ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ಕೋರ್ಟಲ್ಲಿ ಛಾಪಾಕಾಗದ ಹಗರಣ ವಿಚಾರಣೆ ಶುರು

By Staff
|
Google Oneindia Kannada News

ವಿಶೇಷ ಕೋರ್ಟಲ್ಲಿ ಛಾಪಾಕಾಗದ ಹಗರಣ ವಿಚಾರಣೆ ಶುರು
ಬೌರಿಂಗ್‌ ಆಸ್ಪತ್ರೆಯಲ್ಲಿ ತೆಲಗಿ ಆರೋಗ್ಯ ತಪಾಸಣೆ

ಬೆಂಗಳೂರು : ಬಹುಕೋಟಿ ಛಾಪಾ ಕಾಗದ ಹಗರಣದ ವಿಚಾರಣೆಯನ್ನು ಪರಪ್ಪನ ಅಗ್ರಹಾರದಲ್ಲಿ ಸ್ಥಾಪಿತವಾಗಿರುವ ವಿಶೇಷ ನ್ಯಾಯಾಲಯ ಸೋಮವಾರ (ನ.24) ಪ್ರಾರಂಭಿಸಿತು.

ವಿಶೇಷ ನ್ಯಾಯಾಲಯದ ಅಧ್ಯಕ್ಷರಾಗಿ ಕೆಲಸ ಮಾಡಲು ಸೆಷನ್ಸ್‌ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎ.ಟಿ.ಮನೋಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆ ಅಧಿಕಾರ ವಹಿಸಿಕೊಂಡರು. ತ್ವರಿತ ನ್ಯಾಯಾಲಯ ಮತ್ತು ಹೈಕೋರ್ಟ್‌ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಇರುವ ಛಾಪಾ ಕಾಗದ ಹರಗಣ ಸಂಬಂಧಿ ಕಡತಗಳನ್ನು ಇಲ್ಲಿಗೆ ವರ್ಗಾಯಿಸುವಂತೆ ಕೇಳಿಕೊಂಡಿದ್ದೇನೆ. ಆ ಕಡತಗಳು ಬಂದ ತಕ್ಷಣ ಪ್ರಕರಣದ ವಿಚಾರಣೆ ಚುರುಕಾಗುತ್ತದೆ ಎಂದು ಮನೋಳಿ ಸುದ್ದಿಗಾರರಿಗೆ ಹೇಳಿದರು.

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಛಾಪಾ ಕಾಗದ ಹರಗಣದ ಪ್ರಮುಖ ಆರೋಪಿ ಕರೀಂ ಲಾಲ ಸೇರಿದಂತೆ ಯಾವ ಆರೋಪಿಗಳಿಗೂ ವಿಚಾರಣೆ ಸಂಬಂಧ ಈವರೆಗೆ ನೋಟಿಸ್‌ ಕೊಟ್ಟಿಲ್ಲ ಎಂದರು.

ಬಹುಕೋಟಿ ಛಾಪಾ ಕಾಗದದ ಅಂತರರಾಜ್ಯ ಹಗರಣದ ತನಿಖೆಯನ್ನು ಕೇಂದ್ರ ಸರ್ಕಾರ ಸಿಬಿಐಗೆ ಒಪ್ಪಿಸಿದ್ದರೂ ಸಹ ರಾಜ್ಯ ಸರ್ಕಾರ ವಿಶೇಷ ನ್ಯಾಯಾಲಯದ ವಿಚಾರಣೆಯನ್ನು ಪ್ರಾರಂಭಿಸಿದೆ.

ತೆಲಗಿಯ ಆರೋಗ್ಯ ತಪಾಸಣೆ
ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಬೆಂಗಳೂರಿನ ಶಿವಾಜಿನಗರದ ಹತ್ತಿರವಿರುವ ಲೇಡಿ ಕರ್ಜನ್‌ ಮತ್ತು ಬೌರಿಂಗ್‌ ಆಸ್ಪತ್ರೆಗೆ ತೆಲಗಿಯನ್ನು ಕೇಂದ್ರ ಕಾರಾಗೃಹದ ಪೊಲೀಸರು ಸೋಮವಾರ ಕರೆದೊಯ್ದರು. ಎಚ್‌ಐವಿ ಸೋಂಕಿನಿಂದ ಪೀಡಿತನಾಗಿರುವ ತೆಲಗಿ ಹೃದ್ರೋಗ ಹಾಗೂ ಮಧುಮೇಹದಿಂದಲೂ ಬಳಲುತ್ತಿದ್ದಾನೆ.

ಛಾಪಾ ಕಾಗದ ಹಗರಣದಲ್ಲಿ ಅಮೇಕ ಮಂತ್ರಿಮಹೋದಯರು ಭಾಗಿಯಾಗಿದ್ದಾರೆ. ಅವರನ್ನೆಲ್ಲ ಬಯಲಿಗೆಳೆಯಲು ಸಿಬಿಐ ತನಿಖೆ ನಡೆಸಿ ಎಂದು ಖುದ್ದು ಕರೀಂ ಲಾಲ ಆಗ್ರಹಿಸಿದ್ದ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X