ರೈತರ ಸಾವಿಗೆ ಏನು ಕಾರಣ? ಮಂಡ್ಯಜಿಲ್ಲಾ ಸಮೀಕ್ಷೆ ಹೇಳುತ್ತದೆ..
ರೈತರ ಸಾವಿಗೆ ಏನು ಕಾರಣ? ಮಂಡ್ಯಜಿಲ್ಲಾ ಸಮೀಕ್ಷೆ ಹೇಳುತ್ತದೆ..
ಜವಾಹರ್‌ಲಾಲ್ ರಾಷ್ಟ್ರೀಯ ಯುವ ಕೇಂದ್ರದಿಂದ ಸಮೀಕ್ಷೆ
ಮಂಡ್ಯ ಜಿಲ್ಲೆಯ 18 ಹಳ್ಳಿಗಳಲ್ಲಿ ವ್ಯಾಪಕ ಅಧ್ಯಯನ ನಡೆಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರೊಂದಿಗೆ ಹಾಗೂ ಹಳ್ಳಿಗಳ ಮುಖ್ಯಸ್ಥರೊಂದಿಗಿನ ಮಾತುಕತೆ ನಡೆಸಿದ ನಂತರ ಈ ಅಭಿಪ್ರಾಯಕ್ಕೆ ಬರಲಾಯಿತು ಎಂದು ಯುವಕೇಂದ್ರದ ಅಶ್ವಿನ್‌ಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಯಾಂದು ಆತ್ಮಹತ್ಯೆ ಪ್ರಕರಣದಲ್ಲೂ , ಸಾವಿಗೆ ಶರಣಾದ ರೈತ 10 ಸಾವಿರ ರುಪಾಯಿಯಿಂದ 1 ಲಕ್ಷ ರುಪಾಯಿಯವರೆಗೆ ಸಾಲ ಮಾಡಿರುವುದು ಕಂಡುಬಂದಿದೆ. ಬೆಳೆಹಾನಿಯಿಂದ ಈ ಸಾಲವನ್ನು ತೀರಿಸಲು ಸಾಧ್ಯವಾಗದೆ, ಬಡ್ಡಿಯ ಮೇಲೆ ಬಡ್ಡಿ ಸೇರಿ ಬೆಳೆಯುತ್ತಿರುವ ಸಾಲದಿಂದ ಕಂಗೆಟ್ಟು ನಿರಾಶರಾದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕನ್ನಂಬಾಡಿ ಕಟ್ಟೆಯ ನೀರನ್ನು ಒಕ್ಕಲಿಗಾಗಿ ಆಶ್ರಯಿಸಿದ ರೈತರು ಕಳೆದ ಮೂರು ವರ್ಷಗಳಿಂದ ನೀರಿನ ಕೊರತೆ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ಸಮೀಕ್ಷೆಯ ಸಂದರ್ಭದಲ್ಲಿ - ಸಾಲ ಮನ್ನಾ ಮಾಡುವಂತೆ, ಸುಲಭ ಬೆಲೆಗೆ ಬೀಜ ಹಾಗೂ ಕೀಟನಾಶಕ ಒದಗಿಸುವಂತೆ ಮತ್ತು ಬೆಳೆವಿಮೆ ಸೌಲಭ್ಯ ಕಲ್ಪಿಸುವಂತೆ ರೈತರು ಸರ್ಕಾರವನ್ನು ಕೋರಿದ್ದಾರೆ.
ಸಂತ್ರಸ್ತ ರೈತರ ನೆರವಿಗೆ ಧಾವಿಸುವಂತೆ ನೆಹರು ಯುವಕಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications