ಛಾಪ ಪಾಪ ಆರೋಪಿ ಗೋಟೆ ಡೈರಿಯಲ್ಲಿ ಮಾಜಿ ಪ್ರಧಾನಿಗಳು!
ಛಾಪ ಪಾಪ ಆರೋಪಿ ಗೋಟೆ ಡೈರಿಯಲ್ಲಿ ಮಾಜಿ ಪ್ರಧಾನಿಗಳು!
ಇಲ್ಲಿವೆ ನೋಡಿ ಛಾಪ ಪಾಪದ ವಿವರಗಲನ್ನೊಳಗೊಂಡ ರಹಸ್ಯ ಡೈರಿಯಲ್ಲಿನ ಕೆಲವು ವಿವರಗಳು :
ಇಬ್ಬರು ಮಾಜಿ ಪ್ರಧಾನಿಗಳಾದ ಚಂದ್ರಶೇಖರ್ ಹಾಗೂ ವಿ.ಪಿ.ಸಿಂಗ್ ಮತ್ತು ಉಪ ಪ್ರಧಾನಮಂತ್ರಿ ಅವರು ಅನಿಲ್ ಗೋಟೆಯ ಪರಿಚಯ ಹೊಂದಿರುವುದಾಗಿ ಡೈರಿಯಲ್ಲಿನ ಬರಹ ಹೇಳುತ್ತಿದೆಯಂತೆ !
ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ - ದೆಹಲಿಯಿಂದ ಮುಂಬೈಗೆ ಪ್ರಯಾಣಿಸುವಾಗ ಆ ವಿಮಾನದಲ್ಲಿ ಗೋಟೆ ಕೂಡ ಚಂದ್ರಶೇಖರ್‌ಗೆ ಕಂಪನಿ ಕೊಟ್ಟಿದ್ದರಂತೆ. ಇನ್ನು ದೇವಿಲಾಲ್ ಮಹಿಮೆ. ಗೋಟೆಯವರಿಗೆ ಮಹಾರಾಷ್ಟ್ರ ಸರ್ಕಾರ ಸ್ವಾಮ್ಯದಲ್ಲಿನ ಹೊಟೇಲ್ ಅಶೋಕದ ನಿರ್ದೇಶಕ ಸ್ಥಾನ ಕೊಡಿಸಿದ್ದೇ ದೇವಿಲಾಲ್‌ಅಂತೆ. ಎಲ್ಲಕ್ಕಿಂತ ಮುಖ್ಯವಾಗಿ, ವಿರೋಧ ಪಕ್ಷದ ನಾಯಕರಾದ ಬಿಜೆಪಿಯ ಗೋಪಿನಾಥ್ ಮುಂಡೆ ಮತ್ತು ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ, ಗೋಟೆಯವರನ್ನು ಮಹಾರಾಷ್ಟ್ರ ವಿಧಾನಸಭೆಯ ಸಭಾಪತಿ ಸ್ಥಾನಕ್ಕೆ ಬೆಂಬಲಿಸಿದ್ದರಂತೆ.
ಇಷ್ಟೆಲ್ಲಕ್ಕೂ ಗೋಟೆ ಚೆಲ್ಲಿದ ಹಣ ಅಷ್ಟಿಷ್ಟಲ್ಲ . ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿ ಸಹಾಯದಿಂದ ಗೋಟೆ ಇದೆಲ್ಲ ಹಣ ಸುರಿಯುವುದು ಸಾಧ್ಯವಾಯಿತು ಎನ್ನುತ್ತಿದೆ ಪೊಲೀಸ್ ಮೂಲ. ಆದರೆ, ಅದೆಲ್ಲ ನಿರರ್ಥಕವಾಯ್ತು.
ಗೋಟೆಯ ಐಶಾರಾಮದ ಬದುಕಿನ ಕಪ್ಪು ಹಣದ ಮೂಲ ಮಾತ್ರ ಈಚಿನವರೆಗೂ ಯಾರಿಗೂ ತಿಳಿದಿರಲಿಲ್ಲ. ಗೋಟೆ ಪಾಲಿಗೆ ಮಾಜಿ ಪ್ರಧಾನಿ ಚಂದ್ರಶೇಖರ್ ಓರ್ವ ಆದರ್ಶ ವ್ಯಕ್ತಿ. ಆ ಕಾರಣವಾಗಿಯೇ ಮುಂಬೈನಲ್ಲಿದ್ದ ತಮ್ಮ ಜಾಗ ಮಾರಿ, ಚಂದ್ರಶೇಖರ್ ನೆಲೆಸಿದ್ದ ರಿಟ್ಜ್ ಹೊಟೇಲನ್ನೇ ಗೋಟೆ ಖರೀದಿ ಮಾಡಿದ್ದರು.
ಭೂಗತ ದೊರೆಗಳ ಜೊತೆಯೂ ಗೋಟೆಗೆ ಸಂಪರ್ಕವಿತ್ತು . ಸೂರ್ಯನಾರಾಯಣ ಸಿಂಗ್‌ಗೆ ಗೋಟೆ ಹಣ ಸುರಿಯುತ್ತಿದ್ದ. 10 ವರ್ಷಗಳ ಅವಧಿಯಲ್ಲಿ ಸುಮಾರು 73 ಲಕ್ಷ ರುಪಾಯಿ ಹಣವನ್ನು ತೆಲಗಿ ಭೂಗತಲೋಕಕ್ಕೆ ್ಫಕಪ್ಪ ಕಟ್ಟಿದ್ದಾನಂತೆ. ಗೋಟೆ ಪ್ರಕಾರ, ಇದಾವುದೂ ತಪ್ಪಲ್ಲ . ಇದೆಲ್ಲ ತಪ್ಪೆನ್ನುವುದಾದರೆ, ಜೈಲುಗಳ ತುಂಬ ಭೂಗತ ಸಂಬಂಧಿ ಕೆಲಸಗಳಿಗೆ ಹಣ ನೀಡಿದ ರಾಜಕಾರಣಿಗಳೇ ಇರುತ್ತಿದ್ದರು !
ಅಂದಹಾಗೆ, ಯಾವುದೋ ಒಂದು ಸಂದರ್ಭದಲ್ಲಿ ಒಂದೇ ದಿನ- ಒಬೆರಾಯ್ ಹೊಟೇಲ್‌ನಲ್ಲಿ 32 ಲಕ್ಷ ರೂಪಾಯಿ ಬಿಲ್‌ನ್ನು ಗೋಟೆ ಪಾವತಿಸಿದ್ದ !!
(ಏಜನ್ಸೀಸ್)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications