ಮೈಸೂರು ಮೃಗಾಲಯದ ಬಿಳಿ ಹುಲಿ ರಾಜನ್‌ಗೆ ‘ರಾಜ ಚಿಕಿತ್ಸೆ’ !
ಮೈಸೂರು ಮೃಗಾಲಯದ ಬಿಳಿ ಹುಲಿ ರಾಜನ್‌ಗೆ ‘ರಾಜ ಚಿಕಿತ್ಸೆ’ !
ಭಾರತೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಂಧಿತ ಪ್ರಾಣಿಗೆ ವಿಐಪಿ ಚಿಕಿತ್ಸೆ
ಕಳೆದ 20 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ರಾಜನ್ ಹೆಸರಿನ ಬಿಳಿಹುಲಿಯನ್ನು ಮೈಸೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್ ಪರೀಕ್ಷೆಗೆ ಒಳಪಡಿಸಲಾಯಿತು. ಏಳು ವರ್ಷಗಳ ರಾಜನ್‌ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ನೀಡಲಾಯಿತು.
ಮೃಗಾಲಯದಲ್ಲಿನ ವೈದ್ಯರು ರಾಜನ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಜನ್‌ನನ್ನು ಬೆಂಗಳೂರಿಗೆ ಒಯ್ಯಬೇಕೆಂದು ಅಭಿಪ್ರಾಯಪಟ್ಟಿದ್ದರು. ಮೃಗಾಲಯದ ಆಸ್ಪತ್ರೆಯಲ್ಲಿ ತೆಗೆದಿರುವ ಎಕ್ಸರೇ ಚಿತ್ರದಲ್ಲಿ ರಾಜನ್ ಬೆನ್ನುಮೂಳೆಯ ತೊಂದರೆ ಅನುಭವಿಸುತ್ತಿರುವುದಾಗಿ ತಿಳಿದುಬಂದಿದೆ.
ರಾಜನ್‌ಗೆ ಚಿಕಿತ್ಸೆ ನೀಡಲು ಮುಂದಾಗಿರುವ ಮೈಸೂರಿನ ವಿಕ್ರಂ ಆಸ್ಪತ್ರೆಯ ಡಾ.ರಾಜೇಶ್ವರ್- ರಾಜನ್‌ನನ್ನು ಆಸ್ಪತ್ರೆಗೊಯ್ದು ಸಿಟಿ ಸ್ಕ್ಯಾನ್ ಸಹಿತ ಆಮೂಲಾಗ್ರ ಪರೀಕ್ಷೆಗೆ ಒಳಪಡಿಸಿದ್ದಾರೆ. ಚಿಕಿತ್ಸೆ ಮುಂದುವರಿಯುತ್ತಿದೆ ಎಂದು ಮೃಗಾಲಯದ ಕಾರ್ಯಕಾರಿ ನಿರ್ದೇಶಕ ಕುಮಾರ್ ಪುಷ್ಕರ್ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications