ಚಿತ್ರಕಲಾಪರಿಷತ್‌ನಲ್ಲಿ ತೇಜಸ್ವಿ ಪಕ್ಷಿ ಫೋಟೋಕಾವ್ಯ ಪ್ರದರ್ಶನ
ನಾಲ್ಕು ವರ್ಷಗಳ ಕಾಲ ತೇಜಸ್ವಿ ತೆಗೆದಿರುವ ಹಕ್ಕಿ ಚಿತ್ರಗಳು ನೋಡುಗರಿಗೆ

ಮೂಡಿಗೆರೆಯ ಗ್ರಾಮೀಣ ಪರಿಸರದಲ್ಲಿ ಅಕ್ಷರ ಕೃಷಿಯ ಜೊತೆಜೊತೆಗೇ ಹಕ್ಕಿಗಳ ಕದಲಿಕೆಗಳಿಗೆ ಸಾಕ್ಷಿಯಾಗಿರುವ ಪೂರ್ಣಚಂದ್ರ ತೇಜಸ್ವಿ, ಸೊಗಸಾದ ಚಿತ್ರಗಳನ್ನು ಕೆಮೆರಾದಲ್ಲಿ ತುಂಬಿಸಿಕೊಂಡಿದ್ದಾರೆ. ಈ ಹಿಂದೆ ಅವರು ತೆಗೆದ ಹಕ್ಕಿ ಚಿತ್ರಗಳಿರುವ ಶುಭಾಶಯ ಪತ್ರ ಸಾಕಷ್ಟು ಜನಪ್ರಿಯವಾಗಿತ್ತು. ಈಗ ಅವರ ಕೆಮೆರಾ ಕಲೆಯನ್ನು ಇಡಿಯಾಗಿ ನೋಡುವ ಅವಕಾಶ ಸಹೃದಯರದ್ದು.
ಮೂಡಿಗೆರೆಯ ಸಸ್ಯಕಾಶಿಯ ನಡುವೆ ನಾಲ್ಕೈದು ವರ್ಷಗಳಿಂದ ತೇಜಸ್ವಿ ಸೆರೆಹಿಡಿದಿರುವ ಪಕ್ಷಿ ಫೋಟೋ ಕಾವ್ಯ ನೋಡುಗರಿಗೆ ಲಭ್ಯ. ಸಾಹಿತಿ ತೇಜಸ್ವಿಯವರ ಪ್ರತಿಭೆಯ ಇನ್ನೊಂದು ಮಗ್ಗುಲನ್ನು ನೀವೂ ನೋಡಿ ಬನ್ನಿ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!