ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿರಥ ಮಹಾರಥರ ಬೆಂಗಳೂರು ಐಟಿ ಮೇಳಕ್ಕೆ ಅಂತಿಮ ತೆರೆ

By Staff
|
Google Oneindia Kannada News

ಅತಿರಥ ಮಹಾರಥರ ಬೆಂಗಳೂರು ಐಟಿ ಮೇಳಕ್ಕೆ ಅಂತಿಮ ತೆರೆ
ಐದು ದಿನಗಳ ಬೆಂಗಳೂರು ಐಟಿ ಡಾಟ್‌ ಕಾಂ- 2003 ಮೇಳದಲ್ಲಿ ಏನೇನು ನಡೆಯಿತು...

*ದಟ್ಸ್‌ಕನ್ನಡ ಬ್ಯೂರೋ

ಬೆಂಗಳೂರು : ಏಷ್ಯಾದ ಅತಿ ದೊಡ್ಡ ಐಟಿ ಕಾರ್ಯಕ್ರಮ ಬೆಂಗಳೂರು ಐಟಿ.ಕಾಂನ ಐದು ದಿನಗಳ 6ನೇ ತಂತ್ರಜ್ಞಾನ ಹಬ್ಬಕ್ಕೆ ಬುಧವಾರ (ನ. 05) ಅಂತಿಮ ತೆರೆ. ಭರ್ತಿ 1 ಲಕ್ಷ 45 ಸಾವಿರ ಐಟಿ ಪ್ರೇಮಿಗಳು ಮೇಳದಂಗಳ ಅರಮನೆ ಮೈದಾನಕ್ಕೆ ಭೇಟಿ ಕೊಟ್ಟು, ಬೇಕಾದ್ದನ್ನು ಪಡೆದುಕೊಂಡೋ, ತಿಳಿದುಕೊಂಡೋ, ಒಪ್ಪಂದ ಮಾಡಿಕೊಂಡೋ ಹೋದರು.

ಬೆಂಗಳೂರು ಐಟಿ ಡಾಟ್‌ ಕಾಂ- 2003 ಮೇಳದ ಮೆಲುಕು-

  • ಈ ಸಲ ದೇಶ- ವಿದೇಶಗಳಿಂದ ಒಟ್ಟು 285 ಕಂಪನಿಗಳು ಬಂದಿದ್ದವು. ಈ ಪೈಕಿ 120 ವಿದೇಶದವು.
  • ಮೇಳದಲ್ಲಿ ಭಾಗವಹಿಸಿದವರ ಪೈಕಿ 40 ಸಾವಿರ ಉದ್ದಿಮೆದಾರರಿದ್ದರು. ಈ ಪೈಕಿ ವಿದೇಶೀಯರ ಸಂಖ್ಯೆ 700 ಕ್ಕೂ ಹೆಚ್ಚು.
  • ಹಂಗೇರಿ ಪ್ರಧಾನ ಮಂತ್ರಿ ಪೀಟರ್‌ ಮೆಡ್‌ಗ್ಯೆಸೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದು ಈ ಸಲದ ವಿಶೇಷ.
  • ಅಮೆರಿಕ, ಜರ್ಮನಿ, ಸಿಂಗಾಪೂರ್‌, ಇಂಗ್ಲೆಂಡ್‌, ಕೆನಡಾ, ಚೀನಾ, ಬೆಲ್ಜಿಯಂ, ರಷ್ಯಾ, ಮಾರಿಷಿಯಸ್‌, ಹಾಂಗ್‌ಕಾಂಗ್‌ ದೇಶದ ಕಂಪನಿಗಳು ಮೇಳಕ್ಕೆ ಆಗಮಿಸಿದ್ದವು.
  • 20 ಸಾವಿರ ಚದುರ ಮೀಟರ್‌ ವಿಸ್ತೀರ್ಣದ ವಿಶಾಲ ಜಾಗೆಯಲ್ಲಿ ನಡೆದ ಮೇಳದಲ್ಲಿ ಒಟ್ಟು 10 ಪೆವಿಲಿಯನ್‌ಗಳಿದ್ದವು.
  • ಪ್ರದರ್ಶನ ನಡೆಯುವ ವೇಳೆಯಲ್ಲೇ 8 ಸಮಾವೇಶಗಳು ಮೇಳದಲ್ಲಿ ನಡೆದವು. ವ್ಯಾಪಾರ ಪ್ರಕ್ರಿಯೆ ಎರವಲು ಸೇವೆ (ಬಿಪಿಓ), ಇ- ಆಡಳಿತ, ಸಾಮಾನ್ಯನಿಗೆ ಐಟಿ, ಸರ್ಕಾರ ಹಾಗೂ ಐಟಿ, ಐಟಿ ಆಧರಿತ ಸೇವೆಗಳು, ಆರೋಗ್ಯ ಮತ್ತು ಐಟಿ ಹಾಗೂ ನಾಸ್‌ಕಾಂನ ಸಂಕಿರಣಗಳು ಗಮನ ಸೆಳೆದವು.
  • ಸಮಾವೇಶಗಳಲ್ಲಿ 1700 ಪ್ರತಿನಿಧಿಗಳು ಭಾಗವಹಿಸಿದ್ದರು. ಕೇಂದ್ರದ ಐಟಿ ಮತ್ತು ಸಂವಹನ ಖಾತೆಯ ರಾಜ್ಯ ಸಚಿವ ಎಸ್‌.ತಿರುನಾವುಕ್ಕರಸರ್‌, ಅದೇ ಸಚಿವಾಲಯದ ಕಾರ್ಯದರ್ಶಿ ರಾಜೀವ ರತ್ನ, ಕರ್ನಾಟಕ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಗ್ರೂಪ್‌ ವಿ.ಪಿ.ಯ ಹೆನ್ರಿ ರಿಚರ್ಡ್‌, ಮಿಷಿಗನ್‌ ವಿಶ್ವವಿದ್ಯಾಲಯದ ಪ್ರೊ. ಸಿ.ಕೆ.ಪ್ರಹ್ಲಾದ್‌, ಬಿಎಂಸಿ ಸಾಫ್ಟ್‌ವೇರ್‌ ಸಮೂಹದ ಅಧ್ಯಕ್ಷ ಬಾಬ್‌ ಬ್ಯೂಚಾಂಪ್‌- ಮೊದಲಾದವರು ಸಮಾವೇಶಗಳಲ್ಲಿ ಮಾತಾಡಿದರು.
  • ನವೆಂಬರ್‌ 2ನೇ ತಾರೀಕು ಆಯೋಜಿಸಲಾಗಿದ್ದ ‘ನೆಟ್‌ವರ್ಕಿಂಗ್‌ ಡಿನ್ನರ್‌’ನಲ್ಲಿ ಬಂಡವಾಳದಾರರು ಮತ್ತು ಉದ್ದಿಮೆದಾರರು ಬಿ- ಟು- ಬಿ ಮಾತುಕತೆ ನಡೆಸುವ ಮುಕ್ತ ಅವಕಾಶ ದೊರೆಯಿತು.
  • ನ. 3 ರಂದು ನಡೆದ ‘ಸಿಇಓ ಕಾನ್‌ಕ್ಲೇವ್‌’ ಕಾರ್ಯಕ್ರಮದಲ್ಲಿ ಬೆಂಗಳೂರು ಹಾಗೂ ಮತ್ತಿತರ ಐಟಿ ಕಂಪನಿಗಳ 300 ಉನ್ನತ ಅಧಿಕಾರಿಗಳು ವಿಚಾರ ವಿನಿಮಯ ಮಾಡಿಕೊಂಡರು. ಇದೇ ವೇಳೆ ಫ್ಯಾಷನ್‌ ಶೋ ಕೂಡ ನಡೆಯಿತು.
  • ಕಂಠೀರವ ಕ್ರೀಡಾಂಗಣದಲ್ಲಿ ಇಂಟರ್ನೆಟ್‌ ನೋಡುವ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ ಸುಮಾರು 30 ಸಾವಿರ ಶಾಲಾ ವಿದ್ಯಾರ್ಥಿಗಳು ವಿವಿಧ ವೆಬ್‌ಸೈಟುಗಳಿಂದ ಜ್ಞಾನ ಸಂಪಾದನೆ ಮಾಡಿದರು.
  • ಗ್ರಾಮೀಣ ಐಟಿ ಕ್ವಿಜ್‌ ಸಾಕಷ್ಟು ಪ್ರಶಂಸೆ ಗಿಟ್ಟಿಸಿತು. 52 ಸಾವಿರ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
  • ನ. 4ನೇ ತಾರೀಕು ‘ಆಲಾ ಡಿನ್ನರ್‌’ನಲ್ಲಿ ಹಸನಾದ ಅಂಗಡಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಒಟ್ಟಾರೆ ಅಂಗಡಿಗಳ ಉತ್ತಮ ನಿರ್ವಹಣೆ ಹಾಗೂ ಅಚ್ಚುಕಟ್ಟುತನಕ್ಕೆ ಸೀಮನ್ಸ್‌ ಪ್ರಶಸ್ತಿ ಗಳಿಸಿತು. ಐಟಿ ದಿಗ್ಗಜ ಅಂಗಡಿಗಳ ಪೈಕಿ ಎಎಂಡಿ ಅತ್ಯುತ್ತಮ ಎಂದು ಬೆನ್ನು ತಟ್ಟಿಸಿಕೊಂಡಿತು.
ನೀವು ಐಟಿ ಪ್ರಿಯರೇ? ಹಾಗಾದರೆ ನೋಡಿ-

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X