ಧರ್ಮದ ಹೆಸರಿನಲ್ಲಿ ಸಮಾಜ ಚೂರುಚೂರು -ಎಸ್ಸೆಂ.ಕೃಷ್ಣ ವಿಷಾದ
ಧರ್ಮದ ಹೆಸರಿನಲ್ಲಿ ಸಮಾಜ ಚೂರುಚೂರು -ಎಸ್ಸೆಂ.ಕೃಷ್ಣ ವಿಷಾದ
ಅಲ್ಪ ಸಂಖ್ಯಾತರು ಒಂದಾಗುವಂತೆ ಸಂಸದ ಜಾಫರ್ ಷರೀಫ್ ಕರೆ
ದಕ್ಷಿಣ ಭಾರತ ಚರ್ಚ್‌ಗಳ 29ನೇ ಸಭೆಯ ಆಹ್ವಾನಿತರನ್ನು ಗೌರವಿಸುವ ಸಮಾರಂಭದಲ್ಲಿ ಪಾಲ್ಗೊಂಡು (ಜ.11, ಭಾನುವಾರ) ಮಾತನಾಡಿದ ಮುಖ್ಯಮಂತ್ರಿ ಕೃಷ್ಣ , ಇತ್ತೀಚಿನ ದಿನಗಳಲ್ಲಿ ಪ್ರೀತಿ, ಶಾಂತಿ ಹಾಗೂ ಸೌಹಾರ್ದತಾ ಗುಣಗಳು ಕುಂದುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿನ ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ಧರ್ಮದ ಹೆಸರಿನಲ್ಲಿ ಸಮಾಜವನ್ನ್ನು ಒಡೆಯುವ ಪ್ರಯತ್ನದಲ್ಲಿವೆ. ಇದು ಕಳೆದ 55 ವರ್ಷಗಳಲ್ಲಿನ ಅತ್ಯಂತ ದುರದೃಷ್ಟಕರ ಹಾಗೂ ವಿಷಾದಕರ ಬೆಳವಣಿಗೆ ಎಂದು ಕೃಷ್ಣ ಬಣ್ಣಿಸಿದರು. ಜಾತ್ಯತೀತತೆ ನಮ್ಮೆಲ್ಲರನ್ನು ಬಂಧಿಸಿದೆ. ಈ ದೇಶ ನಮ್ಮೆಲ್ಲರಿಗೂ ಸೇರಿದ್ದಾಗಿದೆ. ನಮ್ಮ ಧರ್ಮವನ್ನು ಮೀರಿ ಜನರಲ್ಲಿ ಐಕ್ಯತೆಯನ್ನು ಮೂಡಿಸಬೇಕಾದುದು ಈ ಹೊತ್ತಿನ ಜರೂರಾಗಿದೆ ಎಂದು ಕೃಷ್ಣ ಬಣ್ಣಿಸಿದರು.
ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ಕೊಡುಗೆಯನ್ನು ಕೃಷ್ಣ ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಸಿ.ಕೆ.ಜಾಫರ್ ಷರೀಫ್ ಅವರು ಅಲ್ಪ ಸಂಖ್ಯಾತರೆಲ್ಲ ಒಂದಾಗಬೇಕು ಎಂದು ಕರೆ ನೀಡಿದರು.
ದಕ್ಷಿಣ ಭಾರತ ಚರ್ಚ್‌ಗಳ ಸಂಸ್ಥೆಯ ಮುಖ್ಯಸ್ಥ ರೆ. ಡಾ.ಬಿ.ಪಿ.ಸುಗಂಧರ್, ಡಾ.ಪಾಲಿನ್ ಸತ್ಯಮೂರ್ತಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications