ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡನಿಂದ ಆಸಿಡ್‌ ದಾಳಿಗೆ ತುತ್ತಾದ ಹೆಣ್ಣುಮಗಳ ಕಥೆಯಿದು...

By Staff
|
Google Oneindia Kannada News

ಗಂಡನಿಂದ ಆಸಿಡ್‌ ದಾಳಿಗೆ ತುತ್ತಾದ ಹೆಣ್ಣುಮಗಳ ಕಥೆಯಿದು...
ಚದುರಿದ ಸ್ವಪ್ನಗಳು : ವರದಕ್ಷಿಣೆ ಕಾಟದ ಇನ್ನೊಂದು ದುರಂತ

ರಾಯಚೂರು : ಆಕೆಯ ಹೆಸರು ಸ್ವಪ್ನ. ಸಂಸಾರ ನೌಕೆಯಲ್ಲಿ ಅನ್ಯಾಯಕ್ಕೊಳಗಾದವಳು !

ಆಕೆ ಸಂಸಾರಕ್ಕೆ ಕಾಲಿಟ್ಟಿದ್ದು ತನ್ನ 19ನೇ ವಯಸ್ಸಿನಲ್ಲಿ. ರಾಯಚೂರಿನ ಗಿಲ್ಲೆಸುಗೂರಿನ ಬಸ್‌ಕಂಡಕ್ಟರ್‌ ಈರೇಶ್‌ ಎಂಬಾತನನ್ನು ಮದುವೆಯಾಗಿ ಎರಡು ವರ್ಷಗಳ ಕಾಲ ಜೀವನ ಸಸೂತ್ರವಾಗಿಯೇ ನಡೆಯಿತು.

ಇದು ವರ್ಷದ ಹಿಂದಿನ ಕಥೆ. ಸ್ವಲ್ಪ ಸಮಯದ ನಂತರ ಬಸ್ಸಿನಲ್ಲಿ ಏಗಿ ಏಗಿ ಸುಸ್ತಾದ ಈರೇಶನಿಗೆ ಬೈಕ್‌ ತಗೋಬೇಕೆಂಬ ಆಸೆಯಾಯಿತು. ಆದರೆ ಬೈಕಿನ ಕನಸ ಬೆನ್ನೇರಿ ಹೋಗುವ ತಾಕತ್ತು ಇಲ್ಲದಿದ್ದಾಗ ಈರೇಶನಿಗೆ ಕಾಣಿಸಿದ ದಾರಿ ಸ್ವಪ್ನ. ತಾಯಿ ಮನೆಯಿಂದ ಬೈಕಿಗಾಗುವಷ್ಟು ಹಣ ತಗೊಂಡು ಬಾ ಎಂಬ ಕಟ್ಟಾಜ್ಞೆಯನ್ನು ಪಾಲಿಸಲಾಗದ ಸ್ವಪ್ನಳಿಗೆ- ಈರೇಶ, ಆತನ ತಾಯಿ, ತಂಗಿಯರಿಂದಲೂ ಕಾಟ ಶುರುವಾಯಿತು.

ಸ್ವಪ್ನಳ ತಂದೆ ಶರಣಪ್ಪ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಡ್ರೆೃವರ್‌ ಆಗಿ ದುಡಿಯುತ್ತಿದ್ದರು. ಮದುವೆಯ ವೇಳೆ ಮಗಳಿಗೆ ಸಾಕಷ್ಟು ಚಿನ್ನವನ್ನೂ, ಅಳಿಯನಿಗೆ ವರೋಪಚಾರದ ನೆಪದಲ್ಲಿ 40 ಸಾವಿರ ರೂಪಾಯಿ ಹಣ ವನ್ನೂ ಈರೇಶನಿಗೆ ನೀಡಿದ್ದರು. ಆದರೆ ಮದುವೆಯ ನಂತರವೂ ಅಳಿಯನಿಂದ ಬಂದ ಬೇಡಿಕೆಯನ್ನು ಈಡೇರಿಸುವುದು ಶರಣಪ್ಪನ ಕೈಯಿಂದ ಸಾಧ್ಯವಾಗಲಿಲ್ಲ.

ಪರಿಣಾಮ - ಕಳೆದ ವರ್ಷ(2002) ನವೆಂಬರ್‌ 13ರಂದು ಬೆಳ್ಳಂಬೆಳಗ್ಗೆ ಕೆಲಸಕ್ಕೆ ತೆರಳಿದ ಈರೇಶ ಅರ್ಧ ಗಂಟೆಯಲ್ಲಿಯೇ ವಾಪಸ್ಸಾದ. ಕೈಯಲ್ಲಿ ಒಂದು ಆ್ಯಸಿಡ್‌ ಬಾಟಲಿ. ಮನೆಗೆ ಬಂದವನೇ ಮಲಗಿದ್ದ ಹೆಂಡತಿ ಸ್ವಪ್ನಳ ಮೇಲೆ ಆ್ಯಸಿಡ್‌ ಚೆಲ್ಲಿ ದ. ದಾಳಿಗೀಡಾದ ಸ್ವಪ್ನ ನೋವು ತಾಳಲಾರದೆ ಕಿರುಚುತ್ತಲೇ ರಾಯಚೂರು ಕಡೆಗಿನ ಬಸ್ಸು ಹತ್ತಿದಳು. ವಿಷಯ ತಿಳಿದು ಧಾವಿಸಿದ ಆಕೆಯ ತಂದೆ ತಾಯಿ ಸ್ವಪ್ನಳನ್ನು ಆಸ್ಪತ್ರೆಗೆ ಸಾಗಿಸಿದರು. ದೇವರ ದಯದಿಂದ ಆಕೆಯ ಮುಖದ ಮೇಲೆ ಆ್ಯಸಿಡ್‌ ಬಿದ್ದಿರಲಿಲ್ಲ. ಆದರೆ ಮೈ ಮೇಲೆ ಬಿದ್ದಿರುವ ಆ್ಯಸಿಡ್‌ನ ನೋವು ನಿವಾರಣೆಗೆ ಕಳೆದ ಒಂದು ವರ್ಷದಿಂದಲೂ ಚಿಕಿತ್ಸೆ ನಡೆಯುತ್ತಲೇ ಇದೆ.

ಮನೆಯನ್ನು ಮಾರಿ ಸ್ವಪ್ನಳ ಮದುವೆ ಮಾಡಿದೆ. ಈಗ ಆಕೆಯ ಚಿಕಿತ್ಸೆಗೆ, ಪ್ಲಾಸ್ಟಿಕ್‌ ಸರ್ಜರಿಗೆ 1. 20 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿದೆ ಎಂದು ಶರಣಪ್ಪ ಅಳಲು ತೋಡಿಕೊಳ್ಳುತ್ತಾರೆ.

ಸ್ವಪ್ನಳ ಗಂಡನ ಮನೆಯವರು ಈಗ ಹೊಸ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅದು ಸ್ವಪ್ನಳಿಂದ ವಿಚ್ಛೇದನ. ಸ್ವಪ್ನಳನ್ನು ಬದುಕಿನಿಂದ ದೂರ ಮಾಡುವುದಕ್ಕಾಗಿ ಈರೇಶ ಈಗ 80 ಸಾವಿರ ರೂಪಾಯಿಗಳನ್ನು ಸ್ವಪ್ನಳ ಚಿಕಿತ್ಸೆಗೆ ನೀಡಲು ತಯಾರಾಗಿದ್ದಾನೆ. ಆದರೆ ವಿಚ್ಛೇದನದ ಶರ್ತದ ಮೇರೆಗೆ.

ಆದರೆ ಸ್ವಪ್ನಳ ತಂದೆ ಈ ಶರ್ತಕ್ಕೆ ಒಪ್ಪಿಲ್ಲ. ಆತ ದಾಖಲಿಸಿದ ಪೊಲೀಸು ಕೇಸು ಬಿದ್ದು ಹೋಗಿದೆ. ಶರಣಪ್ಪ ಮಗಳಿಗೋಸ್ಕರ ಕೋರ್ಟು ಮೆಟ್ಟಿಲು ಹತ್ತಿದ್ದಾನೆ.

ಸ್ವಪ್ನ ನ್ಯಾಯಕ್ಕಾಗಿ ಕಾಯುತ್ತಿದ್ದಾಳೆ. ಆಕೆಯ ಬದುಕಿಗೆ ಕೋರ್ಟು ನ್ಯಾಯವನ್ನು ಕೊಡುತ್ತದೆಯೇ ? ಈರೇಶನಿಗೆ ಬುದ್ಧಿ ಬರುತ್ತಾ ?

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X