ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ನ ಪಿ.ಆರ್‌.ರಮೇಶ್‌ ಬೆಂಗಳೂರಿನ ಹೊಸ ಮೇಯರ್‌

By Super
|
Google Oneindia Kannada News

ಬೆಂಗಳೂರು : ನಗರದ ಹೊಸ ಮೇಯರ್‌ ಆಗಿ ಪಿ.ಆರ್‌.ರಮೇಶ್‌ ಹಾಗೂ ಉಪ ಮೇಯರ್‌ ಆಗಿ ಜಿ.ಬಸವರಾಜು ಆಯ್ಕೆಯಾಗಿದ್ದಾರೆ. ಇಬ್ಬರೂ ಕಾಂಗ್ರೆಸ್‌ ಪಕ್ಷದವರು.

ನಗರದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಶುಕ್ರವಾರ (ನ. 28) ನಡೆದ ಚುನಾವಣೆಯಲ್ಲಿ 41ನೇ ಮೇಯರ್‌ ಆಗಿ ವಿಶ್ವೇಶ್ವರಪುರ ವಾರ್ಡಿನ ರಮೇಶ್‌ ಹಾಗೂ 42ನೇ ಉಪ ಮೇಯರ್‌ ಆಗಿ ಮತ್ತಿಕೆರೆ ವಾರ್ಡಿನ ಜಿ.ಬಸವರಾಜು ಆಯ್ಕೆಯಾದರು. ಮೇಯರ್‌ ಗಾದಿಗೆ ಸ್ಪರ್ಧಿಸಿದ್ದ ಬಿಜೆಪಿಯ ಬಿ.ಸೋಮಶೇಖರ್‌ ಹಾಗೂ ಜಾತ್ಯತೀತ ಜನತಾ ದಳದ ಜಮೀಲ್‌ ಅಹ್ಮದ್‌ ಕ್ರಮವಾಗಿ 19 ಮತ್ತು 23 ಮತ ಗಳಿಸಿದರು. ಉಪ ಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ಗೀತಾ ಸದಾಶಿವ ಹಾಗೂ ಜಾತ್ಯತೀತ ದಳದಿಂದ ಮಾರಿಮುತ್ತು ಅರ್ಜಿ ಸಲ್ಲಿಸಿದ ಕಾರಣ ಚುನಾವಣೆ ಅನಿವಾರ್ಯವಾಯಿತು.

ಮೇಯರ್‌ ರಮೇಶ್‌ಗೆ 70 ಹಾಗೂ ಉಪ ಮೇಯರ್‌ ಬಸವರಾಜು ಅವರಿಗೆ 69 ಮತಗಳು ಸಂದವು.(ಇನ್ಫೋ ವಾರ್ತೆ)

English summary
P.R. Ramesh and G.Basavaraju elected as new Bangalore Mayor and Deputy mayor respectively. Both the candidates are from congress
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X