ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುರಸೋಳಿ ಮಾರನ್‌ಗೆ ಶ್ರದ್ಧಾಂಜಲಿ ಮತ್ತು ಎರಡು ಹನಿ ಕಣ್ಣೀರು

By Staff
|
Google Oneindia Kannada News

ಮುರಸೋಳಿ ಮಾರನ್‌ಗೆ ಶ್ರದ್ಧಾಂಜಲಿ ಮತ್ತು ಎರಡು ಹನಿ ಕಣ್ಣೀರು
ವರ್ಷಕ್ಕೂ ಹೆಚ್ಚು ಕಾಲ ರೋಗಗ್ರಸ್ತರಾಗಿದ್ದ ಮಾರನ್‌ರನ್ನು ಪ್ರಧಾನಿ ವಾಜಪೇಯಿ ಮಂತ್ರಿಮಂಡಲದಲ್ಲಿ ಯಾಕೆ ಇಟ್ಟುಕೊಂಡಿದ್ದರು ?

ಸಂಪಾದಕರ ಸಮಕ್ಷಮಕ್ಕೆ ।।

ಕೇಂದ್ರ ಮಂತ್ರಿ ಮರಸೋಳಿ ಮಾರನ್‌ ಅವರ ನಿಧನ ವಾರ್ತೆ ನಿಮ್ಮ ವೆಬ್‌ಸೈಟಿನಲ್ಲಿ ಕಾಣಲಿಲ್ಲ. ಉದಯ ಟಿವಿಯಲ್ಲಿ ಕಂಡೆ. ಅವರು ದೀರ್ಘಕಾಲದಿಂದ ಅಸ್ವಸ್ಥರಾಗಿದ್ದು (ಜೀವಚ್ಛವ/Clinically alive) ಯಾವುದೇ ಕ್ಷಣದಲ್ಲಿ ಇಹಲೋಕ ವ್ಯಾಪಾರ ಮುಗಿಸುತ್ತಾರೆ ಎನ್ನುವುದು ನಿಮ್ಮ ಎಣಿಕೆ ಆಗಿರಬಹುದು. ಇರಲಿ.

ನನ್ನ ಪ್ರಶ್ನೆ ಏನೆಂದರೆ, ಒಂದು ವರ್ಷಕ್ಕೂ ಹೆಚ್ಚು ಕಾಲ ಮಾರನ್‌ ಅವರು ರೋಗಗ್ರಸ್ತರಾಗಿ ದೈನಂದಿನ ಕೆಲಸಗಳನ್ನು ಮಾಡಲು ಅಶಕ್ತರಾಗಿದ್ದರೂ ಅವರನ್ನು ಪ್ರಧಾನಿ ವಾಜಪೇಯಿ ಅವರು ಮಂತ್ರಿ ಮಂಡಲದಲ್ಲಿ ಯಾಕೆ ಇಟ್ಟುಕೊಂಡಿದ್ದರು ?

ಮಾರನ್‌ರ ಆರೋಗ್ಯ ಪೂರ್ಣವಾಗಿ ಶಿಥಿಲವಾಗಿದೆ ಎನ್ನುವ ವಿಷಯ ಕೇವಲ ವೈದ್ಯರಿಗಲ್ಲದೆ ಶ್ರೀಸಾಮಾನ್ಯನಿಗೂ ಗೊತ್ತಿರುವಾಗ ಮಾರನ್‌ ಅವರನ್ನು ಆರೋಗ್ಯ ಕಾರಣಗಳ ಮೇಲೆ ಸಚಿವ ಸ್ಥಾನದಿಂದ ಪ್ರಧಾನಿ ಬಿಡುಗಡೆ ಮಾಡಬೇಕಾಗಿತ್ತು. ಹ್ಯೂಸ್ಟನ್‌ನಲ್ಲಿ ಚಿಕಿತ್ಸೆ ಪಡೆದು ಅವರು ಭಾರತಕ್ಕೆ ಹಿಂತಿರುಗಿದ ನಂತರದಲ್ಲೇ ಅವರನ್ನು ಕಾರ್ಯಭಾರದಿಂದ ಮುಕ್ತಗೊಳಿಸಬೇಕಾಗಿತ್ತು. ಮಾರನ್‌ ಅವರಿಗೆ ತೀವ್ರವಾಗಿ ಅನಾರೋಗ್ಯವಾಗಿದ್ದಾಗ ಮೂರ್ನಾಲ್ಕು ತಿಂಗಳು ಅವರು ನೋಡಿಕೊಳ್ಳಬೇಕಾಗಿದ್ದ ಆರೋಗ್ಯ ಮಂತ್ರಾಲಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವವರೇ ಇಲ್ಲದೆ ಮಂತ್ರಾಲಯ ಸ್ವತಃ ರೋಗಗ್ರಸ್ತವಾಗಿತ್ತು. ಆನಂತರದ ದಿನಗಳಲ್ಲಿ ಮಾರನ್‌ ಅವರನ್ನು ನಾಮಕಾವಸ್ಥೆ ಸಚಿವರನ್ನಾಗಿ ಪರಿಗಣಿಸಿ ಜೇಟ್ಲಿ ಅವರನ್ನು ಇಲಾಖೆ ನೋಡಿಕೊಳ್ಳುವಂತೆ ವಾಜಪೇಯಿ ವ್ಯವಸ್ಥೆ ಮಾಡಿದರು. ಭಾರತದ ಸಾರ್ವಜನಿಕ ಜೀವನದಲ್ಲಿ ಹೀಗೆಲ್ಲ ಏಕಾಗುತ್ತದೆ. ನಮ್ಮ ಜನ ಯೋಚಿಸಬೇಕು.

ಮಾರನ್‌ ಅವರ ಚಿಕಿತ್ಸೆಯ ವೆಚ್ಚ 15 ಕೋಟಿ ರೂಪಾಯಿ ಮೀರಿದೆ ಎಂದು ವರದಿ ಆಗಿದೆ. ಸಚಿವರಿಗೆ ತಕ್ಕ ಆರೋಗ್ಯೋಪಚಾರ ಒದಗಿಸುವುದು ಸರಕಾರದ ಕರ್ತವ್ಯ ಎನ್ನುವುದನ್ನು ಒಪ್ಪುವೆನಾದರೂ , ಕೇವಲ ಸರಕಾರದ ಹಣದಲ್ಲಿ ( ಸಾರ್ವಜನಿಕರ) ಅವರನ್ನು ಜೀವಂತವಾಗಿಡುವುದಕ್ಕೆ ಎನ್‌ಡಿಎ ಸರಕಾರ ಏಕೆ ಒಲವು ತೋರಿಸಿತು ಎನ್ನುವುದೇ ನನ್ನ ಪ್ರಶ್ನೆ.

ಕಾರಣಗಳು ಯಾವುದೇ ಇರಲಿ, ಒಬ್ಬ ವ್ಯಕ್ತಿಗೆ ಕೆಲಸ ಮಾಡುವುದಕ್ಕೆ ಅನರ್ಹ-ಅಶಕ್ತ ಎಂದು ಅರಿವಾದ ನಂತರ ಅವರನ್ನು ಜವಾಬ್ದಾರಿ ಸ್ಥಾನಗಳಲ್ಲಿರಲು ಬಿಡಬಾರದು. ಇನ್ನೊಬ್ಬರು ಅರ್ಹ ವ್ಯಕ್ತಿ ಯನ್ನು ನೇಮಿಸಿದರೆ ಕೆಲಸ ಕಾರ್ಯಗಳು ಆಗುವ ಛಾನ್ಸ್‌ ಇರುತ್ತದೆ.

ಆದರೆ ಮಾರನ್‌ ಅವರ ವಿಚಾರದಲ್ಲಿ ಹೀಗಾಗಲಿಲ್ಲ ಎನ್ನುವುದೇ ನನ್ನ ಬೇಜಾರು. ತಮಾಷೆ ಎಂದರೆ ಕೇಂದ್ರ ಆರೋಗ್ಯ ಇಲಾಖೆಯಲ್ಲಿ ರಾಜ್ಯ ಸಚಿವ ಸ್ಥಾನದಲ್ಲಿ ಇನ್ನೊಬ್ಬ ಡಿಎಂಕೆ ಸಂಸದ ರಾಜ ಅವರನ್ನು ವಾಜಪೇಯಿ ತಂದು ಕೂರಿಸಿದ್ದಾರೆ. ಈ ಮಂತ್ರಿ ಇದುವರೆಗೆ ಮಾಡಿದ ಏಕೈಕ ಕೆಲಸವೆಂದರೆ ಮಾರನ್‌ ಅವರ ಆಸ್ಪತ್ರೆ ಬಿಲ್ಲುಗಳನ್ನು ಕಟ್ಟಿದ್ದು.

ವಾಸ್ತವ ಹೀಗಿರುವಾಗ ದೇಶ ಅಭಿವೃದ್ಧಿ ಹೊಂದುವುದಾದರೂ ಹೇಗೆ ?

- ಬಾಗೂರು ಸಂಜೀವಮೂರ್ತಿ
ಬಸವನಗುಡಿ, ಬೆಂಗಳೂರು.

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X