Get Updates
Get notified of breaking news, exclusive insights, and must-see stories!

ರೋಷನ್‌ಬೇಗ್‌ ಬಂಧನಕ್ಕೆಬಿಜೆಪಿ ಪಟ್ಟು ;ಸದನದಲ್ಲಿ ಕೋಲಾಹಲ

ರೋಷನ್‌ಬೇಗ್‌ ಬಂಧನಕ್ಕೆಬಿಜೆಪಿ ಪಟ್ಟು ;ಸದನದಲ್ಲಿ ಕೋಲಾಹಲ
ಛಾಪ ಪಾಪ ಪ್ರಕರಣ ನಿರ್ವಹಣೆ- ಕೃಷ್ಣ , ಖರ್ಗೆಗೆ ಪ್ರತಿಪಕ್ಷಗಳ ಛೀಮಾರಿ

ಬೆಂಗಳೂರು : ಬಹುಕೋಟಿ ಛಾಪ ಪಾಪ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರೋಷನ್‌ ಬೇಗ್‌ ಅವರನ್ನು ಕೂಡಲೇ ಬಂಧಿಸಬೇಕೆಂದು ಬಿಜೆಪಿ ನಾಯಕರು ಇಂದು (ಜ.7, ಬುಧವಾರ) ವಿಧಾನಸಭೆಯಲ್ಲಿ ಸರ್ಕಾರವನ್ನು ಆಗ್ರಹಪಡಿಸಿದರು.

ಬೇಗ್‌ರವರ ಪಾಸ್‌ಪೋರ್ಟ್‌ ಹಿಂತೆಗೆದುಕೊಳ್ಳುವ, ಆಸ್ತಿ ಮಟ್ಟಹಾಕುವ ಮತ್ತು ಬ್ಯಾಂಕ್‌ ಖಾತೆ ವಶಪಡಿಸಿಕೊಳ್ಳುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಿಜೆಪಿ ಸೇರಿದಂತೆ ವಿರೋಧ ಪಕ್ಷ ದ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.

ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹಾಗೂ ಗೃಹ ಮಂತ್ರಿ ಎಂ. ಮಲ್ಲಿಕಾರ್ಜುನ ಖರ್ಗೆಯವರು ನಕಲಿ ಛಾಪಾ ಹಗರಣವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆಂದು ನಿಲುವಳಿ ಸೂಚನೆ ಮಂಡಿಸುವ ವಿರೋಧ ಪಕ್ಷ ದ ನಾಯಕ ಜಗದೀಶ ಶೆಟ್ಟರ್‌ ಪ್ರಯತ್ನಕ್ಕೆ ಸಭಾಪತಿ ಎಂ.ವಿ. ವೆಂಕಟಪ್ಪ ಅವಕಾಶ ನಿರಾಕರಿಸಿದರು.

ರೋಷನ್‌ಬೇಗ್‌ ಅವರ ಬಂಧನಕ್ಕೆ ಒತ್ತಾಯಿಸಿ ವಿರೋಧಪಕ್ಷಗಳು ಗದ್ದಲ ಎಬ್ಬಿಸಿದುದರಿಂದ ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಒತ್ತಡದ ವಾತಾವರಣ ಉಂಟಾಗಿತ್ತು . ಪ್ರಕರಣವನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದೇಕೆ ಎಂದು ಶೆಟ್ಟರ್‌ ಪ್ರಶ್ನಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+