ಸಂಕ್ರಾಂತಿಯಿಂದ ನಂದಿನಿ ಹಾಲು ಪ್ರತಿ ಲೀಟರ್‌ಗೆ 1ರು. ದುಬಾರಿ
ಸಂಕ್ರಾಂತಿಯಿಂದ ನಂದಿನಿ ಹಾಲು ಪ್ರತಿ ಲೀಟರ್‌ಗೆ 1ರು. ದುಬಾರಿ
ಹಾಲಿನ ಬೆಲೆ ಲೀಟರ್‌ಗೆ 12 ರುಪಾಯಿಯಿಂದ 13 ರುಪಾಯಿಗೆ ಏರಿಕೆ
ಹಾಲಿನ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಬೆಲೆಯನ್ನು ಲೀಟರ್‌ಗೆ 1 ರುಪಾಯಿ ಮಾತ್ರ ಹೆಚ್ಚಿಸಲಾಗಿದೆ ಎಂದು ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಕಾರ್ಯಕಾರಿ ನಿರ್ದೇಶಕ ಬಿ.ಎಸ್.ಗಂಗಾಧರ್ ತಿಳಿಸಿದ್ದಾರೆ. ಬೆಲೆ ಹೆಚ್ಚಳದಿಂದಾದಿ ಪ್ರಸ್ತುತ 12 ರುಪಾಯಿ ಇರುವ ಹಾಲಿನ ಬೆಲೆ ಸಂಕ್ರಾಂತಿಯಿಂದ ಲೀಟರ್‌ಗೆ 13 ರುಪಾಯಿ ಆಗಲಿದೆ.
ಹಾಲಿನ ಬೆಲೆಯನ್ನು ಜನವರಿ 1ರಿಂದಲೇ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಅನುಮತಿ ನೀಡಿತ್ತು . ಆದರೆ ಗ್ರಾಹಕರಿಗೆ ಹೊಸ ವರ್ಷದ ಷಾಕ್ ನೀಡುವುದು ಬೇಡವೆಂದು, ಜ.14ರಿಂದ ಹಾಲಿನ ದರ ಹೆಚ್ಚಿಸಲು ಕೆಎಂಎಫ್ ಮಂಡಳಿ ನಿರ್ಧರಿಸಿದೆ ಎಂದು ಗಂಗಾಧರ್ ಹೇಳಿದರು.
ಪ್ರಸ್ತುತ ಕೆಎಂಎಫ್ ಛತ್ರಿಯಡಿ 13 ಹಾಲು ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಬೆಲೆ ಏರಿಕೆಯ ಬಗೆಗೆ ಇವುಗಳು ಸ್ವತಂತ್ರ ನಿರ್ಣಯ ಕೈಗೊಳ್ಳಲಿವೆ. ತಂತಮ್ಮ ಆರ್ಥಿಕ ಸ್ಥಿತಿಗತಿಗನುಗುಣವಾಗಿ ಹಾಲಿನ ದರದಲ್ಲಿ ಹೆಚ್ಚಳವನ್ನು ಈ ಸಂಘಗಳು ನಿರ್ಧರಿಸಲಿವೆ ಎಂದೂ ಗಂಗಾಧರ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications