• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಸೋನಿಯಾ, ಕೃಷ್ಣ ಕೂಡ ಛಾಪಾ ಕಾಗದ ಹಗರಣದ ಪಾಪಿಗಳು’

By Super
|

ಣ್ಣ ಕೈಗಾರಿಕೆ ಸಚಿವ ರೋಷನ್‌ ಬೇಗ್‌ ಅಲ್ಲದೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್‌ ಬಹುಕೋಟಿ ಛಾಪಾ ಕಾಗದ ಹಗರಣದಲ್ಲಿ ಭಾಗಿಗಳಾಗಿದ್ದಾರೆ.

ಈ ಹಗರಣದಲ್ಲಿ ಕೇವಲ ಕಾಂಗ್ರೆಸ್ಸಿಗರು ಭಾಗಿಗಳಾಗಿದ್ದಾರೆಯೇ ವಿನಃ ಇತರೆ ಪಕ್ಷದವರಾರೂ ಇಲ್ಲ.

ಛಾಪಾ ಕಾಗದ ವಂಚಕ ಕರೀಂ ಲಾಲ ಜೊತೆಯಲ್ಲಿ ಆಗಿನ ಬೆಂಗಳೂರು ಉಪ ಆಯುಕ್ತ ಬಿ.ಎನ್‌.ನಾಗರಾಜ್‌ ಮತ್ತು ಇನ್ಸ್‌ಪೆಕ್ಟರ್‌ ಸೌದಾಗರ್‌ ಕೂಡ ಹಗರಣದಲ್ಲಿ ಭಾಗಿಯಾಗಿದ್ದಾರೆ.

ಮಡಿಯಾಳ್‌ ಮತ್ತು ಶ್ರೀಕುಮಾರ್‌ ಅವರಂಥ ಪೊಲೀಸ್‌ ಅಧಿಕಾರಿಗಳು ರಾಜಕೀಯ ಒತ್ತಡದಿಂದ ಸತ್ಯ ಗೊತ್ತಿದ್ದರೂ ಸುಮ್ಮನಿದ್ದಾರೆ.

ಆಗಿನ ಬೆಂಗಳೂರು ಪೊಲೀಸ್‌ ಆಯುಕ್ತ ಎಚ್‌.ಟಿ. ಸಾಂಗ್ಲಿಯಾನ ಅವರ ಮುಂದೆ ಕರೀಂ ಲಾಲ ತಪ್ಪೊಪ್ಪಿಕೊಂಡಿರುವುದು ಕ್ಯಾಸೆಟ್‌ನಲ್ಲಿ ಮುದ್ರಿತವಾಗಿದೆ. ಅದನ್ನು ಬಹಿರಂಗಪಡಿಸಿದರೆ, ಅನೇಕ ಮಂತ್ರಿಮಹೋದಯರ ಹೆಸರು ಬಯಲಾಗುತ್ತದೆ.

ನಿಜವಾದ ಕ್ಯಾಸೆಟ್ಟನ್ನು ಮುಚ್ಚಿಟ್ಟು, ಬೇರೆಯದೇ ಕ್ಯಾಸೆಟ್ಟನ್ನು ಮುಂಬಯಿ ಪೊಲೀಸರಿಗೆ ರಾಜ್ಯ ಸರ್ಕಾರ ಕೊಟ್ಟಿದೆ. ಹೀಗೆ ಕೊಟ್ಟಿರುವ ಕ್ಯಾಸೆಟ್ಟಲ್ಲಿ ಕರ್ನಾಟಕದ ಯಾವುದೇ ಪೊಲೀಸರ ಹೆಸರಾಗಲೀ ರಾಜಕಾರಣಿಗಳ ಹೆಸರಾಗಲೀ ಇಲ್ಲ.

ಲಾಲ ಇಂಥ ಕಡೆ ಇದ್ದಾನೆ ಅಂತ ಖುದ್ದು ಮಡಿಯಾಳ್‌ ಅವರಿಗೆ ಬಹಳ ಹಿಂದೆಯೇ ಸೂಚಿಸಿದ್ದೆ. ಆದರೆ ಅವರು ಏನೇನೂ ಕ್ರಮ ಕೈಗೊಳ್ಳಲಿಲ್ಲ.

ನನಗೆ ಸಿಕ್ಕಿರುವ ಸುಳಿವಿನ ಪ್ರಕಾರ ಕೊಯಮತ್ತೂರು ಮತ್ತಿತರ ಕಡೆಗಳಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟಗಳಿಗೆ ಕರೀಂ ಲಾಲ ಹಣ ಸಹಾಯ ಮಾಡಿದ್ದಾನೆ.

- ಕರೀಂ ಲಾಲ ಬಗ್ಗೆ ಮೊದಲು ದೂರುಕೊಟ್ಟ ಖಾನಾಪುರದ ವ್ಯಾಪಾರಿ ಜಯಂತ್‌ ಎಂ. ತಿನೈಕರ್‌ ಈ ಸಂಗತಿಗಳನ್ನು ಯಾವುದೇ ಆತಂಕವಿಲ್ಲದೆ ಹೇಳುವುದು ಹೀಗೆ. ಪಕ್ಕದಲ್ಲಿ ಸದಾ ಒಬ್ಬ ಬಂದೂಕುಧಾರಿಯ ರಕ್ಷಣೆಯಲ್ಲೇ ಜೀವಿಸುತ್ತಿರುವ ತಿನೈಕರ್‌ಗೆ ಲಾಲ ಕದಲಿಕೆಗಳು ಕರಗತ. ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಒಪ್ಪಿದರೆ, ಅನೇಕ ಘಟಾನುಘಟಿಗಳು ಬೀದಿಗೆ ಬರುವುದು ಗ್ಯಾರಂಟಿ ಅನ್ನುವ ತಿನೈಕರ್‌ ಹೇಳಿಕೆಗಳು ವಿಶೇಷ ನ್ಯಾಯಾಲಯದಲ್ಲಿ ಮಹತ್ವದ್ದಾಗಲಿವೆ.

(ಏಜೆನ್ಸೀಸ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a new twist to the multicrore fake stamp racket that has rocked the country, Jayant M Tinaikar, who brought the Rs 30,000 crore scam to light has alleged that Congress president Sonia Gandhi, Chief Minister S M Krishna and AICC general secretary Ghulam Nabi Azad, besides Small Scale Industries Minister Roshan Baig are involved with racket kingpin Kareem Lala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more