ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದತ್ತಪೀಠ ಕಿರಿಕ್ಕು: ಕಾರ್ನಾಡರು ಕ್ಷಮೆ ಕೇಳಲಿ-ಭಜರಂಗ ದಳ

By Staff
|
Google Oneindia Kannada News

ದತ್ತಪೀಠ ಕಿರಿಕ್ಕು: ಕಾರ್ನಾಡರು ಕ್ಷಮೆ ಕೇಳಲಿ-ಭಜರಂಗ ದಳ
ಕಾರ್ನಾಡ್‌ ಹಾಗೂ ಕಾಂಗ್ರೆಸ್‌ ಮೇಲೆ ವಿಎಚ್‌ಪಿ, ಭಜರಂಗ ದಳ ವಾಗ್ದಾಳಿ

ಹುಬ್ಬಳ್ಳಿ : ದತ್ತಪೀಠದಲ್ಲಿ ಶೋಭಾಯಾತ್ರೆ ನಿಷೇಧಿಸಲು ಸಲಹೆ ಮಾಡಿ ಅನಗತ್ಯ ಟೀಕೆ ಮಾಡಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ನಾಟಕಕಾರ ಗಿರೀಶ್‌ ಕಾರ್ನಾಡ್‌ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ಪ್ರಮುಖರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಕಾರ್ನಾಡ್‌ ಸೇರಿದಂತೆ ಸಾಹಿತಿಗಳು ಮತ್ತು ಬರಹಗಾರರ ದಂಡು ದತ್ತಪೀಠಕ್ಕೆ ಭೇಟಿ ಕೊಟ್ಟು, ಹಿಂದು ಸಂಘಟನೆಗಳು ಹಿಂದೂ- ಮುಸ್ಲಿಂ ಸಂಘರ್ಷದ ವೇದಿಕೆ ನಿರ್ಮಿಸುತ್ತಿವೆ ಎಂದು ಹೇಳಿದ್ದರು. ಈ ಟೀಕೆಯನ್ನು ವಿರೋಧಿಸಿರುವ ಭಜರಂಗ ದ ಹಾಗೂ ವಿಶ್ವ ಹಿಂದೂ ಪರಿಷತ್‌ ಮುಖಂಡರು ಬಹಿರಂಗ ಕ್ಷಮೆಗೆ ಒತ್ತಾಯಿಸಿದ್ದಾರೆ.

ಭಜರಂಗದಳದ ಹುಬ್ಬಳ್ಳಿ ನಗರ ಸಂಚಾಲಕ ಅಶೋಕ್‌ ಅಣ್ವೇಕರ್‌ ಸುದ್ದಿಗಾರರ ಮುಂದೆ ತಮ್ಮ ಆಗ್ರಹವನ್ನು ಇಟ್ಟರು. ಗೋದ್ರಾದಲ್ಲಿ ಹಿಂದೂ ಪ್ರಯಾಣಿಕರನ್ನು ಅಮಾನುಷವಾಗಿ ಕೊಂದರು. ಗುಜರಾತ್‌ನ ನಾರಾಯಣ ಮಂದಿರಕ್ಕೆ ಬಾಂಬ್‌ ಹಾಕಿದರು. ಕಾಶ್ಮೀರದಲ್ಲಿ ನಿತ್ಯವೂ ಮಾರಣಹೋಮ ನಡೆಯುತ್ತಲೇ ಇದೆ. ಇವೆಲ್ಲವನ್ನು ಕಂಡೂ ಕಾರ್ನಾಡರಂಥವರು ಹಿಂದೂಗಳನ್ನು ಅನಗತ್ಯವಾಗಿ ಟೀಕಿಸುತ್ತಿದ್ದಾರೆ. ಅವರು ಕಾಂಗ್ರೆಸ್ಸಿನ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಸರ್ಕಾರ ಕೂಡ ಅಲ್ಪಸಂಖ್ಯಾತರನ್ನು ಮುದ್ದು ಮಾಡುತ್ತಾ, ಹಿಂದೂಗಳಿಗೆ ಅನ್ಯಾಯ ಎಸಗುತ್ತಿದೆ. ಗಿರೀಶ್‌ ಕಾರ್ನಾಡಕ ಹೇಳಿಕೆಯಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಅಣ್ವೇಕರ್‌ ಹೇಳಿದರು.

ಬಾಬಾ ಬುಡನ್‌ಗಿರಿಯಲ್ಲಿ ದತ್ತಪೀಠ ಇರುವುದಕ್ಕೆ ನಮ್ಮಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ ಎಂದ ಅಣ್ವೇಕರ್‌, ಇವನ್ನು ಪರಿಗಣಿಸಿ ಸರ್ಕಾರ ದತ್ತ ಜಯಂತಿಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ದತ್ತಜಯಂತಿ ನಿಷೇಧಕ್ಕೆ ಕಾರ್ನಾಡ್‌ ಮತ್ತಿತರ ಸಾಹಿತಿಗಳ ಆಗ್ರಹ
ದತ್ತಪೀಠ ಚರ್ಚೆಗೆ ಬನ್ನಿ -ಕಾರ್ನಾಡ್‌ಗೆ ಭಜರಂಗದಳದ ಆಹ್ವಾನ

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X