ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕನ್ನಡಿಗರಿಗೆ ಇರುವುದೊಂದೇ ಕನ್ನಡ ವಿವಿ, ಅದಕ್ಕೆ ನೆರವು ನೀಡಿ’

By Staff
|
Google Oneindia Kannada News

‘ಕನ್ನಡಿಗರಿಗೆ ಇರುವುದೊಂದೇ ಕನ್ನಡ ವಿವಿ, ಅದಕ್ಕೆ ನೆರವು ನೀಡಿ’
ಪ್ರಸಿದ್ಧ ಹಂಪಿ ಉತ್ಸವಕ್ಕೆ ಚಾಲನೆ, ವಿಜಯನಗರ ವೈಭವ ಪುನರುತ್ಥಾನಕ್ಕೆ ಚಿಂತನೆ

ಕನ್ನಡ ವಿವಿ, ಕಮಲಾಪುರ : ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿಗೋಸುಗ ಕನ್ನಡಿಗರು ಉದಾರ ನೆರವು ನೀಡುವಂತೆ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಕರೆ ನೀಡಿದ್ದಾರೆ.

ಕನ್ನಡಿಗರಿಗೆ ಇರುವುದು ಒಂದೇ ವಿಶ್ವ ವಿದ್ಯಾಲಯ. ಆ ವಿಶ್ವವಿದ್ಯಾಲಯವನ್ನು ಉಳಿಸಲು ಸಮಸ್ತ ಕನ್ನಡಿಗರು ಉದಾರ ನೆರವು ನೀಡಲು ಮುಂದಾಗಬೇಕು ಎಂದು ಮುಖ್ಯಮಂತ್ರಿ ಕೃಷ್ಣ ಸೋಮವಾರ (ನ.3) ಹೇಳಿದರು. ಹಂಪಿ ವಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷ್ಣ ಮಾತನಾಡುತ್ತಿದ್ದರು. ದಶಮಾನೋತ್ಸವ ಕಟ್ಟಡ, ವಾಲ್ಮೀಕಿ ಅಧ್ಯಯನ ಪೀಠ ಉದ್ಘಾಟನೆ, ನಾದಲೀಲೆ ಸಂಗೀತ ವಿಭಾಗದ ಕಟ್ಟಡ ಶಿಲಾನ್ಯಾಸ ಹಾಗೂ 30 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನೆರವೇರಿತು.

ನಾಡು ನುಡಿ ಹಾಗೂ ನೆಲ ಜಲಗಳ ಸೇವೆಗಾಗಿ ಹಂಪಿ ವಿವಿ ಶ್ರಮಿಸುತ್ತಿದೆ. ಬೋಧನೆ, ಕಮ್ಮಟ, ಸಂವಾದಗಳ ಮೂಲಕ ವರ್ಷವಿಡೀ ಕನ್ನಡಿಗರೊಂದಿಗೆ ವಿವಿ ಸಂಪರ್ಕವಿಟ್ಟುಕೊಂಡಿದೆ. ಜನಪರ ವಿಶ್ವ ವಿದ್ಯಾಲಯಕ್ಕೆ ಬರದ ಕಾರಣ ಸರ್ಕಾರ ಹೆಚ್ಚಿನ ಅನುದಾನ ನೀಡಲಾಗುತ್ತಿಲ್ಲ . ವಿವಿಗೆ ಹೆಚ್ಚಿನ ನೆರವು ನೀಡುವ ಕುರಿತು 2004ನೇ ಇಸವಿಯ ಜನವರಿಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೃಷ್ಣ ಹೇಳಿದರು.

ವಿಜಯನಗರ ವೈಭವದ ಪುನರುಜ್ಜೀವನ

ವಿಜಯನಗರ ಸಾಮ್ರಾಜ್ಯದ ವೈಭವದ ಪುನರುಜ್ಜೀವನಕ್ಕಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು , ಹಂಪಿ ಉತ್ಸವ ಅಂತಹ ಕಾರ್ಯಕ್ರಮಗಳಲ್ಲಿ ಪ್ರಮುಖವಾದುದು ಎಂದು ಮುಖ್ಯಮಂತ್ರಿ ಕೃಷ್ಣ ಅಭಿಪ್ರಾಯಪಟ್ಟರು. ಸೋಮವಾರ ಸಂಜೆ ಪ್ರಸಿದ್ಧ ಹಂಪಿ ಉತ್ಸವಕ್ಕೆ ಚಾಲನೆ ನೀಡಿ ಕೃಷ್ಣ ಮಾತನಾಡುತ್ತಿದ್ದರು.

ಹಂಪಿ ಉತ್ಸವದ ಮೂಲಕ ಜನರಲ್ಲಿ ಇತಿಹಾಸ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸ ನಡೆಸಲಾಗುತ್ತಿದೆ. ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯಗಳ ಮೆಲುಕು ಹಂಪಿ ಉತ್ಸವದಿಂದ ಸಾಧ್ಯವಾಗುತ್ತದೆ ಎಂದು ಕೃಷ್ಣ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X