ಆರು ತಿಂಗಳ ಸೆರೆವಾಸದ ನಂತರ ಹೊರಬಂದರು ಪಿ. ನೆಡುಮಾರನ್
ಆರು ತಿಂಗಳ ಸೆರೆವಾಸದ ನಂತರ ಹೊರಬಂದರು ಪಿ. ನೆಡುಮಾರನ್
ಮದ್ರಾಸ್ ಹೈಕೋರ್ಟ್‌ನಿಂದ ನೆಡುಮಾರನ್‌ರಿಗೆ ಜಾಮೀನು
1993 ರಲ್ಲಿ ಎಲ್‌ಟಿಟಿಇ ಸಂಘಟನೆಯನ್ನು ಬೆಂಬಲಿಸುವಂಥ ಪುಸ್ತಕದ ಪ್ರಕಟಣೆಯ ಆರೋಪದ ಮೇಲೆ ನೆಡುಮಾರನ್ ಅವರನ್ನು ಬಂಧಿಸಲಾಗಿತ್ತು . ದಂತಚೋರ ವೀರಪ್ಪನ್ ಅಪಹರಣಕ್ಕೊಳಗಾಗಿದ್ದ ವರನಟ ರಾಜ್‌ಕುಮಾರ್ ಅವರ ಬಿಡುಗಡೆಯಲ್ಲಿ ನೆಡುಮಾರನ್ ಪ್ರಮುಖ ಪಾತ್ರ ವಹಿಸಿದ್ದರು.
ವೀರಪ್ಪನ್‌ನೊಂದಿಗೆ ಸಂಪರ್ಕ ಹೊಂದಿರುವ ಕುರಿತೂ ತಮಿಳುನಾಡು ಪೊಲೀಸರು ನೆಡುಮಾರನ್ ಮೇಲೆ ಕಣ್ಣಿಟ್ಟಿದ್ದಾರೆ. ಜಯಲಲಿತಾ ಅಧಿಕಾರಕ್ಕೆ ಬಂದ ಮೇಲೆ ನೆಡುಮಾರನ್ ಚಟುವಟಿಕೆಗಳ ಮೇಲಿನ ನಿಗಾ ತೀವ್ರಗೊಂಡಿದ್ದು , 2002 ರ ಆಗಸ್ಟ್ 1ರಂದು ಪೋಟ ಅನ್ವಯ ನೆಡುಮಾರನ್‌ರನ್ನು ಬಂಧಿಸಲಾಗಿತ್ತು .
ಚೆಂಗಲ್‌ಪಟ್ಟು ಸೆಷನ್ಸ್ ನ್ಯಾಯಾಲಯ ನೆಡುಮಾರನ್ ಅವರಿಗೆ ಜಾಮೀನು ನಿರಾಕರಿಸಿತ್ತು . ಆದರೆ, ಜನವರಿ 6ರಂದು ಮದ್ರಾಸ್ ಹೈಕೋರ್ಟ್ ನೆಡುಮಾರನ್ ಅವರಿಗೆ ಜಾಮೀನು ನೀಡಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications