ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಐಟಿ ಅಣ್ಣಂದಿರಾ,ರಕ್ಷಣೆ-ಆರೋಗ್ಯಕ್ಷೇತ್ರದತ್ತಲೂ ಗಮನ ಕೊಡಿ’

By Staff
|
Google Oneindia Kannada News

‘ಐಟಿ ಅಣ್ಣಂದಿರಾ,ರಕ್ಷಣೆ-ಆರೋಗ್ಯಕ್ಷೇತ್ರದತ್ತಲೂ ಗಮನ ಕೊಡಿ’
ಕರ್ನಾಟಕ ದೇಶದ ನಂ.1 ಐಟಿ ರಾಜ್ಯ- ಕೇಂದ್ರ ಸಚಿವರ ಶ್ಲಾಘನೆ

ಬೆಂಗಳೂರು: ಟೆಲಿಫೋನು ಇ- ಆಡಳಿತ ಹಾಗೂ ಆರ್ಥಿಕ ವಲಯ ಮಾತ್ರವಲ್ಲದೆ ಜನರಿಗೆ ಅತ್ಯಗತ್ಯವಿರುವ ರಕ್ಷಣೆ, ಬಳಕೆದಾರರ ವಿಭಾಗ, ಆರೋಗ್ಯದಂತಹ ವಿಷಯಗಳ ಬಗ್ಗೆಯೂ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಗಮನ ಹರಿಸಬೇಕು ಎಂದು ಕೇಂದ್ರ ಸರಕಾರವು ಐಟಿ ಕ್ಷೇತ್ರಕ್ಕೆ ಕರೆ ನೀಡಿದೆ.

ಬೆಂಗಳೂರು ಐಟಿ ಮೇಳದ ನಾಲ್ಕನೇ ದಿನವಾದ ಮಂಗಳವಾರ, ಇ- ಆಡಳಿತ ಸಮಾವೇಶದಲ್ಲಿ ಮಾತನಾಡಿದ ಕೇಂದ್ರದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಇಲಾಖೆಯ ರಾಜ್ಯ ಸಚಿವ ಎಸ್‌. ತಿರುನವುಕ್ಕರಸರ್‌ ಐಟಿ ಕಂಪೆನಿಗಳು ಮೌಲ್ಯ ಆಧಾರಿತ ಸೇವೆಯನ್ನು ಒದಗಿಸಬೇಕು ಎಂದರು.

ಸಿಸ್ಟಂ ಇಂಟಿಗ್ರೇಶನ್‌ , ಪ್ಯಾಕೇಜ್‌ ಇಂಪ್ಲಿಮೆಂಟೇಶ ನ್‌ ಮತ್ತು ಐಟಿಔಟ್‌ ಸೋರ್ಸಿಂಗ್‌ನಂತಹ ಕೆಲಸಗಳತ್ತ ಐಟಿ ಗಮನ ಹರಿಸಬೇಕು. ಇಷ್ಟರವರೆಗೆ ಸಾಫ್ಟ್‌ವೇರ್‌ ವ್ಯವಹಾರಗಳು ಆರ್ಥಿಕ ವಲಯ, ಟೆಲಿಕಾಂ ಮತ್ತು ಉತ್ಪನ್ನ ವಲಯದಲ್ಲಿ ಮಾತ್ರ ಇದ್ದವು. ಆದರೆ ಈಗ ಬಿಪಿಒ ( business process outsourcing) ಕಂಪೆನಿಗಳು ಐಟಿಗೆ ಹೊಸ ಆಯಾಮವನ್ನು ನೀಡಲಿವೆ ಎಂದು ಸಚಿವರು ಅಭಿಪ್ರಾಯಪಟ್ಟರು.

ದೇಶದಲ್ಲಿ ಪ್ರತಿ ವಾರ ಸರಾಸರಿ ಹತ್ತು ಐಟಿ ಕಂಪೆನಿಗಳು ಹುಟ್ಟಿಕೊಂಡರೆ ಅವುಗಳಲ್ಲಿ ಐದು ಕಂಪೆನಿಗಳು ಬೆಂಗಳೂರನ್ನೇ ಆರಿಸಿಕೊಳ್ಳುತ್ತವೆ ಎಂದ ಸಚಿವರು, ಕರ್ನಾಟಕವು ದೇಶದ ನಂ. 1 ಐಟಿ ರಾಜ್ಯವಾಗಿದೆ ಎಂದು ಶ್ಲಾಘಿಸಿದರು

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X