ಲೋಕಸಭೆ ಜೊತೆ ವಿಧಾನಸಭೆ ಚುನಾವಣೆ ; ಕೃಷ್ಣಸಂಪುಟ ಚಿಂತನೆ
ಲೋಕಸಭೆ ಜೊತೆ ವಿಧಾನಸಭೆ ಚುನಾವಣೆ ; ಕೃಷ್ಣಸಂಪುಟ ಚಿಂತನೆ
ರಾಜ್ಯದಲ್ಲಿ ಬಿಜೆಪಿ ಉತ್ಸಾಹ ಕಂಡು ಅವಧಿಗೆ ಮುನ್ನ ಚುನಾವಣೆ ಬಗ್ಗೆ ಯೋಚನೆ
ಕೃಷ್ಣ ಅವರ ಅಧಿಕೃತ ನಿವಾಸದಲ್ಲಿ ನಡೆದ ಹಿರಿಯ ಸಚಿವರ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಹಿಂದಿ ಮಾತನಾಡುವ ಮೂರು ರಾಜ್ಯಗಳಲ್ಲಿ ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ವಿಜಯ ಸಾಧಿಸಿದ್ದು , ಈ ವಿಜಯದ ಉತ್ಸಾಹದಲ್ಲಿ ರಾಜ್ಯ ಬಿಜೆಪಿ ಕೂಡ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೃಷ್ಣ ಈ ಸಭೆ ಕರೆದಿದ್ದರು.
ಚುನಾವಣೆ ಬಗ್ಗೆ ಸಚಿವರ ಸಭೆಯಲ್ಲಿ ಮಾತನಾಡಿದ ಕೃಷ್ಣ - ಚುನಾವಣೆ ಯಾವಾಗ ನಡೆದರೂ ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ ಎಂದಿದ್ದಾರೆ.
ಜನವರಿ 11ರಿಂದ ಹೈದರಾಬಾದ್‌ನಲ್ಲಿ ನಡೆಯುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಲೋಕಸಭೆ ಚುನಾವಣೆಗಳನ್ನು ಅವಧಿಗೆ ಮುನ್ನ ನಡೆಸುವ ವಿಷಯದ ಕುರಿತು ಚರ್ಚೆ ನಡೆಯುವ ಸಂಭವವಿದೆ. ಆಂಧ್ರದಲ್ಲಿನ ಚಂದ್ರಬಾಬು ನಾಯ್ಡು ಅವರು ಈಗಾಗಲೇ ವಿಧಾನಸಭೆಯನ್ನು ವಿಸರ್ಜಿಸಿದ್ದು ಚುನಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications