ರಾಜೀನಾಮೆ ಅಂಗೀಕಾರ, ಪಕ್ಷದ ಕೆಲಸಕ್ಕೆ ಬೇಗ್ ನೇಮಕ -ಕೃಷ್ಣ
ರಾಜೀನಾಮೆ ಅಂಗೀಕಾರ, ಪಕ್ಷದ ಕೆಲಸಕ್ಕೆ ಬೇಗ್ ನೇಮಕ -ಕೃಷ್ಣ
ನಾವು ಕುಂಬ್ಳೆ ಮತ್ತು ತೆಂಡೂಲ್ಕರ್ ರೀತಿಯಲ್ಲಿ ಆಡುತ್ತಿದ್ದೇವೆ...
ರೋಷನ್‌ಬೇಗ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಹಾಗೂ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಲಾಗಿದೆ ಎಂದು ಮುಖ್ಯಮಂತ್ರಿ ಕೃಷ್ಣ ಸೋಮವಾರ (ಜ.5)ಸುದ್ದಿಗಾರರಿಗೆ ತಿಳಿಸಿದರು. ಬೇಗ್ ಅವರು ಬಹುಕೋಟಿ ಛಾಪಾ ಪಾಪದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪಗಳನ್ನು ನಿರಾಕರಿಸಿದ ಕೃಷ್ಣ , ಬೇಗ್ ಅವರ ನಿರ್ಗಮನದ ಕೊರತೆಯನ್ನು ತುಂಬಲು ಸಚಿವ ಸಂಪುಟವನ್ನು ಸಣ್ಣ ಪ್ರಮಾಣದಲ್ಲಿ ಪುನರ್ರಚಿಸುವ ಇಂಗಿತ ವ್ಯಕ್ತಪಡಿಸಿದರು.
ಛಾಪಾ ಪಾಪ ಪ್ರಕರಣದಿಂದಾಗಿ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆಯೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ- ನಾವು ಅನಿಲ್‌ಕುಂಬ್ಳೆ ಮತ್ತು ತೆಂಡೂಲ್ಕರ್ ರೀತಿಯಲ್ಲಿ ಆಡುತ್ತಿದ್ದೇವೆ ಎಂದು ಕ್ರಿಕೆಟ್ ಲಹರಿಯಲ್ಲಿದ್ದ ಕೃಷ್ಣ ಹೇಳಿದರು.
ರಾಜ್ಯ ಸರ್ಕಾರದ ಇನ್ನಷ್ಟು ಸಚಿವರು ಛಾಪಾ ಪಾಪ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಅಂದರೆ ಇನ್ನಷ್ಟು ಸಚಿವರು ರಾಜೀನಾಮೆ ನೀಡಲಿದ್ದಾರೆಯೇ ಎನ್ನುವ ಪ್ರಶ್ನೆಗೆ ತುಸು ಕೆರಳಿದ ಮುಖ್ಯಮಂತ್ರಿ ಕೃಷ್ಣ - ಈ ಕುರಿತು ಊಹಿಸಲು ಬಿಜೆಪಿಯವರನ್ನೇ ಕೇಳಿ ಎಂದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications