Get Updates
Get notified of breaking news, exclusive insights, and must-see stories!

ಹೆಗಡೆ ನಿಧನ : ಉದುರಿದ ಮೌಲ್ಯಾಧಾರಿತ ರಾಜಕಾರಣದ ‘ದಳ’

ಹೆಗಡೆ ನಿಧನ : ಉದುರಿದ ಮೌಲ್ಯಾಧಾರಿತ ರಾಜಕಾರಣದ ‘ದಳ’
ಮೆದುಳಿನಲ್ಲಿ ರಕ್ತಸ್ರಾವ, ಸೋಮವಾರ ಮಧ್ಯಾಹ್ನ ಹೆಗಡೆ ವಿಧಿವಶ

ಬೆಂಗಳೂರು : ಮೌಲ್ಯಾಧಾರಿತ ರಾಜಕಾರಣದ ಕನಸು ಕಂಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕೀಯ ಧುರೀಣ ರಾಮಕೃಷ್ಣ ಹೆಗಡೆ ಸೋಮವಾರ (ಜನವರಿ 12) ಮಧ್ಯಾಹ್ನ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು .

ಸೋಮವಾರ ಮಧ್ಯಾಹ್ನ 02.15ರ ಸುಮಾರಿಗೆ ರಾಮಕೃಷ್ಣ ಹೆಗಡೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬ ವೈದ್ಯ ಡಾ.ರಮಣ ರಾವ್‌ ತಿಳಿಸಿದ್ದಾರೆ. ಕೆಲ ತಿಂಗಳುಗಳಿಂದ ತೀವ್ರ ಅನಾರೋಗ್ಯದಿಂದ ರಾಮಕೃಷ್ಣ ಹೆಗಡೆ ಬಳಲುತ್ತಿದ್ದರು. ಪತ್ನಿ ಶಕುಂತಲಾ ಹೆಗಡೆ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಹೆಗಡೆ ಅಗಲಿದ್ದಾರೆ.

ಭಾನುವಾರ (ಜ.11) ರಾತ್ರಿ ಮತ್ತೊಂದು ಆಘಾತಕ್ಕೆ ಒಳಗಾದ ಹೆಗಡೆ ಅವರ ಮೆದುಳಿನಲ್ಲಿ ವೀಪರೀತ ರಕ್ತಸ್ರಾವ ಉಂಟಾಯಿತು ಎಂದು ಡಾ.ರಮಣರಾವ್‌ ತಿಳಿಸಿದ್ದಾರೆ. ಕಳೆದ ವರ್ಷ ಲಂಡನ್‌ನಲ್ಲಿ ಮೆದುಳು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಹೆಗಡೆ, ಸಕ್ರಿಯ ರಾಜಕಾರಣದಿಂದ ದೂರವುಳಿದಿದ್ದರು.

ಜನತಾದಳದ ಉಭಯ ಬಣಗಳ ವಿಲೀನದ ಕುರಿತು ಆಶಾಭಾವ ಹೊಂದಿದ್ದ ಹೆಗಡೆ, ಇತ್ತೀಚೆಗೆ ವಿಜಯ್‌ ಮಲ್ಯ ಅವರ ಜನತಾಪಕ್ಷದೊಂದಿಗೆ ಪ್ರಗತಿಪರ ಜನತಾದಳ ವಿಲೀನ ಹೊಂದುವ ಕುರಿತು ಒಲವು ವ್ಯಕ್ತಪಡಿಸುತ್ತಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+