ಪರಿಷತ್ತಲ್ಲಿ ಕೃಷ್ಣರ ತಮ್ಮ ಸೇರಿದಂತೆ 13 ಹೊಸಬರ ಪ್ರಮಾಣವಚನ

ಪರಿಷತ್ತಲ್ಲಿ ಕೃಷ್ಣರ ತಮ್ಮ ಸೇರಿದಂತೆ 13 ಹೊಸಬರ ಪ್ರಮಾಣವಚನ
ಅಗಲಿದ ಗಣ್ಯರಿಗೆ ವಿಧಾನ ಪರಿಷತ್ತಿನ ಶ್ರದ್ಧಾಂಜಲಿ

ಬೆಂಗಳೂರು : ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಸಹೋದರ ಎಸ್ಸೆಂ.ಶಂಕರ್‌ ಸೇರಿದಂತೆ ಹದಿಮೂರು ನೂತನ ಸದಸ್ಯರು ವಿಧಾನ ಪರಿಷತ್‌ನಲ್ಲಿ ಮಂಗಳವಾರ (ಜ.6) ಪ್ರಮಾಣ ವಚನ ಸ್ವೀಕರಿಸಿದರು.

ಮಾಜಿ ಸಚಿವರಾದ ಎ.ಎಚ್‌.ಹಿಂಡಸಗೇರಿ ಹಾಗೂ ವೀರಕುಮಾರ್‌ ಪಾಟೀಲ್‌ ಪ್ರಮಾಣ ವಚನ ಸ್ವೀಕರಿಸಿದ ಇತರ ಪ್ರಮುಖರು. ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಇತರ ಕಾಂಗ್ರೆಸ್‌ ಸದಸ್ಯರು : ಅಮತೆಪ್ಪ ಕಂದಕೂರು, ಎಸ್‌.ಆರ್‌.ಪಾಟೀಲ್‌. ಕೆ.ಪ್ರತಾಪಚಂದ್ರ ಶೆಟ್ಟಿ , ಬ್ಲೇಸಿಯಸ್‌ ಡಿಸೋಜ, ಮಿರ್‌ ಅಜೀಜ್‌ ಅಹ್ಮದ್‌ ಮತ್ತು ಸಿದ್ದು ನ್ಯಾಮಗೌಡ.

ಪ್ರಗತಿಪರ ಜನತಾದಳದ ಬಿ.ಟಿ.ಚನ್ನಬಸಪ್ಪ , ಬಸವರಾಜ ಬೊಮ್ಮಾಯಿ ಹಾಗೂ ಜಾತ್ಯತೀತ ಜನತಾದಳದ ಬಿ.ಚಿದಾನಂದ ಮತ್ತು ಸತೀಶ್‌ ಜಾರಕಿಹೊಳಿ ಕೂಡ ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇತ್ತೀಚೆಗೆ ನಿಧನರಾದ- ಎ.ಎನ್‌.ಮೂರ್ತಿರಾವ್‌, ಎ.ಆರ್‌.ಬದರೀನಾರಾಯಣ್‌, ಅಶೋಕ ನಾರಾಯಣ ಪಾಟೀಲ್‌, ಜಿ.ವಿ.ಅಯ್ಯರ್‌, ಆರ್‌.ಕೆ.ಸೂರ್ಯನಾರಾಯಣ, ಎಂ.ವಿ.ವೆಂಕಟಪ್ಪ . ಕೆ.ಎಸ್‌.ನರಸಿಂಹಸ್ವಾಮಿ ಮತ್ತು ವೈ.ಕೆ.ರಾಮಯ್ಯ ಅವರಿಗೆ ಸದನ ಶ್ರದ್ಧಾಂಜಲಿ ಸಲ್ಲಿಸಿತು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+