ಕಥೆಗಾರ್ತಿ- ಕವಯತ್ರಿಯರ ಗಮನಕ್ಕೆ!
ಕಥೆಗಾರ್ತಿ- ಕವಯತ್ರಿಯರ ಗಮನಕ್ಕೆ!
ಕರ್ನಾಟಕ ಲೇಖಕಿಯರ ಸಂಘದಿಂದ ಮಹಿಳಾ ಬರಹಗಾರರಿಗೆ ದತ್ತಿನಿಧಿ ಸ್ಪರ್ಧೆ-2004
ಸ್ಪರ್ಧೆಗಳ ವಿವರ ಇಂತಿದೆ :
- ಸಾವಿತ್ರಮ್ಮ ದತ್ತಿನಿಧಿ ಸ್ಪರ್ಧೆ : 2002 ಮತ್ತು 2003ನೇ ಸಾಲಿನಲ್ಲಿ ಪ್ರಕಟವಾದ ಕಥಾ ಸಂಕಲನಗಳನ್ನು ಕಳುಹಿಸಬಹುದು. ಬಹುಮಾನದ ಮೊತ್ತ 7 ಸಾವಿರ ರುಪಾಯಿ. ಮೂರು ಕೃತಿಗಳನ್ನು ಕಳುಹಿಸಬೇಕು.
- ಗೀತಾ ದೇಸಾಯಿ ದತ್ತಿನಿಧಿ ಸ್ಪರ್ಧೆ : 2001, 02, 03ರಲ್ಲಿ ಪ್ರಕಟವಾದ ಕವನಸಂಕಲನಗಳನ್ನು ಕಳುಹಿಸಬಹುದು. ಬಹುಮಾನದ ಮೊತ್ತ 1 ಸಾವಿರ ರುಪಾಯಿ. ಮೂರು ಕೃತಿಗಳನ್ನು ಕಳುಹಿಸಬೇಕು.
- ಪ್ರೇಮಾಭಟ್ ದತ್ತಿನಿಧಿ ಕಥಾಸ್ಪರ್ಧೆ : ಈ ಸ್ಪರ್ಧೆ ಗ್ರಾಮಾಂತರ ಕಥೆಗಾರ್ತಿಯರಿಗಾಗಿ ನಡೆಯುತ್ತಿದೆ. 10 ಪುಟಗಳೊಳಗಿನ ಅಪ್ರಕಟಿತ ಕಥೆಯನ್ನು ಸ್ಪರ್ಧೆಗೆ ಕಳಿಸಬೇಕು.
- ಗುಡಿಬಂಡೆ ಪೂರ್ಣಿಮ ಕವನ ಸ್ಪರ್ಧೆ : 2003ನೇ ಇಸವಿಯಲ್ಲಿ ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟವಾದ ಕವಿತೆಗಳನ್ನು ಸ್ಪರ್ಧೆಗೆ ಕಳಿಸಬೇಕು. ಕವಿತೆ ಪ್ರಕಟವಾದ ಪತ್ರಿಕೆಯ ಹೆಸರು ಹಾಗೂ ದಿನಾಂಕವನ್ನು ನಮೂದಿಸಬೇಕು.
- ಬರಹಗಳನ್ನು ಕಳುಹಿಸಲು ಪ್ರತ್ಯೇಕ ವಿಳಾಸಧಿಗಳಿವೆ. ಸೂಕ್ಷ್ಮವಾಗಿ ಗಮನಿಸಿ.
- ಪ್ರೇಮಾಭಟ್ ದತ್ತಿನಿಧಿ ಕಥಾಸ್ಪರ್ಧೆ ಮತ್ತು ಗುಡಿಬಂಡೆ ಪೂರ್ಣಿಮ ಕವನ ಸ್ಪರ್ಧೆ ಗೆ ಕೊನೆಯ ದಿನಾಂಕ : ಫೆಬ್ರವರಿ 28, 2004. ಬರಹಗಳನ್ನು ಕಳುಹಿಸಲು ವಿಳಾಸ : ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ, ನಂ.206, 2ನೇ ಮಹಡಿ, ವಿಜಯ ಮ್ಯಾನ್‌ಶನ್ಸ್ , 2 ನೇ ತಿರುವು, 2ನೇ ಮುಖ್ಯರಸ್ತೆ , ಚಾಮರಾಜಪೇಟೆ, ಬೆಂಗಳೂರು- 560 018.
- ಸಾವಿತ್ರಮ್ಮ ದತ್ತಿ ಸ್ಪರ್ಧೆ ಹಾಗೂ ಗೀತಾ ದೇಸಾಯಿ ದತ್ತಿ ಸ್ಪರ್ಧೆಗೆ ಫೆಬ್ರವರಿ 15, 2004ರೊಳಗೆ ಕಳುಹಿಸಬೇಕು. ಬರಹಗಳನ್ನು ಕಳುಹಿಸಲು ವಿಳಾಸ- ಕರ್ನಾಟಕ ಲೇಖಕಿಯರ ಸಂಘ, ಸಮೃದ್ಧ , ಲಕ್ಷ್ಮೀ ರಸ್ತೆ , 7ನೇ ಅಡ್ಡರಸ್ತೆ , ಶಾಂತಿನಗರ, ಬೆಂಗಳೂರು.
ಮುಖಪುಟ / ವಾರ್ತೆಗಳು












Click it and Unblock the Notifications