ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಕವಿ ಗದ್ದರ್‌ಗೆ ಚಿತ್ರದುರ್ಗ ಮಠದ ಬಸವಶ್ರೀ ಪುರಸ್ಕಾರ

By Staff
|
Google Oneindia Kannada News

ಆಂಧ್ರಕವಿ ಗದ್ದರ್‌ಗೆ ಚಿತ್ರದುರ್ಗ ಮಠದ ಬಸವಶ್ರೀ ಪುರಸ್ಕಾರ
ಶೋಷಿತರ ಪರ ನಿಂತ ಕವಿಗೆ ಸಂದ ಮನ್ನಣೆ

ಚಿತ್ರದುರ್ಗ: ಚಿತ್ರದುರ್ಗ ಬೃಹನ್ಮಠ ಪ್ರತಿ ವರ್ಷ ನೀಡುತ್ತಿರುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಈ ಬಾರಿ ಆಂಧ್ರ ಪ್ರದೇಶದ ಕ್ರಾಂತಿಕಾರಿ ಕವಿ ಗದ್ದರ್‌ ಆಯ್ಕೆಯಾಗಿದ್ದಾರೆ.

ಜನ ನಾಟ್ಯ ಮಂಡಳಿಯ ಧುರೀಣ ಹಾಗೂ ಅಖಿಲ ಭಾರತ ಕ್ರಾಂತಿಕಾರಿ ಸಂಸ್ಕೃತಿ ಒಕ್ಕೂಟ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗದ್ದರ್‌ ಅವರನ್ನು ಬಸವಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಚಿತ್ರದುರ್ಗ ಬೃಹನ್ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಹಾಗೂ ಫಲಕವನ್ನೊಳಗೊಂಡಿರುತ್ತದೆ. ಡಿಸೆಂಬರ್‌ 5ರಂದು ಚಿತ್ರದುರ್ಗದ ಬೃಹನ್ಮಠದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಮಾಜದಲ್ಲಿ ವಿಶಿಷ್ಠ ರೀತಿಯಲ್ಲಿ ಜನ ಜಾಗೃತಿಯನ್ನು ಮೂಡಿಸುತ್ತಿರುವ ಹಾಗೂ ಶೋಷಿತರ ಪರ ಧ್ವನಿ ಎತ್ತುತ್ತಿರುವ ಗದ್ದರ್‌ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮುರುಘರಾಜೇಂದ್ರ ಶರಣರು ಹೇಳಿದರು.

ಕವಿ ಗದ್ದರ್‌ ಶೋಷಣೆಯ ವಿರುದ್ಧ ಬಸವಣ್ಣನವರು ಮಾಡಿದ ಕ್ರಾಂತಿಯನ್ನು ಗೌರವಿಸುತ್ತಾರೆ. 12ನೇ ಶತಮಾನದ ಶರಣ ಪಡೆಯ ಮಾದರಿಯಲ್ಲಿಯೇ ಸೈನ್ಯವನ್ನು ಕಟ್ಟುವ ಕನಸು ಹೊಂದಿದ್ದು, ಈಗಾಗಲೇ ಜನನಾಟ್ಯ ಮಂಜಳಿ ಹಾಗೂ ಅಖಿಲ ಭಾರತ ಕ್ರಾಂತಿ ಸಂಸ್ಕೃತಿ ಒಕ್ಕೂಟ ಸಂಸ್ಥೆಗಳನ್ನು ಕ್ರಿಯಾಶೀಲಗೊಳಿಸಿದ್ದಾರೆ. ಬಂದೂಕಿನ ನಳಿಕೆಗೆ ಎದೆಯಾಡ್ಡಿ ಸಾಯುವ ನಕ್ಸಲೀಯರ ತ್ಯಾಗದ ಮುಂದೆ ತನ್ನ ಸಾಧನೆ ಎನೇನೂ ಅಲ್ಲ ಎನ್ನುವ ಗದ್ದರ್‌ ಆಂಧ್ರದ ಮಡಕ್‌ ಜಿಲ್ಲೆಯ ದಲಿತ ಕುಟುಂಬವೊಂದರಲ್ಲಿ ಹುಟ್ಟಿದವರು. ಕ್ರಾಂತಿಕಾರಿ ಕವಿಗಳ ಸಂಘಟನೆಯಾದ ಆರ್ಟ್‌ ಲವರ್ಸ್‌ ಅಸೋಸಿಯೇಷನ್‌ನ ಸದಸ್ಯರಾಗಿಜನ ಜಾಗೃತಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X