ರಾಮಚಂದ್ರಾಪುರ ಮಠದಿಂದ ಭಾರತೀಯ ತಳಿ ಹಸುಗಳ ರಕ್ಷಣೆ

ರಾಮಚಂದ್ರಾಪುರ ಮಠದಿಂದ ಭಾರತೀಯ ತಳಿ ಹಸುಗಳ ರಕ್ಷಣೆ
ಜನವರಿ 13ರಿಂದ ಅಮೃತಧಾರ ಗೋಶಾಲೆ ಪ್ರಾರಂಭ

ಬೆಂಗಳೂರು : ಗೋಶಾಲೆಗಳಲ್ಲಿ ಭಾರತೀಯ ಹಸು ತಳಿಗಳ ಸಂರಕ್ಷಿಸುವ ಹಾಗೂ ಅಭಿವೃದ್ಧಿಗೊಳಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವೊಂದನ್ನು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹಮ್ಮಿಕೊಂಡಿದ್ದಾರೆ.

ಭಾರತೀಯ ಹಸು ತಳಿಗಳ ಅಭಿವೃದ್ಧಿ ಕಾರ್ಯಕ್ರಮದ ಒಂದು ಭಾಗವಾಗಿ ಅಮೃತ ಧಾರ ಗೋಶಾಲೆಯನ್ನು ಬೆಂಗಳೂರು ಹೊರವಲಯದ ಕಗ್ಗಲೀಪುರದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿ ಆರಂಭಿಸುತ್ತಿದ್ದು , ಜನವರಿ 13ರಂದು ಗೋಶಾಲೆ ಪ್ರಾರಂಭವಾಗಲಿದೆ. 50 ಲಕ್ಷ ರುಪಾಯಿಗಳ ಯೋಜನೆಯ ಈ ಗೋಶಾಲೆ 65 ಜಾನುವಾರುಗಳಿಗೆ ಆಶ್ರಯ ನೀಡಲಿದೆ.

ದಾನಿಗಳೊಬ್ಬರು ಗೋಶಾಲೆಗಾಗಿ ಎರಡು ಎಕರೆ ಭೂಮಿಯನ್ನು ದತ್ತಿಯಾಗಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಲ್ಲೂ ಮಾದರಿ ಗೋಶಾಲೆಗಳನ್ನು ಸ್ಥಾಪಿಸುವ ಉದ್ದೇಶ ಶ್ರೀಮಠಕ್ಕಿರುವುದಾಗಿ ಮಠದ ಪ್ರಕಟಣೆ ತಿಳಿಸಿದೆ.

ಕೆಲವು ಭಾರತೀಯ ್ಫಹಸುಗಳ ಮೂತ್ರದಿಂದ ಕ್ಯಾನ್ಸರ್‌ ಗುಣವಾಗುವ ವಿಷಯ ಈಗಾಗಲೇ ಸ್ಪಷ್ಟವಾಗಿದೆ. ಗೋಮೂತ್ರದಿಂದ ವಿವಿಧ ಔಷಧಿಗಳನ್ನು ಅಭಿವೃದ್ಧಿಪಡಿಸುವ ಕುರಿತೂ ಸಂಶೋಧನೆಗಳನ್ನು ನಡೆಸಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+