ್ರಸಾರಕ ಸಮಿತಿಯು ಮೂರು ಕಾಲೇಜುಗಳನ್ನೂ ಹಾಗೂ ಐದು ಪ್ರಾಥಮಿಕ ಶಾಲೆಗಳನ್ನೂ ನಡೆಸುತ್ತಿದೆ. ದಿವಂಗತ ರಾಮಕೃಷ್ಣ ಹೆಗಡೆಯವರ ನೆನಪು ಮತ್ತು ಉತ್ತರ ಕನ್ನಡದ ಶಿಕ್ಷಣ ಕ್ಷೇತ್ರದ ಏಳ್ಗೆಗಾಗಿ ಹೆಗಡೆಯವರು ಪಟ್ಟ ಶ್ರಮ- ಸಲ್ಲಿಸಿದ ಸೇವೆ ಸದಾ ಹಸಿರಾಗಿರಬೇಕು ಎನ್ನುವುದೇ ಈ ಪ್ರತಿಮೆ ಪ್ರತಿಷ್ಠಾಪನೆಯ ಮೂಲ ಉದ್ದೇಶ ಎಂದು ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷ ವಿನಾಯಕ ರಾವ್‌ ಜಿ. ಹೆಗಡೆ ಸುದ್ದಿ ಹೇಳಕೆಯಲ್ಲಿ ತಿಳಿಸಿದ್ದಾರೆ.

ಎಂಜಿಸಿ ಕಾಲೇಜಿನಲ್ಲಿ ಹೆಗಡೆ ಅವರ ಪ್ರತಿಮೆ ಪ್ರತಿಷ್ಠಾಪನೆ ಕುರಿತ ಈ ನಿರ್ಣಯವನ್ನು ಇತ್ತೀಚೆಗೆ ನಡೆದ ಸಮಿತಿಯ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು.

1969 ರಲ್ಲಿ ಪ್ರೌಢಶಾಲೆ ಮತ್ತು ಕಾಲೇಜುಗಳನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಹೆಗಡೆಯವರು ನೀಡಿದ ಪ್ರೋತ್ಸಾಹ, ಬೆಂಬಲವನ್ನು ಸಮಿತಿ ಎಂದಿಗೂ ಮರೆಯಲಾಗದು. ಸಮಿತಿಯ ಸಂಸ್ಥಾಪಕರಾದ ಗಣೇಶ ಹೆಗಡೆಯವರಿಗೆ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಲು ಹೆಗಡೆ ಹೆಗಲು ಕೊಟ್ಟು ನಿಂತವರು. ಆರ್ಥಿಕವಾಗಿ ತೊಂದರೆಯಾದಾಗ ಸಹಾಯಹಸ್ತ ನೀಡಿದವರು ಎಂದು ಹೆಗಡೆಯವರನ್ನು ವಿನಾಯಕ ರಾವ್‌ ಸ್ಮರಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+