ಮಾಜಿ ಡಿಜಿಪಿ ಎಲ್‌.ರೇವಣಸಿದ್ಧಯ್ಯರಿಂದ ಛಾಪಪಾಪ ನಿರಾಕರಣೆ

ಮಾಜಿ ಡಿಜಿಪಿ ಎಲ್‌.ರೇವಣಸಿದ್ಧಯ್ಯರಿಂದ ಛಾಪಪಾಪ ನಿರಾಕರಣೆ
ಸಂತೋಷ್‌ ಗಾಡಿಯರಿಗೆ ಸಲಹೆ ನೀಡಿದ್ದು ನಿಜ, ಅದು ಅಪರಾಧವೇನಲ್ಲ

ಬೆಂಗಳೂರು : ಬಹುಕೋಟಿ ಛಾಪ ಪಾಪ ಪ್ರಕರಣದಲ್ಲಿ ತಾವು ಭಾಗಿಯಾಗಿಲ್ಲ . ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವೂ ಇಲ್ಲ ಎಂದು ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ ಎಲ್‌.ರೇವಣಸಿದ್ಧಯ್ಯ ಸ್ಪಷ್ಟಪಡಿಸಿದ್ದಾರೆ.

ಛಾಪ ಪಾಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಮಂಡಲದಲ್ಲಿ ಬಿಜೆಪಿ ನಾಯಕರುಗಳು ಹಾಜರುಪಡಿಸಿರುವ ದಾಖಲೆಗಳಲ್ಲಿ ನಿವೃತ್ತ ಐಪಿಎಸ್‌ ಅಧಿಕಾರಿಯಾಬ್ಬರ ಹೆಸರಿದೆ ಎನ್ನುವ ಸುದ್ದಿ ಭಾರೀ ಗುಲ್ಲಾಗಿತ್ತು . ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣಸಿದ್ಧಯ್ಯ, ತೆಲಗಿ ಸೇರಿದಂತೆ ಛಾಪ ಕೂಪದ ಯಾವ ಆರೋಪಿಯಾಂದಿಗೂ ತಮಗೆ ಸಂಬಂಧ ಇರಲಿಲ್ಲ , ಮುಂದೆಯೂ ಇರುವುದಿಲ್ಲ ಎಂದರು.

ಬಿಜೆಪಿ ನಾಯಕರು ಹಾಜರುಪಡಿಸಿರುವ ದಾಖಲೆಗಳಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿಲ್ಲ . ಆ ದಾಖಲೆಗಳಲ್ಲಿ ಉಲ್ಲೇಖವಾಗಿರುವ ಖಾಸಗಿ ಕಂಪನಿಗಳಲ್ಲೊಂದರ ಸಂತೋಷ್‌ ಗಾಡಿಯ ಎನ್ನುವ ವ್ಯಕ್ತಿ ಈ ಮುನ್ನ ಒಮ್ಮೆ ಕಾನೂನು ಸಲಹೆ ಕೇಳಿದ್ದರು. ಅವರಿಗೆ ಸಲಹೆ ನೀಡಿದುದು ಷೇರು ಪ್ರಕರಣಕ್ಕೆ ಸಂಬಂಧಿಸಿದಂತೆ. ಈ ಸಲಹೆಗೆ ಶುಲ್ಕವನ್ನೂ ಪಡೆದಿಲ್ಲ. ಪೊಲೀಸ್‌ ಇಲಾಖೆಯಿಂದ ನಿವೃತ್ತನಾದ ನಂತರ ನೂರಾರು ಮಂದಿ ಈ ರೀತಿಯ ಸಲಹೆಗಳನ್ನು ತಮ್ಮಿಂದ ಪಡೆದಿದ್ದಾರೆ ಎಂದು ರೇವಣಸಿದ್ಧಯ್ಯ ಹೇಳಿದರು.

ನಾನು ನಿವೃತ್ತನಾದ ಒಂದೂವರೆ ವರ್ಷದ ನಂತರ ಬಹುಕೋಟಿ ಛಾಪಾ ಹಗರಣ ಬೆಳಕಿಗೆ ಬಂದಿದೆ. ಹೀಗಿರುವಾಗ ಪ್ರಕರಣದಲ್ಲಿ ನಾನು ಭಾಗಿಯಾಗುವುದು ಹೇಗೆ ಸಾಧ್ಯ ಎಂದು ರೇವಣಸಿದ್ಧಯ್ಯ ಹೇಳಿದರು. ಸಂತೋಷ್‌ ಗಾಡಿಯ ಅವರಿಗೆ ಕಾನೂನು ಸಲಹೆ ನೀಡಿರುವ ಕುರಿತು ಸ್ಟಾಂಪಿಟ್‌ ಬಯಸಿದಲ್ಲಿ ವಿವರಣೆ ನೀಡುವುದಾಗಿಯೂ ಅವರು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+