ಹೆಗಡೆ ನಿಷ್ಠರ ವಲಸೆ ಆರಂಭ: ಬಿಜೆಪಿ ಸೇರಿದ ಜಿಗಜಿಣಗಿ, ಶಾಣಪ್ಪ
ಹೆಗಡೆ ನಿಷ್ಠರ ವಲಸೆ ಆರಂಭ: ಬಿಜೆಪಿ ಸೇರಿದ ಜಿಗಜಿಣಗಿ, ಶಾಣಪ್ಪ
ಕಾಂಗ್ರೆಸ್ಸಿನ ಮನೋರಮಾಗೂ ಬಿಜೆಪಿಯಲ್ಲೇ ಆರಾಮ !
ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಭಾನುವಾರ ಜರುಗಿದ ಬಿಜೆಪಿ ರಾಜ್ಯ ಪರಿಷತ್ ಸಮಾವೇಶದಲ್ಲಿ ಜಿಗಜಿಣಗಿ ಹಾಗೂ ಮನೋರಮಾ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾದರು. ಇವರೊಂದಿಗೆ ಮಾಜಿ ಶಾಸಕರಾಗ ಗೋವಿಂದ ಕಾರಜೋಳ , ಕೆ.ಬಿ.ಶಾಣಪ್ಪ ಮುಂತಾದವರು ಕೂಡ ಬಿಜೆಪಿ ಪಾಳಯಕ್ಕೆ ಸೇರಿಕೊಂಡರು.
ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕಟ್ಟಾ ಬೆಂಬಲಿಗರಾಗಿದ್ದ ರಮೇಶ ಜಿಗಜಿಣಗಿ ಮತ್ತು ಶಾಣಪ್ಪ ಬಿಜೆಪಿ ಸೇರುವುದರೊಂದಿಗೆ ಹೆಗಡೆ ನಿಷ್ಠರ ವಲಸೆಗೆ ಚಾಲನೆ ದೊರೆತಂತಾಗಿದೆ. ಮಾಜಿ ಸಚಿವೆ ಮನೋರಮಾ ಮಧ್ವರಾಜ್ ಅವರು ಕಾಂಗ್ರೆಸ್ಸಿನಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎನ್ನುವ ನೋವಿನ ಹಿನ್ನೆಲೆಯಲ್ಲಿ ಬಿಜೆಪಿಗೆ ಸೇರ್ಪಡೆ ಹೊಂದಿದ್ದಾರೆ ಎನ್ನಲಾಗಿದೆ.
ವಿವಿಧ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಿಜೆಪಿ ರಾಷ್ಟ್ರಾಧ್ಯಕ್ಷ ವೆಂಕಯ್ಯ ನಾಯ್ಡು- ರಾಮಕೃಷ್ಣ ಹೆಗಡೆ ಅವರ ಅನುಯಾಯಿಗಳು ಬಿಜೆಪಿಗೆ ಸೇರ್ಪಡೆಯಾಗಬೇಕೆಂದು ಕರೆ ನೀಡಿದರು. ಇನ್ನೊಂದು ತಿಂಗಳಲ್ಲಿ ಕರ್ನಾಟಕದಲ್ಲಿ ಮಹತ್ತರ ರಾಜಕೀಯ ಬದಲಾವಣೆಗಳು ಸಂಭವಿಸಲಿವೆ ಎಂದೂ ವೆಂಕಯ್ಯ ನಾಯ್ಡು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications