ಪ್ರಗತಿಪರರೊಂದಿಗೆ ವಿಲೀನದ ಸಾಧ್ಯತೆಗೆ ದೇವೇಗೌಡ ಎಳ್ಳುನೀರು

ಪ್ರಗತಿಪರರೊಂದಿಗೆ ವಿಲೀನದ ಸಾಧ್ಯತೆಗೆ ದೇವೇಗೌಡ ಎಳ್ಳುನೀರು
ಪಕ್ಷವನ್ನು ಸಂಘಟಿಸಲು ಹಾಗೂ ಚುನಾವಣೆಗೆ ಸಿದ್ಧರಾಗಲು ಕಾರ್ಯಕರ್ತರಿಗೆ ಕರೆ

ಬೆಂಗಳೂರು : ಪ್ರಗತಿಪರ ಜನತಾದಳದೊಂದಿಗೆ ವಿಲೀನದ ಸಾಧ್ಯತೆ ಮುಗಿದ ಅಧ್ಯಾಯ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಘೋಷಿಸಿದ್ದಾರೆ. ಚುನಾವಣೆಗೆ ಸಿದ್ಧರಾಗುವಂತೆ ಜಾತ್ಯತೀತ ಜನತಾದಳದ ಕಾರ್ಯಕರ್ತರಿಗೆ ಅವರು ಕರೆ ನೀಡಿದ್ದಾರೆ.

ಬೆಂಗಳೂರು ಹೊರವಲಯದಲ್ಲಿ ಜ.7ರ ಬುಧವಾರ ನಡೆದ ಜಾತ್ಯತೀತ ಜನತಾದಳದ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ- ವಿಲೀನದ ಕುರಿತು ಮಾತನಾಡುತ್ತ ಸಮಯ ಕಳೆಯಬೇಡಿ, ಚುನಾವಣೆಗೆ ಇನ್ನೊಂದೇ ವರ್ಷ ಬಾಕಿಯಿರುವುದರಿಂದ ಈಗನಿಂದಲೇ ಚುನಾವಣೆಗೆ ಸಿದ್ಧರಾಗಿರಿ ಎಂದರು. ಪ್ರಗತಿಪರ ಜನತಾದಳದೊಂದಿಗೆ ವಿಲೀನದ ಯಾವುದೇ ಸಾಧ್ಯತೆಗಳನ್ನು ದೇವೇಗೌಡ ಸ್ಪಷ್ಟವಾಗಿ ತಳ್ಳಿಹಾಕಿದರು.

ವಿಲೀನದ ಪ್ರಸ್ತಾಪದೊಂದಿಗೆ ರಾಮಕೃಷ್ಣ ಹೆಗಡೆ ಸೇರಿದಂತೆ ಹಲವರ ಮನೆಯ ಬಾಗಿಲನ್ನು ನಾನು ತಟ್ಟಿದೆ. ಆದರೆ ಯಾವೊಬ್ಬ ನಾಯಕರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿಲ್ಲ . ಇನ್ನು ಮುಂದೆ ವಿಲೀನದ ಕುರಿತು ಮಾತನಾಡುವುದು ಬೇಡ. ಭೇಷರತ್ತಾಗಿ ಜಾತ್ಯತೀತ ದಳಕ್ಕೆ ಸೇರ್ಪಡೆ ಹೊಂದಲು ಯಾರಾದರೂ ಸಿದ್ಧರಿದ್ದರೆ ಅವರಿಗೆ ಸ್ವಾಗತ ಎಂದು ದೇವೇಗೌಡ ಹೇಳಿದರು.

ಪ್ರಗತಿಪರ ಜನತಾದಳದ ರಾಮಕೃಷ್ಣ ಹೆಗಡೆ ಹಾಗೂ ಬೊಮ್ಮಾಯಿ ಅವರನ್ನು ದೇವೇಗೌಡ ಪರೋಕ್ಷವಾಗಿ ಟೀಕಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+