ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಾಪಾ ಹಗರಣದ ಸಿಬಿಐ ತನಿಖೆಗೆ ತಕರಾರಿಲ್ಲ -ಮಹಾರಾಷ್ಟ್ರ

By Staff
|
Google Oneindia Kannada News

ಛಾಪಾ ಹಗರಣದ ಸಿಬಿಐ ತನಿಖೆಗೆ ತಕರಾರಿಲ್ಲ -ಮಹಾರಾಷ್ಟ್ರ
ಜನವರಿ 18, 2004ರಂದು ಪ್ರಕರಣವನ್ನು ಸಿಬಿಐಗೆ ವಹಿಸುವ ಬಗ್ಗೆ ಅಂತಿಮ ನಿರ್ಧಾರ

ಮುಂಬಯಿ : ದೇಶಾದ್ಯಂತ ಸಂಚಲನೆ ಹುಟ್ಟಿಸಿರುವ ಬಹುಕೋಟಿ ರುಪಾಯಿಯ ನಕಲಿ ಛಾಪಾ ಕಾಗದ ಹಗರಣವನ್ನು ಸಿಬಿಐಗೆ ಒಪ್ಪಿಸುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಗುರುವಾರ (ನ. 26) ಹೈಕೋರ್ಟ್‌ಗೆ ಹೇಳಿಕೆ ಕೊಟ್ಟಿತು.

ಮಹಾರಾಷ್ಟ್ರದ ಅಡ್ವೊಕೇಟ್‌ ಜನರಲ್‌ ಘೂಲಂ ವಹಾನನ್‌ವಾಟಿ ಹೈಕೋರ್ಟಿಗೆ ಸರ್ಕಾರದ ಹೇಳಿಕೆ ಕೊಟ್ಟರು. ನಕಲಿ ಛಾಪಾ ಕಾಗದ ಹಗರಣದ ತನಿಖೆಯನ್ನು ಸಿಬಿಐ ನಡೆಸಬೇಕೋ ಬೇಡವೋ ಎಂಬ ತೀರ್ಮಾನ ಕೋರ್ಟಿಗೆ ಬಿಟ್ಟಿದ್ದು. ಈ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರದ ಯಾವುದೇ ತಕರಾರಿಲ್ಲ ಎಂದು ವಹಾನನ್‌ವಾಟಿ ಹೇಳಿದರು.

ವಾದ ವಿವಾದಗಳನ್ನು ಆಲಿಸಿದ ಹೈಕೋರ್ಟ್‌, ಸಿಬಿಐಗೆ ಪ್ರಕರಣ ವಹಿಸುವ ಬಗ್ಗೆ ಜನವರಿ 18, 2004ರಂದು ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿತು. ಅಲ್ಲಿಯವರೆಗೆ ವಿಶೇಷ ತನಿಖಾ ತಂಡ (ಸ್ಟಾಂಪಿಟ್‌) ತನಿಖೆ ಮುಂದುವರಿಸಲಿದೆ ಎಂದಿತು.

ಕರ್ನಾಟಕ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಸುತಾರಾಂ ಒಪ್ಪುತ್ತಿಲ್ಲ. ಆದರೆ, ಕೇಂದ್ರ ಸರ್ಕಾರದ ಆದೇಶದಂತೆ ಸಿಬಿಐ ತನಿಖೆ ನಡೆದರೆ ಬೆಂಬಲ ಕೊಡುವುದಾಗಿ ಹೇಳಿದೆ. ಕಾಂಗ್ರೆಸ್‌ ಸರ್ಕಾರಗಳು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಹಿಂದೇಟು ಹಾಕುತ್ತಿರುವ ಕಾರಣವನ್ನು ಬಿಜೆಪಿ ಪ್ರಶ್ನಿಸಿತ್ತು. ಆದರೆ, ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖೆಯನ್ನು ಒಪ್ಪಿಕೊಂಡಿರುವುದು ಈ ತಗಾದೆಗೆ ಅಪವಾದವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಕೃಷ್ಣ ಇದಕ್ಕೆ ಏನನ್ನುತ್ತಾರೆ?

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X