ಛಾಪಾ ಛಾಪು : ಬೇಗ ರಾಜೀನಾಮೆ, ಬಂಧನಕ್ಕೆ ಬಿಜೆಪಿ ಆಗ್ರಹ
ಛಾಪಾ ಛಾಪು : ಬೇಗ ರಾಜೀನಾಮೆ, ಬಂಧನಕ್ಕೆ ಬಿಜೆಪಿ ಆಗ್ರಹ
ಬಿಜೆಪಿಯ ಹೋರಾಟಕ್ಕೆ ಸಂದ ವಿಜಯ- ಶೆಟ್ಟರ್ ಬಣ್ಣನೆ
ಜ.4ರಂದು ನಡೆದ ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕೆ ಸಚಿವ ರೋಷನ್ ಬೇಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬೇಗ್ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅಂಗೀಕರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರೋಷನ್ ಬೇಗ್ ಅವರ ಸಹೋದರ ರೆಹಾನ್‌ಬೇಗ್ ಅವರು ಬಹುಕೋಟಿ ಛಾಪ ಪಾಪದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿಯಾಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾಗಿದ್ದು , ಸದ್ಯ ರೆಹನ್ ಬೇಗ್ ಪೊಲೀಸರ ಬಂಧನದಲ್ಲಿದ್ದಾರೆ. ರೆಹನ್ ಬಂಧನದ ನಂತರ ರೋಷನ್ ಬೇಗ್ ಅವರು ಸಚಿವ ಸ್ಥಾನ ತ್ಯಜಿಸುವಂತೆ ಪ್ರತಿಪಕ್ಷಗಳು ಪ್ರತಿದಿನ ಒತ್ತಡ ಹೇರುತ್ತಿದ್ದವು.
ಇದು ನಮ್ಮ ವಿಜಯ : ಸಚಿವ ರೋಷನ್‌ಬೇಗ್ ಅವರ ರಾಜೀನಾಮೆ ಬಿಜೆಪಿಯ ಹೋರಾಟಕ್ಕೆ ಸಂದ ವಿಜಯ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ನಾಯಕ ಜಗದೀಶ್ ಶೆಟ್ಟರ್ ಬಣ್ಣಿಸಿದ್ದಾರೆ. ರೋಷನ್‌ಬೇಗ್ ರಾಜೀನಾಮೆ ಕೊಟ್ಟರಷ್ಟೇ ಸಾಲದು, ಅವರನ್ನು ತಕ್ಷಣವೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದೂ ಶೆಟ್ಟರ್ ಹೇಳಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications