ಸಕಲರಿಗೆ ಮನೆ, ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಯೋಜನೆ
ಸಕಲರಿಗೆ ಮನೆ, ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಯೋಜನೆ
ವಿಧಾನ ಮಂಡಲ ಅಧಿವೇಶನ ಪ್ರಾರಂಭ, ಕೃಷ್ಣ ಸರ್ಕಾರಕ್ಕೆ ಭ್ರಷ್ಟಾಚಾರ ರಹಿತ ಸರ್ಕಾರವೆಂಬ ಪ್ರಮಾಣಪತ್ರ
ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ (ಸೋಮವಾರ ಜ.5) ಚತುರ್ವೇದಿ ಅವರು ಸದನವನ್ನು ಉದ್ದೇಶಿಸಿ ಮಾತನಾಡಿದರು. 170 ಕೋಟಿ ರುಪಾಯಿ ವೆಚ್ಚದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ರಾಜ್ಯ ಸರ್ಕಾರ ಯೋಜನೆ ಕೈಗೊಳ್ಳಲಿದೆ, ಅಂತೆಯೇ 2005ನೇ ಇಸವಿಯಾಳಗೆ ರಾಜ್ಯದ ಎಲ್ಲರಿಗೂ ಸೂರು ಒದಗಿಸಲಿದೆ ಎಂದು ರಾಜ್ಯಪಾಲ ಚತುರ್ವೇದಿ ಸರ್ಕಾರದ ಧ್ಯೇಯೋದ್ದೇಶಗಳನ್ನು ತಮ್ಮ ಭಾಷಣದಲ್ಲಿ ಬಿಂಬಿಸಿದರು.
ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು :
- 2005ನೇ ಇಸವಿಯ ಅಂತ್ಯದೊಳಗೆ ಎಲ್ಲ ಬೃಹತ್ ಹಾಗೂ ಸಣ್ಣ ನೀರಾವರಿ ಯೋಜನೆಗಳ ಮುಕ್ತಾಯ.
- ಜೈವಿಕ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಭರವಸೆ ನೀಡಿರುವಂತೆ ಜೈವಿಕ ತಂತ್ರಜ್ಞಾನ ಪಾರ್ಕ್ ನಿರ್ಮಾಣ.
- ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ನೇತೃತ್ವದ ಸರ್ಕಾರ ಭ್ರಷ್ಟಾಚಾರ ಹಾಗೂ ಹಗರಣ ರಹಿತ ಸರ್ಕಾರ ಎನ್ನುವ ಘೋಷಣೆ.
- ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರ, ತನ್ನದೇ ಆದ ತೆರಿಗೆ ಆದಾಯದಲ್ಲಿ ಪ್ರತಿಶತ 15ರ ಹೆಚ್ಚಳ ಸಾಧಿಸಿದೆ.
- ಎಲ್ಲ ಗ್ರಾಮ ಪಂಚಾಯಿತಿಗಳನ್ನು ಕಂಪ್ಯೂಟರೀಕರಿಸಲು ಸರ್ಕಾರದ ಪ್ರಸ್ತಾಪ.
- ಗ್ರಾಮೀಣ ಜನತೆಗೆ ದಿನದ ಇಪ್ಪತ್ನಾಲ್ಕು ತಾಸೂ ಸಿಂಗಲ್‌ಫೇಸ್ ವಿದ್ಯುತ್ ಕಲ್ಪಿಸಲು ಕ್ರಮ.
- ಉತ್ತರ ಕರ್ನಾಟಕದ 20 ಪಟ್ಟಣಗಳು ಹಾಗೂ ಏಳು ಹೊಸ ಜಿಲ್ಲೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಏಷ್ಯನ್ ಅಭಿವೃದ್ಧಿ ಬ್ಯಾಂಕನ್ನು ಸಂಪರ್ಕಿಸಿದೆ.
- ರಾಜ್ಯದ ನಗರ ಪ್ರದೇಶಗಳಲ್ಲಿನ ಮೂಲಭೂತ ವ್ಯವಸ್ಥೆಯ ಉನ್ನತೀಕರಣಕ್ಕೆ ಸರ್ಕಾರದ ಆದ್ಯತೆ.
- ಬನ್ನೇರುಘಟ್ಟ ಉದ್ಯಾನದಲ್ಲಿ ಚಿಟ್ಟೆ ಉದ್ಯಾನ ನಿರ್ಮಾಣ.
- 2003ನೇ ಸಾಲಿನಲ್ಲಿ -951 ಸಾಫ್ಟ್‌ವೇರ್ ಕಂಪನಿಗಳು, 41 ಹಾರ್ಡ್‌ವೇರ್ ಕಂಪನಿಗಳು, 89 ಬಿಪಿಒ/ಐಇಟಿಎಸ್ ಕಂಪನಿಗಳು ರಾಜ್ಯದಲ್ಲಿ ತಮ್ಮ ಚಟುವಟಿಕೆ ಪ್ರಾರಂಭಿಸಿವೆ. ಇವುಗಳು ಹೂಡಿರುವ ಒಟ್ಟು ಬಂಡವಾಳ 8686 ಕೋಟಿ ರುಪಾಯಿ.
- ರಾಜ್ಯದ ರಫ್ತು 26,279 ಕೋಟಿ ರುಪಾಯಿಗೆ ಮುಟ್ಟಿದ್ದು , ಶೇ.25ರ ವಾರ್ಷಿಕ ಪ್ರಗತಿ ಸಾಧಿಸಿದೆ.
- ಜೈವಿಕ ತಂತ್ರಜ್ಞಾನ ಅಭಿವೃದ್ಧಿಗೆ ರಾಜ್ಯಸರ್ಕಾರ ಅಗತ್ಯ ಅನುಕೂಲಗಳನ್ನು ಕಲ್ಪಿಸುತ್ತಿದೆ. ಕಳೆದ 4 ವರ್ಷಗಳಲ್ಲಿ 92 ಜೈವಿಕ ತಂತ್ರಜ್ಞಾನ ಕಂಪನಿಗಳು ರಾಜ್ಯದಲ್ಲಿ ತಮ್ಮ ಚಟುವಟಿಕೆ ಪ್ರಾರಂಭಿಸಿವೆ.
- ಯಶಸ್ವಿನಿ ಯೋಜನೆ 16 ಲಕ್ಷ ರೈತರಿಗೆ ದೊರೆತಿದ್ದು , ಈ ಯೋಜನೆಯಡಿ 5 ಸಾವಿರ ರೈತರ ಹೃದಯ ಶಸ್ತ್ರಚಿಕಿತ್ಸೆ ನಡೆದಿದೆ.
- ಸಹಕಾರಿ ವಲಯದಲ್ಲಿ ಪ್ರಸಕ್ತ ವರ್ಷ 5 ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿವೆ.
- ಶೀಘ್ರದಲ್ಲೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭ. ಆದರೆ, ಈಗಾಗಲೇ ಹಲವು ಗಡುವುಗಳು ವಿಫಲವಾಗಿರುವುದರಿಂದ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಯಾವುದೇ ಡೆಡ್‌ಲೈನ್ ಗೊತ್ತುಪಡಿಸುವುದಿಲ್ಲ .
ರಾಜ್ಯಪಾಲ ಚತುರ್ವೇದಿ ಅವರ ವಿಧಾನಮಂಡಲದಲ್ಲಿನ ಚೊಚ್ಚಿಲ ಭಾಷಣವನ್ನು ಅತ್ಯಂತ ನಿರಾಶಾದಾಯಕ ಎಂದು ಪ್ರತಿಪಕ್ಷಗಳು ಬಣ್ಣಿಸಿವೆ.
ರಾಜ್ಯದ ಸಮಸ್ಯೆಗಳ ಕುರಿತು ನಿಖರ ಪರಿಹಾರವಿಲ್ಲ . ವಸ್ತುಸ್ಥಿತಿಯ ಕುರಿತು ಸರಿಯಾಗಿ ಬೆಳಕು ಚೆಲ್ಲಿಲ್ಲ . ಇದೊಂದು ನಿರಾಶಾದಾಯಕ ಭಾಷಣ ಎಂದು ಜಾತ್ಯತೀತ ಜನತಾದಳದ ಪಿಜಿಆರ್ ಸಿಂಧ್ಯಾ ಪ್ರತಿಕ್ರಿಯಿಸಿದ್ದಾರೆ. ಇದು ನೀರಸವಾದ ಭಾಷಣದ ಎಂದು ಜಗದೀಶ್ ಶೆಟ್ಟರ್ ಹೇಳಿದ್ದರೆ, ಈ ಭಾಷಣ ಕೃಷ್ಣ ಸರ್ಕಾರದ ಗಿಳಿಪಾಠ ಎಂದು ಬಚ್ಚೇಗೌಡ ಟೀಕಿಸಿದ್ದಾರೆ.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications