ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್‌ ದ್ರಾವಿಡ್‌ ಜೀವನ ಚರಿತ್ರೆ ನ.11ರಂದು ಅನಾವರಣ

By Staff
|
Google Oneindia Kannada News

ರಾಹುಲ್‌ ದ್ರಾವಿಡ್‌ ಜೀವನ ಚರಿತ್ರೆ ನ.11ರಂದು ಅನಾವರಣ
ಕ್ರೀಡಾ ಪತ್ರಕರ್ತ ವೇದಂ ಜೈಶಂಕರ್‌ ಈ ಪುಸ್ತಕ ಬರೆದಿದ್ದಾರೆ

ಬೆಂಗಳೂರು : ಭಾರತ ಕ್ರಿಕೆಟ್‌ ತಂಡದ ಕಲಾತ್ಮಕ ಆಟಗಾರ, ಹಂಗಾಮಿ ನಾಯಕ ರಾಹುಲ್‌ ದ್ರಾವಿಡ್‌ ಕುರಿತ ಜೀವನ ಚರಿತ್ರೆ ನವೆಂಬರ್‌ 11ನೇ ತಾರೀಕು ಅನಾವರಣಗೊಳ್ಳಲಿದೆ.

ಕ್ರೀಡಾ ಪತ್ರಕರ್ತ ವೇದಂ ಜೈಶಂಕರ್‌ ಅವರು ದ್ರಾವಿಡ್‌ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ದ್ರಾವಿಡ್‌ ಬ್ಯಾಟಿಂಗ್‌ ಶೈಲಿಯ ಅಪರೂಪದ ಚಿತ್ರಗಳು, ಅವರ ಬಾಲ್ಯ ಜೀವನ ಹಾಗೂ ಕ್ರಿಕೆಟ್‌ನ ಏರು ಮೆಟ್ಟಿಲುಗಳ ಪುಂಖಾನುಪುಂಖ ವಿವರಗಳು ಪುಸ್ತಕದಲ್ಲಿ ಅಡಕವಾಗಿವೆ. ಒಬ್ಬ ಕ್ರಿಕೆಟಿಗನಾಗಿ ಹಾಗೂ ವ್ಯಕ್ತಿಯಾಗಿ ರಾಹುಲ್‌ ಬೆಳವಣಿಗೆಗೂ ಪುಸ್ತಕ ಕನ್ನಡಿ ಹಿಡಿಯುತ್ತದೆ.

ನವೆಂಬರ್‌ 12ನೇ ತಾರೀಕು ಬೆಂಗಳೂರಿನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಹಗಲು- ರಾತ್ರಿ ಒಂದು ದಿನದ ಕ್ರಿಕೆಟ್‌ ಪಂದ್ಯ ನಡೆಯಲಿದ್ದು, ಅದಕ್ಕೆ ಮುನ್ನಾ ದಿನ ದ್ರಾವಿಡ್‌ ಪುಸ್ತಕ ಅನಾವರಣಗೊಳ್ಳಲಿದೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

ಬೆಂಗಳೂರು ಪಂದ್ಯಕ್ಕೆ ನ. 7ರಿಂದ ಟಿಕೆಟ್‌

ನ. 12ರಂದು ಬೆಂಗಳೂರಿನಲ್ಲಿ ಭಾರತ- ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಪಂದ್ಯಕ್ಕೆ ನ. 7 ಶುಕ್ರವಾರದಿಂದ ಟಿಕೆಟ್‌ ಮಾರಲಾಗುತ್ತದೆ. ಬೆಳಗ್ಗೆ 9 ಗಂಟೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಟಿಕೇಟ್‌ ನೀಡಲು ಕೌಂಟರ್‌ಗಳನ್ನು ತೆರೆಯಲಾಗುವುದು. ಕ್ಲಬ್ಬು ವಗೈರೆ ಸಂಸ್ಥೆಗಳಿಗೆ ಈಗಾಗಲೇ ಟಿಕೇಟುಗಳನ್ನು ಮಾರಲಾಗಿದೆ.

ಸಾರ್ವಜನಿಕರಿಗೆ ಮಾರಲಾಗುವ ಟಿಕೇಟ್‌ ದರಗಳು 200 ರುಪಾಯಿಯಿಂದ 3 ಸಾವಿರದವರೆಗಿದೆ. ಮಹಿಳೆಯರಿಗೆ ಮಾತ್ರ ಮೀಸಲಾದ ಸ್ಟ್ಯಾಂಡ್‌ ಟಿಕೇಟಿನ ದರ 200 ರುಪಾಯಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X