ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಉತ್ಪನ್ನ ಮಾರಲು ‘ಮೆಟ್ರೋ’ಗೆ ಸರ್ಕಾರದ ಪ್ರೋತ್ಸಾಹ

By Staff
|
Google Oneindia Kannada News

ಕೃಷಿ ಉತ್ಪನ್ನ ಮಾರಲು ‘ಮೆಟ್ರೋ’ಗೆ ಸರ್ಕಾರದ ಪ್ರೋತ್ಸಾಹ
ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಮೆಟ್ರೋದ ಇನ್ನೊಂದು ಮಳಿಗೆ ಕಾರ್ಯಾರಂಭ

ಬೆಂಗಳೂರು : ಜರ್ಮನ್‌ ಮೂಲದ ಅಂತರರಾಷ್ಟ್ರೀಯ ಮಾರಾಟ ಮಳಿಗೆ ‘ಮೆಟ್ರೋ’ದಲ್ಲಿ ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಬೆಂಗಳೂರು ಸಗಟು ಮಾರಾಟದಾರರು ಈ ಮಳಿಗೆಯನ್ನು ಎತ್ತಂಗಡಿ ಮಾಡುವಂತೆ ಪ್ರತಿಭಟನೆ ನಡೆಸಿದ್ದರೂ, ಸರ್ಕಾರ ಅದಕ್ಕೆ ಸೊಪ್ಪು ಹಾಕದಿರುವುದು ಈ ನಿರ್ಣಯದಿಂದ ಸ್ಪಷ್ಟವಾಗಿದೆ.

ಎಪಿಎಂಸಿ ಕಾಯ್ದೆಯ ಪ್ರಕಾರ ವಿದೇಶೀ ಕಂಪನಿಗಳು ಕೃಷಿ ಉತ್ಪನ್ನಗಳನ್ನು ನೇರ ಬಂಡವಾಳ ಹೂಡುವ ಮೂಲಕ ಮಾರುವಂತಿಲ್ಲ. ಹೀಗಾಗಿ ಕಾಯ್ದೆಗೇ ತಿದ್ದುಪಡಿ ತರಲು ಯೋಚಿಸುತ್ತಿರುವುದಾಗಿ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು. ಕನಕಪುರ ರಸ್ತೆಯ ಕೋಣನಕುಂಟೆಯಲ್ಲಿ ಮೆಟ್ರೋದ ಇನ್ನೊಂದು ಮಳಿಗೆಯನ್ನು ಉದ್ಘಾಟಿಸಿ ಡಿ.ಕೆ.ಶಿವಕುಮಾರ್‌ ಬುಧವಾರ (ನ. 12) ಈ ವಿಷಯ ತಿಳಿಸಿದರು.

ಮೆಟ್ರೋದಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವುದರಿಂದ ನಮ್ಮ ರೈತರಿಗೆ ಅನುಕೂಲವಾಗುತ್ತದೆ. ಹೀಗಾಗಿ ಇದನ್ನು ವಿರೋಧಿಸುವುದು ಸರಿಯಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಕಾಲಮಿತಿಯನ್ನು ನಿಗದಿ ಮಾಡಿಲ್ಲ. ಒಟ್ಟಿನಲ್ಲಿ ನಗರದಲ್ಲಿ ಇಂಥಾ ಮಳಿಗೆ ತಲೆಯೆತ್ತಿರುವುದು ಆರ್ಥಿಕವಾಗಿ ರಾಜ್ಯಕ್ಕೆ ಒಳ್ಳೆಯದು ಎಂದು ಡಿಕೇಶಿ ಅಭಿಪ್ರಾಯಪಟ್ಟರು.

ಈಗಾಗಲೇ ಯಶವಂತಪುರದಲ್ಲಿ ವಹಿವಾಟು ಶುರುವಿಟ್ಟುಕೊಂಡಿರುವ ಮೆಟ್ರೋ ಮಳಿಗೆಯ ಅಬ್ಬರದಿಂದ ಅದೇ ಜಾಗದಿಂದ ಕೆಲವೇ ಮೀಟರುಗಳಷ್ಟು ದೂರದಲ್ಲಿರುವ ಎಪಿಎಂಸಿ ಯಾರ್ಡ್‌ನಲ್ಲಿನ ದಲ್ಲಾಳಿಗಳ ಜೇಬು ತುಂಬುತ್ತಿಲ್ಲ. ಅನೇಕ ಗಿರಾಕಿಗಳು ಮೆಟ್ರೋ ಸೆಳಕಿಗೆ ಮನಸೋತಿದ್ದಾರೆ. ವಸ್ತುಗಳನ್ನು ನೇರವಾಗಿ ಉತ್ಪಾದಕರಿಂದ ಖರೀದಿಸಿ ಅತಿ ಕಡಿಮೆ ಲಾಭಕ್ಕೆ ಮೆಟ್ರೋ ಮಾರುತ್ತದೆ. ರಾಜ್ಯದ ಯಾವುದೇ ಸಗಟು ಮಾರಾಟಗಾರರೂ ಕೊಡದಷ್ಟು ಅಗ್ಗದ ಬೆಲೆಗೆ ಇಲ್ಲಿ ಸಕಲ ಸರಕೂ ಸಿಗುತ್ತಿರುವುದು ಪ್ರಮುಖ ಆಕರ್ಷಣೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X