ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಮೆರಿಕೆಯ ಐಟಿ ನಿರುದ್ಯೋಗಿಗಳ ಸಂಖ್ಯೆ 6% ಗೂ ಹೆಚ್ಚಾಗಿದೆ’

By Staff
|
Google Oneindia Kannada News

‘ಅಮೆರಿಕೆಯ ಐಟಿ ನಿರುದ್ಯೋಗಿಗಳ ಸಂಖ್ಯೆ 6% ಗೂ ಹೆಚ್ಚಾಗಿದೆ’
ಬೆಂಗಳೂರಲ್ಲಿ ಅಮೆರಿಕ ಮಾಹಿತಿ ತಂತ್ರಜ್ಞಾನ ಒಕ್ಕೂಟದ ಅಧ್ಯಕ್ಷ ಹ್ಯಾರಿಸ್‌ ಮಿಲ್ಲರ್‌

ಬೆಂಗಳೂರು : ಇನ್ನು ಹತ್ತು ಹದಿನೈದು ವರ್ಷಗಳಲ್ಲಿ ಅಮೆರಿಕೆಯಿಂದ ಅಬ್ಬಬ್ಬಾ ಅಂದರೆ 7 ರಿಂದ 9 ಪ್ರತಿಶತ ಮಾಹಿತಿ ತಂತ್ರಜ್ಞಾನದ ಕೆಲಸಗಳು ಇತರೆ ದೇಶಗಳಿಗೆ ಸ್ಥಳಾಂತರವಾಗಬಹುದೇ ವಿನಃ ಅದಕ್ಕಿಂತ ಹೆಚ್ಚಲ್ಲ ಎಂದು ಅಮೆರಿಕ ಮಾಹಿತಿ ತಂತ್ರಜ್ಞಾನ ಒಕ್ಕೂಟ (ಐಟಿಎಎ) ಅಭಿಪ್ರಾಯ ಪಟ್ಟಿದೆ.

ಐಟಿಎಎ ಅಧ್ಯಕ್ಷ ಹ್ಯಾರಿಸ್‌ ಮಿಲ್ಲರ್‌ ಮಂಗಳವಾರ ರಾತ್ರಿ ನಡೆದ ನಾಸ್‌ಕಾಂ ಸಿಇಓ ಸಮಾವೇಶದಲ್ಲಿ ಈ ವಿಷಯ ತಿಳಿಸಿದರು. ಅಮೆರಿಕಾದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ವರ್ಷಂಪ್ರತಿ 3 ರಿಂದ 4 ಪ್ರತಿಶಥ ಪ್ರಗತಿ ಸಾಧಿಸುತ್ತಿದೆ. ಆದರೆ, ಇದರಿಂದ ಅಮೆರಿಕನ್ನರ ನಿರುದ್ಯೋಗದ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಸ್ಥಳೀಯ ಸಮಸ್ಯೆಗಳು ಹಾಗೂ ರಾಜಕೀಯ ತೊಡಕುಗಳು ಎಲ್ಲಾ ಮಾಹಿತಿ ತಂತ್ರಜ್ಞಾನ ಉದ್ಯೋಗಗಳನ್ನು ಹೊರ ದೇಶಕ್ಕೆ ಸ್ಥಳಾಂತರಿಸಲು ಅವಕಾಶ ಕೊಡುತ್ತಿಲ್ಲ. ಹಾಗೆ ಆಗುವುದು ವಾಸ್ತವದಿಂದ ದೂರವಾದ ವಿಷಯ. ಅಂಥಾದರಲ್ಲೂ ಅನೇಕರು ಈ ವಿಷಯದಲ್ಲಿ ವೃಥಾ ಗುಲ್ಲೆಬ್ಬಿಸುತ್ತಿದ್ದಾರೆ. ಎರವಲು ಸೇವೆ ಪಡೆಯುತ್ತಿರುವ ಐಟಿ ಕಂಪನಿಗಳು ಕೂಡ ತಮ್ಮ ವಾದವನ್ನು ಸಮ್ಮತಿಸಿವೆ ಎಂದು ಮಿಲ್ಲರ್‌ ಹೇಳಿದರು.

ಅಮೆರಿಕದಲ್ಲಿ 6 ಪ್ರತಿಶತ ನಿರುದ್ಯೋಗಿಗಳಿದ್ದಾರೆ. ಐಟಿ ಕ್ಷೇತ್ರದಲ್ಲಿ ಈ ಅಂಕಿ- ಅಂಶ ಇನ್ನಷ್ಟು ಹೆಚ್ಚು. ಮೂರು ವರ್ಷಗಳ ಹಿಂದೆ ಮಾಹಿತಿ ತಂತ್ರಜ್ಞಾನ ಪರಿಣತರು ಅಮೆರಿಕೆಯಲ್ಲಿ ನಿರುದ್ಯೋಗಿಗಳಾಗಿ ಇರಲೇ ಇಲ್ಲ. ಆದರಿವತ್ತು ಪರಿಸ್ಥಿತಿ ಭಿನ್ನವಾಗಿದೆ. ಹೀಗಾಗಿ ಅವರಿಗೆ ಕೆಲಸ ಕೊಡುವುದು ಅನಿವಾರ್ಯವಾಗುತ್ತದೆ. ಎಲ್ಲಾ ಲೆಕ್ಕಾಚಾರಗಳನ್ನೂ ಜಾಗತೀಕರಣದ ತಕ್ಕಡಿಯಲ್ಲೇ ತೂಗುತ್ತಾ ಮುಂದೆ ಹೋಗುವುದು ಸಾಧ್ಯವಿಲ್ಲ ಎಂದರು.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X